ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mokshitha Pai: ಕೆಂಪು ಬಣ್ಣದ ಸೀರೆಯಲ್ಲಿ ಮಿರಮಿರ ಮಿಂಚಿದ ಮೋಕ್ಷಿತಾ ಪೈ: ವಿಡಿಯೋ ನೋಡಿ

ಕೆಂಪು ಬಣ್ಣದ ಸೀರೆ ಉಟ್ಟಿರುವ ಮೋಕ್ಷಿತಾ ಇದಕ್ಕೆ ಮ್ಯಾಚ್ ಆಗುವಂತಹ ಅದ್ಭುತವಾದ ಬ್ಲೌಸ್ ಹಾಕಿದ್ದಾರೆ. ಇದಕ್ಕೆ ಬಗೆಬಗೆಯ ಕಮೆಂಟ್ಗಳು ಬರುತ್ತಿದ್ದು, ನೀವು ಸಹಜ ಸುಂದರಿ, ಸೀರೆ ಮತ್ತು ಬ್ಲೌಸ್‌ ಎರಡೂ ಸಿಂಪಲ್ ಆಗಿ ಗ್ರ್ಯಾಂಡ್‌ ಆಗಿ ಕಾಣ್ತಾ ಇದ್ದೀರಿ ಎಂದರೆ ಮತ್ತೊಬ್ಬರು ನೀವು ಬಳ್ಳಿಯಂತೆ ಬಳುಕುತ್ತೀರಿ ನಿಮಗೆ ಯಾವ ಕಲರ್ ಸೀರೆ‌ ಹಾಕಿದ್ರೂ ಚೆನ್ನಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.

ಕೆಂಪು ಬಣ್ಣದ ಸೀರೆಯಲ್ಲಿ ಮಿರಮಿರ ಮಿಂಚಿದ ಮೋಕ್ಷಿತಾ ಪೈ

Mokshitha Pai

Profile Vinay Bhat May 7, 2025 7:56 AM

ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ (Mokshitha Pai) ಬಿಗ್‌ ಬಾಸ್ ಕನ್ನಡ ಸೀಸನ್ 11ರಲ್ಲೂ ಭಾಗವಹಿಸಿ, ಕನ್ನಡಿಗರ ಮನ ಗೆದ್ದಿದ್ದಾರೆ. ದೊಡ್ಮನೆಯೊಳಗೆ ತಮ್ಮ ಸೌಂದರ್ಯ, ಬೋಲ್ಡ್ ಆಗಿ ಆಟವಾಡುವ ರೀತಿ ಹಾಗೂ ನೇರವಾದ ಮಾತುಗಳಿಂದಲೇ ಜನರಿಗೆ ಇಷ್ಟವಾಗಿದ್ದರು. ಬಿಗ್‌ ಬಾಸ್ ಬಳಿಕ ನಟನೆಯಿಂದ ವಿರಾಮ ಪಡೆದಿರುವ ಇವರು ಸದ್ಯ ತಮ್ಮ ಫ್ರಿ ಟೈಮ್ ಎಂಜಾಯ್ ಮಾಡುತ್ತಿದ್ದಾರೆ. ಮನೆಯಿಂದ ಬಂದ ಮೇಲೆ ಮೋಕ್ಷಿತಾ ಪೈ ತಮ್ಮ ಗೆಳತಿ ಮಾನ್ಸಿ ಜೋಶಿ ಮದುವೆ, ಐಶ್ವರ್ಯಾ, ಶಿಶಿರ್ ಜೊತೆ ಟೆಂಪಲ್ ರನ್, ವಿವಿಧ ತಾಣಗಳಿಗೆ ಸ್ನೇಹಿತರ ಜೊತೆ ಟ್ರಾವೆಲ್ ಮಾಡುತ್ತಾ ಬ್ಯುಸಿಯಾಗಿ ಬಿಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗರುವ ಮೋಕ್ಷಿತಾ, ಆಗಾಗ ಪ್ರವಾಸಕ್ಕೆ ತೆರಳಿದ ಪೋಟೋಗಳನ್ನು ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಮೋಕ್ಷಿ ಆಭರಣ ತೊಟ್ಟು ಫೋಟೋಕ್ಕೆ ಪೋಸ್ ಕೊಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿತ್ತು. ಅಕಾಶ ನೀಲಿ ಬಣ್ಣದ ಸಿಂಪಲ್ ಸಾರಿ ಉಟ್ಟಿರುವ ಮೋಕ್ಷಿತಾ ಕೊರಳಿಗೆ ಚಿನ್ನ ಧರಿಸಿ ಫೋಟೋ ತೆಗೆಸಿಕೊಂಡಿದ್ದರು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.

ಕೆಂಪು ಬಣ್ಣದ ಸೀರೆ ಉಟ್ಟಿರುವ ಮೋಕ್ಷಿತಾ ಇದಕ್ಕೆ ಮ್ಯಾಚ್ ಆಗುವಂತಹ ಅದ್ಭುತವಾದ ಬ್ಲೌಸ್ ಹಾಕಿದ್ದಾರೆ. ಇದಕ್ಕೆ ಬಗೆಬಗೆಯ ಕಮೆಂಟ್​ಗಳು ಬರುತ್ತಿದ್ದು, ನೀವು ಸಹಜ ಸುಂದರಿ, ಸೀರೆ ಮತ್ತು ಬ್ಲೌಸ್‌ ಎರಡೂ ಸಿಂಪಲ್ ಆಗಿ ಗ್ರ್ಯಾಂಡ್‌ ಆಗಿ ಕಾಣ್ತಾ ಇದ್ದೀರಿ ಎಂದರೆ ಮತ್ತೊಬ್ಬರು ನೀವು ಬಳ್ಳಿಯಂತೆ ಬಳುಕುತ್ತೀರಿ ನಿಮಗೆ ಯಾವ ಕಲರ್ ಸೀರೆ‌ ಹಾಕಿದ್ರೂ ಚೆನ್ನಾಗಿ ಕಾಣುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆ ಮೋಕ್ಷಿಯ ಹೊಸ ಸೀರೆಯ ಫೋಟೋ- ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ.

View this post on Instagram A post shared by Mokshitha Pai (@mokshitha22)

ಬಿಗ್‌ಬಾಸ್‌ ನಂತರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿರುವ ಪಾರು ಆಗಾಗ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸುತ್ತಾರೆ. ಅಂದ ಹಾಗೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಮೋಕ್ಷಿತಾ ಪೈ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿದೆ. ‘ಮಿಡಲ್ ಕ್ಲಾಸ್ ರಾಮಾಯಣ' ಎಂಬುದು ಸಿನಿಮಾ ಹೆಸರಾಗಿದ್ದು, ಈ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.

Drone Prathap: ಬಂದ ಹಣವನ್ನೆಲ್ಲ ಡ್ರೋನ್ ಪ್ರತಾಪ್ ಏನು ಮಾಡಿದ್ರಂತೆ ಗೊತ್ತಾ?: ತಂದೆ ಹೇಳಿದ್ರು ಅಚ್ಚರಿ ವಿಚಾರ