Arjun Tendulkar: ಸದ್ದಿಲ್ಲದೆ ಸಾನಿಯಾ ಜತೆ ಎಂಗೇಜ್ ಆದ ಸಚಿನ್ ಪುತ್ರ ಅರ್ಜುನ್
Arjun engaged Saaniya Chandok: ರೆಡ್-ಬಾಲ್ ಕ್ರಿಕೆಟ್‌ನಲ್ಲಿ, ಅರ್ಜುನ್ 17 ಪಂದ್ಯಗಳಲ್ಲಿ ಆಡಿದ್ದಾರೆ. ಈ ಪೈಕಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿದಂತೆ 532 ರನ್ ಗಳಿಸಿದ್ದಾರೆ. ಮತ್ತು 37 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಒಂದು ಐದು ವಿಕೆಟ್ ಗೊಂಚಲು ಮತ್ತು ಎರಡು ನಾಲ್ಕು ವಿಕೆಟ್ ಗೊಂಚಲು ಸೇರಿವೆ.


ಮುಂಬಯಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರು ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಅರ್ಜುನ್ ತೆಂಡೂಲ್ಕರ್ ಖ್ಯಾತ ಉದ್ಯಮಿ ರವಿ ಘಾಯ್ (Ravi Ghai) ಅವರ ಮೊಮ್ಮಗಳಾದ ಸಾನಿಯಾ ಚಂದೋಕ್ (Sania Chandok) ಅವರೊಂದಿಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಆಪ್ತ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಖಾಸಗಿ ಸಮಾರಂಭದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನಡೆದಿದೆ.
25 ವರ್ಷದ ಅರ್ಜುನ್ ಎಡಗೈ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಅರ್ಜುನ್ ತೆಂಡೂಲ್ಕರ್ ದೇಶೀಯ ಕ್ರಿಕೆಟ್‌ನಲ್ಲಿ ಗೋವಾವನ್ನು ಪ್ರತಿನಿಧಿಸುತ್ತಾರೆ. ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರವೂ ಆಡಿದ್ದಾರೆ. ಅವರು 2020/21 ಋತುವಿನಲ್ಲಿ ಮುಂಬೈ ಜತೆ ತಮ್ಮ ದೇಶೀಯ ವೃತ್ತಿಜೀವನವನ್ನು ಪ್ರಾರಂಭಿಸಿರು. ಹರಿಯಾಣ ವಿರುದ್ಧದ T20 ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. ಅದಕ್ಕೂ ಮೊದಲು, ಅವರು ಜೂನಿಯರ್ ಮಟ್ಟದಲ್ಲಿ ಮುಂಬೈಯನ್ನು ಪ್ರತಿನಿಧಿಸಿದ್ದರು. ಮತ್ತು ಭಾರತ U19 ತಂಡದಲ್ಲಿಯೂ ಕಾಣಿಸಿಕೊಂಡಿದ್ದರು. 2022/23 ಋತುವಿನಲ್ಲಿ, ಅವರು ಗೋವಾಕ್ಕೆ ತೆರಳಿದರು. ಅಲ್ಲಿ ಅವರು ತಮ್ಮ ಪ್ರಥಮ ದರ್ಜೆ ಮತ್ತು ಲಿಸ್ಟ್ A ಗೆ ಪದಾರ್ಪಣೆ ಮಾಡಿದರು.
ರೆಡ್-ಬಾಲ್ ಕ್ರಿಕೆಟ್‌ನಲ್ಲಿ, ಅರ್ಜುನ್ 17 ಪಂದ್ಯಗಳಲ್ಲಿ ಆಡಿದ್ದಾರೆ. ಈ ಪೈಕಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿದಂತೆ 532 ರನ್ ಗಳಿಸಿದ್ದಾರೆ. ಮತ್ತು 37 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಒಂದು ಐದು ವಿಕೆಟ್ ಗೊಂಚಲು ಮತ್ತು ಎರಡು ನಾಲ್ಕು ವಿಕೆಟ್ ಗೊಂಚಲು ಸೇರಿವೆ.
ಸಾನಿಯಾ ಚಂದೋಕ್ ಯಾರು?
ಸಾನಿಯಾ ಚಂದೋಕ್ ಮುಂಬೈನ ಪ್ರಮುಖ ವ್ಯಾಪಾರ ಕುಟುಂಬಗಳಲ್ಲಿ ಒಂದರಿಂದ ಬಂದವರು ಘಾಯ್ ಕುಟುಂಬವು ಆತಿಥ್ಯ ಮತ್ತು ಆಹಾರ ಉದ್ಯಮಗಳಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದ್ದು, ಇಂಟರ್ ಕಾಂಟಿನೆಂಟಲ್ ಹೋಟೆಲ್ ಮತ್ತು ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಬ್ರೂಕ್ಲಿನ್ ಕ್ರೀಮರಿಯನ್ನು ಹೊಂದಿದೆ. ಅಧಿಕೃತ ಭಾರತೀಯ ಸರ್ಕಾರಿ ದಾಖಲೆಗಳ ಪ್ರಕಾರ (ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ), ಸಾನಿಯಾ ಚಾಂದೋಕ್ ಮುಂಬೈ ಮೂಲದ ಶ್ರೀ ಪಾವ್ಸ್ ಪೆಟ್ ಸ್ಪಾ & ಸ್ಟೋರ್ LLP ಯಲ್ಲಿ ನಿಯೋಜಿತ ಪಾಲುದಾರ ಮತ್ತು ನಿರ್ದೇಶಕಿಯಾಗಿದ್ದಾರೆ.