BBK 12: ದೃಷ್ಟಿಬೊಟ್ಟು ಧಾರಾವಾಹಿಯಿಂದ ಹೊರಬಂದ ವಿಜಯ್ ಸೂರ್ಯ: ಬಿಗ್ ಬಾಸ್ಗೆ ಎಂಟ್ರಿ..?
ರೋಚಕ ಘಟ್ಟ ತಲುಪಿರುವ ದೃಷ್ಟಿಬೊಟ್ಟು ಧಾರಾವಾಹಿಯಿಂದ ವಿಜಯ್ ಸೂರ್ಯ ಹೊರಬಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್ ಹಬ್ಬಿದೆ. ಅತ್ತ ಬಿಗ್ ಬಾಸ್ 12 ಇನ್ನೇನು ಶುರುವಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿ ವಿಜಯ್ ಸೂರ್ಯ ಬಿಗ್ ಬಾಸ್ ಮನೆ ಸೇರ್ತಾರೆ ಅಂತ ಫ್ಯಾನ್ಸ್ ಹೇಳುತ್ತಿದ್ದಾರೆ.
Vijay Surya Bigg Boss Kannada 12 -
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೃಷ್ಟಿಬೊಟ್ಟು (Drishti Bottu) ಧಾರಾವಾಹಿ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿದೆ. ಈ ಸೀರಿಯಲ್‌ನಲ್ಲೀಗ ಟ್ವಿಸ್ಟ್‌ಗಳ ಮೇಲೆ ಟ್ವಿಸ್ ನೀಡಲಾಗುತ್ತಿದೆ. ಸೀರಿಯಲ್ ವೀಕ್ಷಿಸುವವರಿಗೆ ಈ ಕಥೆ ಕುತೂಹಲ ಕೆರಳಿಸುತ್ತಿದೆ. ದತ್ತ ಭಾಯ್ ಪಾತ್ರದಲ್ಲಿ ವಿಜಯ್ ಸೂರ್ಯ ಮಿಂಚುತ್ತಿದ್ದಾರೆ. ದೃಷ್ಟಿಯ ಬಣ್ಣ ಹಾಗೂ ಸತ್ಯದ ಅನಾವರಣ ಆಗಿರುವುದು ಕಥೆಯನ್ನು ನೆಕ್ಸ್ಟ್ ಲೆವೆಲ್ಗೆ ಕೊಂಡೊಯ್ಯಿದಿದೆ. ಹೀಗಿರುವಾಗಲೇ ಈ ಧಾರಾವಾಹಿ ಕುರಿತು ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ರೋಚಕ ಘಟ್ಟ ತಲುಪಿರುವ ದೃಷ್ಟಿಬೊಟ್ಟು ಧಾರಾವಾಹಿಯಿಂದ ವಿಜಯ್ ಸೂರ್ಯ ಹೊರಬಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್ ಹಬ್ಬಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ಸಂಜೆ 6 ಗಂಟೆಗೆ ದೃಷ್ಟಿಬೊಟ್ಟು ಪ್ರಸಾರವಾಗುತ್ತಿದೆ. ದತ್ತ ಭಾಯ್ ಪಾತ್ರಕ್ಕೆ ವಿಜಯ್ ಸೂರ್ಯ ಜೀವ ತುಂಬಿದ್ದಾರೆ. ಆರಂಭದಲ್ಲಿ ರೌಡಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಈಗ ಲವ್ವರ್ ಬಾಯ್ ಆಗಿದ್ದಾರೆ. ದೃಷ್ಟಿಯ ನಿಜರೂಪ ಅನಾವರಣಗೊಂಡಿರುವ ಕಾರಣ ಈ ಧಾರಾವಾಹಿ ಮುಕ್ತಾಯವಾಗುತ್ತಿದೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ವಿಜಯ್ ಸೂರ್ಯ ಕಡೆಯಿಂದಾಗಲಿ, ‘ದೃಷ್ಟಿಬೊಟ್ಟು’ ತಂಡದ ಕಡೆಯಿಂದಾಗಲಿ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ವಿಜಯ್ ಸೂರ್ಯ, ದೃಷ್ಟಿಬೊಟ್ಟು ಸೀರಿಯಲ್ ನಿಂದ ಹೊರಗೆ ಬಂದಿದ್ದಾರೆ ಎನ್ನುವ ಸುದ್ದಿ ಕೇಳಿ ಫ್ಯಾನ್ಸ್, ಗೆಸ್ ಶುರು ಮಾಡಿದ್ದಾರೆ. ಬಿಗ್ ಬಾಸ್ 12 ಇನ್ನೇನು ಶುರುವಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿ ವಿಜಯ್ ಸೂರ್ಯ ಬಿಗ್ ಬಾಸ್ ಮನೆ ಸೇರ್ತಾರೆ ಅಂತ ಫ್ಯಾನ್ಸ್ ಹೇಳುತ್ತಿದ್ದಾರೆ. ಬಿಗ್ ಬಾಸ್ ಕನ್ನಡ 12 ಸೆಪ್ಟೆಂಬರ್ 18 ರಿಂದ ಶುರುವಾಗಲಿದೆ. ಬಿಗ್ ಬಾಸ್ ಆರಂಭಕ್ಕೂ ಮುನ್ನ ಕೆಲ ಸೀರಿಯಲ್‌ಗಳ ಸಮಯ ಬದಲಾವಣೆ ಆಗಲಿದೆ, ಒಂದೆರಡು ಧಾರಾವಾಹಿಗಳು ಮುಕ್ತಾಯವಾಗಲಿದೆ. ಮುಕ್ತಾಯವಾಗಲಿರುವ ಧಾರಾವಾಹಿಯಲ್ಲಿ ದೃಷ್ಟಿಬೊಟ್ಟು ಕೂಡ ಒಂದು ಎಂದು ಹೇಳಲಾಗಿದೆ.
Bigg Boss Telugu: ಬಿಗ್ ಸರ್ಪ್ರೈಸ್: ಬಿಗ್ ಬಾಸ್ ತೆಲುಗು ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಂಜನಾ ಗಲ್ರಾನಿ
ವಿಜಯ್ ಸೂರ್ಯ, ಅಗ್ನಿಸಾಕ್ಷಿ ಸೀರಿಯಲ್ ಗಿಂತ ಮುನ್ನ ಸೀರಿಯಲ್ ಹಾಗೂ ಸಿನಿಮಾ ಮಾಡಿದರೂ ಕಲರ್ಸ್ ಕನ್ನಡದ ಅಗ್ನಿಸಾಕ್ಷಿ ಅವರಿಗೆ ಬ್ರೇಕ್ ನೀಡಿತ್ತು. ಅದಾದ್ಮೇಲೆ ಕೆಲ ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ಸೂರ್ಯ, ಈಗ ದೃಷ್ಟಿಬೊಟ್ಟು ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.