Nandagokula Serial: ಕಿರುತೆರೆಯಲ್ಲಿ ಮತ್ತೆ ಬರುತ್ತಿದೆ ನಂದಗೋಕುಲ ಧಾರಾವಾಹಿ: ಯಾವಾಗಿನಿಂದ ಪ್ರಾರಂಭ?
ಈಗಾಗಲೇ ನಂದಗೋಕುಲ ಹೊಸ ಧಾರಾವಾಹಿಯ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಮಕ್ಕಳನ್ನು ಹೀರೋ ಮಾಡಲು ಹೋರಾಡುವ ಪ್ರತಿಯೊಬ್ಬ ತಂದೆಯ ಕತೆಯೇ ನಂದಗೋಕುಲ ಎನ್ನುವ ಕ್ಯಾಪ್ಷನ್‌ನೊಂದಿಗೆ ಪ್ರೋಮೋ ವೈರಲ್ ಆಗುತ್ತಿದೆ. ಜಾಹ್ನವಿ ಫಿಲ್ಮ್ ಎಂಫೈರ್ ಎಂಬ ಹೊಸ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿರೋ ಶ್ರವಂತ್ ಹಾಗೂ ಪತ್ನಿ ರಾಧಿಕಾ ಹೊಸ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ.

Nandagokula Serial

ಅಂದು ಈ ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಂದಗೋಕುಲ (Nandagokula Serial) ಧಾರಾವಾಹಿ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತ್ತು. ಇಂದು ರಾಕಿಂಗ್ ಸ್ಟಾರ್ ಆಗಿ ಬೆಳೆದಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಈ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಈಗ ನಂದಗೋಕುಲ ಎಂಬ ಇದೇ ಟೈಟಲ್ನಲ್ಲಿ ಹೊಸ ಕತೆ ಮೂಡಿ ಬರುತ್ತಿದೆ. ರಾಮಾಚಾರಿ, ದೃಷ್ಟಿಬೊಟ್ಟು, ನೂರು ಜನ್ಮಕ್ಕೂ ಅಂತಹ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಶ್ರವಂತ್ ಅವರ ಗರಡಿಯಿಂದ ಹೊಸ ಧಾರಾವಾಹಿ ಬರುತ್ತಿದೆ.
ಈಗಾಗಲೇ ಈ ಹೊಸ ಧಾರಾವಾಹಿಯ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಮಕ್ಕಳನ್ನು ಹೀರೋ ಮಾಡಲು ಹೋರಾಡುವ ಪ್ರತಿಯೊಬ್ಬ ತಂದೆಯ ಕತೆಯೇ ನಂದಗೋಕುಲ ಎನ್ನುವ ಕ್ಯಾಪ್ಷನ್‌ನೊಂದಿಗೆ ಪ್ರೋಮೋ ವೈರಲ್ ಆಗುತ್ತಿದೆ. ಬಹು ತಾರಾಗಣದ ಈ ಧಾರಾವಾಹಿಯಲ್ಲಿ ಝೀ ಕನ್ನಡದ ಗಟ್ಟಿಮೇಳದ ಧಾರಾವಾಹಿ ವಿಕ್ರಾಂತ್ ಪಾತ್ರಧಾರಿ ಅಭಿ ದಾಸ್ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಅರವಿಂದ್, ವಿಜಯಚಂದ್ರ, ಯಶವಂತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಜಾಹ್ನವಿ ಫಿಲ್ಮ್ ಎಂಫೈರ್ ಎಂಬ ಹೊಸ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿರೋ ಶ್ರವಂತ್ ಹಾಗೂ ಪತ್ನಿ ರಾಧಿಕಾ ಹೊಸ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ತಂದೆ ನಂದನ್ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂರು ಗಂಡು ಮಕ್ಕಳನ್ನು ತನ್ನಿಷ್ಟದಂತೆ ಬೆಳೆಸುವ ಪರಿಯನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ನಾನು ಹಾಕಿದ ಗೆರೆಯನ್ನು ನನ್ನ ಕುಟುಂಬದಲ್ಲಿ ಯಾರು ದಾಟುವುದಿಲ್ಲ, ಮುಂದೆ ಬರುವ ಸೊಸೆಯಂದಿರು ಕೂಡ ದಾಟುವುದಿಲ್ಲ. ನನ್ನ ಕುಟುಂಬ ಈಗ ಹೇಗೆ ಇದೆಯೋ ಮುಂದೆಯೂ ಹಾಗೇ ಹೆಸರಿಗೆ ತಕ್ಕಂತೆ ನಂದಗೋಕುಲವಾಗಿರುತ್ತದೆ ಎಂದು ಊರಿನವರ ಮುಂದೆ ನಂದನ್ ಸವಾಲು ಹಾಕುತ್ತಾನೆ.
ಈ ಧಾರಾವಾಹಿಯನ್ನು ತಮಿಳಿನ ಪಾಂಡಿಯನ್ ಸ್ಟೋರ್ಸ್ 2 ನ ಆಫೀಯಲ್ ರಿಮೇಕ್ ಎಂದು ಹೇಳಲಾಗುತ್ತಿದೆ. ಈ ಧಾರಾವಾಹಿ ತೆಲುಗಿಗೂ ರಿಮೇಕ್ ಆಗಿದ್ದು, ಇಲ್ಲು ಇಲ್ಲಲು ಪಿಲ್ಲಲು ಎಂಬ ಹೆಸರಿನೊಂದಿಗೆ ಪ್ರಸಾರವಾಗಿತ್ತು, ಇದೀಗ ಕನ್ನಡದಲ್ಲಿ ನಂದಗೋಕುಲ ಹೆಸರಿನಲ್ಲಿ ಪ್ರಸರವಾಗಲು ಸಜ್ಜಾಗಿದೆ.
ಈ ಧಾರಾವಾಹಿ ಬರುವ ಬೆನ್ನಲ್ಲೇ ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಒಂದಾದ ಭಾಗ್ಯಲಕ್ಷ್ಮೀ ಧಾರಾವಾಹಿ ಅಂತ್ಯವಾಗಲಿದೆ ಎಂದು ಮಾತು ಕೂಡ ಕೇಳಿ ಬರುತ್ತಿದೆ. ನಂದಗೋಕುಲಕ್ಕೆ ದಾರಿ ಮಾಡಿಕೊಟ್ಟು ಭಾಗ್ಯಲಕ್ಷ್ಮೀ ಮನೆಗೆ ಹೋಗ್ತಾಳಾ ಅನ್ನೋದನ್ನು ಇನ್ನಷ್ಟೇ ಕಾದು ನೋಡಬೇಕಿದೆ.
Amrutha Gowda: 2nd ಪಿಯುನಲ್ಲಿ ಡಿಸ್ಟಿಂಕ್ಷನ್ ಪಡೆದ ಭಾಗ್ಯ ಮಗಳು ತನ್ವಿ: ಇಲ್ಲಿದೆ ನೋಡಿ ಮಾರ್ಕ್ ಲಿಸ್ಟ್