ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gagana Bhari: ನಾಯಕಿಯಾದ ಮಹಾನಟಿ: ಕಿರುತೆರೆ ಲೋಕಕ್ಕೆ ರಾಜಕುಮಾರಿಯಾಗಿ ಬಂದ ಗಗನಾ

ತನ್ನ ಸಹಜ ಅಭಿನಯ, ಮುಗ್ಧ ನಟನೆಯ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಗಗನಾಗೆ ಈಗ ಝೀ ಕನ್ನಡ ಬಹುದೊಡ್ಡ ಆಫರ್ ನೀಡಿದೆ. ಹೊಚ್ಚ ಹೊಸ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಮಿಂಚೋದಕ್ಕೆ ಇವರು ಸಜ್ಜಾಗಿದ್ದಾರೆ. ಝೀ ಕನ್ನಡ ಹೊಸ ಚಾನೆಲ್ ಝೀ ಪವರ್ನಲ್ಲಿ ಪ್ರಸಾರವಾಗಲಿರುವ ರಾಜಕುಮಾರಿ ಸೀರಿಯಲ್ಗೆ ಗಗನಾ ಅವರು ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರೆ.

Gagana Bhari Rajakumari Serial

ಝೀ ಕನ್ನಡ ವಾಹಿನಿಯಲ್ಲಿ ಸದ್ಯ ಮಹಾನಟಿ (Mahanati 2) ಎರಡನೇ ಸೀಸನ್ ಯಶಸ್ವಿಯಾಗಿ ನಡೆಯುತ್ತಿದೆ. ಇದಕ್ಕೂ ಮುನ್ನ ಪೂರ್ಣಗೊಂಡ ಮೊದಲ ಸೀಸನ್​ನಲ್ಲಿ ಪ್ರಿಯಾಂಕಾ ಆಚಾರ್ ವಿನ್ ಆದರೂ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು ಗಗನಾ ಭಾರಿ. ಮಹಾನಟಿ ನಂತರ ಇವರು ಡಾನ್ಸ್ ಕರ್ನಾಟಕ ಡಾನ್ಸ್‌, ಭರ್ಜರಿ ಬ್ಯಾಚುಲರ್ಸ್‌ ಸೀಸನ್ 2ರಲ್ಲೂ ಭಾಗವಹಿಸುತ್ತಾರೆ. ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಲ್ಲಿ ಡ್ರೋನ್‌ ಪ್ರತಾಪ್‌ಗೆ ಜೋಡಿಯಾಗಿ ಮೂರನೇ ರನ್ನರ್ ಅಪ್ ಆದರು.

ತನ್ನ ಸಹಜ ಅಭಿನಯ, ಮುಗ್ಧ ನಟನೆಯ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಗಗನಾಗೆ ಈಗ ಝೀ ಕನ್ನಡ ಬಹುದೊಡ್ಡ ಆಫರ್ ನೀಡಿದೆ. ಹೊಚ್ಚ ಹೊಸ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಮಿಂಚೋದಕ್ಕೆ ಇವರು ಸಜ್ಜಾಗಿದ್ದಾರೆ. ಝೀ ಕನ್ನಡ ಹೊಸ ಚಾನೆಲ್ ಝೀ ಪವರ್​ನಲ್ಲಿ ಪ್ರಸಾರವಾಗಲಿರುವ ರಾಜಕುಮಾರಿ ಸೀರಿಯಲ್​ಗೆ ಗಗನಾ ಅವರು ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರೆ.

ಈಗಾಗಲೇ ಗಗನಾ ಹೊಸ ಸೀರಿಯಲ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್ ಆಗುತ್ತಿವೆ. ಇದು ಯಾವಾಗ ಆರಂಭವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ರಾಜಕುಮಾರಿ ಧಾರಾವಾಹಿ ಝೀ ಬಾಂಗ್ಲಾದ ಮಿಥೈ ಸೀರಿಯಲ್ ರಿಮೇಕ್ ಎಂದು ಹೇಳಲಾಗುತ್ತಿದೆ. ಈ ಧಾರಾವಾಹಿಯಲ್ಲಿ ಗಗನಾ ಲಂಗ ದಾವಣಿ ಧರಿಸಿ, ಎರಡು ಜಡೆ ಹಾಕಿರೋದು ವೈರಲ್ ಅಗಿರುವ ಫೋಟೊದಲ್ಲಿ ಕಾಣಿಸುತ್ತಿದೆ.

ಗಗನಾ ಭಾರಿ ಚಿತ್ರದುರ್ಗ ಮೂಲದವರು. ಮಧ್ಯಮ ವರ್ಗದ ಕುಟುಂಬದಿಂದ ಬಂದ ಇವರು ಎಂಜಿನಿಯರಿಂಗ್ ‍ಪದವಿಧರೆ. ಆದರೆ, ಗಗನಾಗೆ ಮೊದಲಿನಿಂದಲೂ ನಟನೆಯ ಮೇಲೆ ಒಲವಿತ್ತು. ಶಾಲಾ, ಕಾಲೇಜು ದಿನಗಳಲ್ಲೂ ಡಾನ್ಸ್‌, ಆ್ಯಕ್ಟಿಂಗ್ ಅಂತ ಎಲ್ಲದರಲ್ಲೂ ಭಾಗವಹಿಸುತ್ತಿದ್ದರು. ರಿಯಾಲಿಟಿ ಷೋ ವೇದಿಕೆಯಲ್ಲಿ ಹೇಳಿಕೊಂಡಂತೆ ಗಣೇಶನ ಹಬ್ಬದ ಸಮಯದಲ್ಲಿ ತಮಗೆ ಖುಷಿ ಬಂದ ಸ್ಟೆಪ್ ಹಾಕಿ ಡಾನ್ಸ್ ಮಾಡುತ್ತಿದ್ದರಂತೆ. ಓದು ಮುಗಿಸಿದ ನಂತರ ಅವರು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವಾಗ ಮಹಾನಟಿಗೆ ಆಡಿಷನ್ ಕೊಟ್ಟು ಸೆಲೆಕ್ಟ್ ಆದರು. ಬಳಿಕ ಐಟಿ ಕೆಲಸಕ್ಕೆ ರಿಸೈನ್ ಮಾಡಿ ಈಗ ತಮ್ಮ ನೆಚ್ಚಿನ ನಟನಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ.

Shishir Shastry: ಬಿಗ್ ಬಾಸ್ ಶಿಶಿರ್ ಶಾಸ್ತ್ರೀ ಮದುವೆ ಬಗ್ಗೆ ಹೊರಬಿತ್ತು ದೊಡ್ಡ ಸುದ್ದಿ