ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajath Kishan: ಬಾಯ್ಸ್ vs ಗರ್ಲ್ಸ್ ಶೋಗೆ ಬೆಂಕಿಯಂತೆ ಎಂಟ್ರಿಕೊಟ್ಟ ರಜತ್: ವಿನಯ್ ಗೌಡ ಅಬ್ಸೆಂಟ್

ಬಾಯ್ಸ್ vs ಗರ್ಲ್ಸ್ ಶೋ ಈ ವಾರ ಮತ್ತೆ ಪ್ರಸಾರ ಕಾಣುತ್ತಿದೆ. ಈ ವಾರದ ಪ್ರೊಮೋ ರಿಲೀಸ್ ಆಗಿದ್ದು, ಇದರಲ್ಲಿ ರಜತ್ ಬೆಂಕಿ ಎಂಟ್ರಿ ಕೊಟ್ಟಿದ್ದಾರೆ. ಆದರೆ, ವಿನಯ್ ಗೌಡ ಮಾತ್ರ ಕಾಣಿಸುತ್ತಿಲ್ಲ. ವಿನಯ್ ಅವರು ಈ ವಾರ ಶೋಗೆ ಬಂದಿಲ್ವಾ? ಅಥವಾ ಶೋ ಅನ್ನೇ ಕ್ವಿಟ್ ಮಾಡಿದ್ದಾರಾ ಎಂಬುದು ಅನುಮಾನ ಮೂಡಿದೆ.

ಬೆಂಕಿಯಂತೆ ಎಂಟ್ರಿಕೊಟ್ಟ ರಜತ್: ವಿನಯ್  ಅಬ್ಸೆಂಟ್

Profile Vinay Bhat Apr 5, 2025 7:21 AM

ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನಯ್ ಗೌಡ (Vinay Gowda) ಹಾಗೂ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ಇಬ್ಬರೂ ರೀಲ್ಸ್ ಮಾಡುವುದಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ಗೊತ್ತೇ ಇದೆ. ರಜತ್ ಡಿ ಬಾಸ್ ಎಂದು ಬರೆದಿರುವ ಶರ್ಟ್ ಅನ್ನು ತೊಟ್ಟು ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಇವರಿಗೆ ವಿನಯ್ ಗೌಡ ಕೂಡ ಸಾಥ್ ನೀಡಿದ್ದರು. ಇದನ್ನು ರಜತ್ ಕಿಶನ್ ತನ್ನ ಇನ್​ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಆ ವಿಡಿಯೋಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಶಸ್ತ್ರಾಸ್ತ್ರ ಕಾಯ್ದೆ ಅಡಿ ಇಬ್ಬರನ್ನೂ ಬಂಧಿಸಲಾಗಿತ್ತು.

ಮನೋರಂಜನೆಗಾಗಿ ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ರಜತ್‌ ಹಾಗೂ ವಿನಯ್ ಈಗಾಗಲೇ ಬಿಡುಗಡೆ ಭಾಗ್ಯ ಸಿಕ್ಕಿದೆ. ಮೂರು ದಿನಗಳ ಜೈಲುವಾಸ ಅನುಭವಿಸಿದ್ದ ಇಬ್ಬರಿಗೂ ಈ ಪ್ರಕರಣದಲ್ಲಿ ರಿಲೀಫ್‌ ಸಿಕ್ಕಿದೆ. ಇವರಿಬ್ಬರು ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ಬಾಯ್ಸ್ vs ಗರ್ಲ್ಸ್ ಶೋನ ಸೆಟ್​ನಲ್ಲಿ ಈ ರೀಲ್ಸ್ ಮಾಡಿದ್ದರು. ಇದೀಗ ಜಾಮೀನಿನಲ್ಲಿರುವ ಇವರು ಶೂಟ್​ಗೆ ಮರಳಿದ್ದಾರೆ.

ಕಳೆದ ವಾರ ವಿನಯ್ ಹಾಗೂ ರಜತ್ ಇಲ್ಲದೆ ಬಾಯ್ಸ್ vs ಗರ್ಲ್ಸ್ ಶೋ ಶೂಟ್ ಮಾಡಿರಲಿಲ್ಲ. ಶನಿವಾರ ಮಜಾ ಟಾಕೀಸ್ ಸುದೀರ್ಘ ಸಂಚಿಕೆ ಪ್ರಸಾರ ಮಾಡಿದರೆ, ಭಾನುವಾರ ಭೀಮ ಸಿನಿಮಾ ಪ್ರಸಾರ ಕಂಡಿತು. ಈ ಕಾರಣಕ್ಕೆ ಬಾಯ್ಸ್ vs ಗರ್ಲ್ಸ್​ಗೆ ಯಾವುದೇ ತೊಂದರೆ ಉಂಟಾಗಿಲ್ಲ. ಈ ವಾರ ಶೋ ಮತ್ತೆ ಪ್ರಸಾರ ಕಾಣುತ್ತಿದೆ. ಈ ವಾರದ ಪ್ರೊಮೋ ರಿಲೀಸ್ ಆಗಿದ್ದು, ಇದರಲ್ಲಿ ರಜತ್ ಬೆಂಕಿ ಎಂಟ್ರಿ ಕೊಟ್ಟಿದ್ದಾರೆ. ಆದರೆ, ವಿನಯ್ ಗೌಡ ಮಾತ್ರ ಕಾಣಿಸುತ್ತಿಲ್ಲ.

ಬಾಯ್ಸ್ ವರ್ಸಸ್‌ ಗರ್ಲ್ಸ್‌ ವೇದಿಕೆ ಮೇಲೆ ಬೈಕ್ ಮೇಲೆ ಬಂದು ರಜತ್ ಡ್ಯಾನ್ಸ್ ಮಾಡಿದ್ದಾರೆ. ಇಷ್ಟು ದಿನ ಎರಡು ಬಣಗಳಾಗಿ ಪೈಪೋಟಿ ಮಾಡುತ್ತಿದ್ದ ಹುಡುಗ - ಹುಡುಗಿಯರು ಇದೀಗ ಇಬ್ಬರು ಒಟ್ಟಿಗೆ ಟೀಮ್ ಆಗಿ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದ್ದಾರೆ. ಇನ್ನು, ರಜತ್‌ನ ಗತ್ತು ಊರಿಗೆಲ್ಲಾ ಗೊತ್ತು ಎಂದು ಒಂದಷ್ಟು ಸ್ಪರ್ಧಿಗಳು ತಮಾಷೆಗೆ ಸಖತ್ ಆಗಿ ಕಾಲೆಳೆದಿದದ್ದಾರೆ. ಹೊಸ ಪ್ರೋಮೋದಲ್ಲಿ ರಜತ್ ಮಾತ್ರ ಕಾಣಿಸಿಕೊಂಡಿದ್ದು, ವಿನಯ್ ಗೌಡ ಕಾಣಿಸಿಕೊಂಡಿಲ್ಲ. ಹಾಗಾಗಿ, ಅವರು ಈ ವಾರ ಶೋಗೆ ಬಂದಿಲ್ವಾ? ಅಥವಾ ಶೋ ಅನ್ನೇ ಕ್ವಿಟ್ ಮಾಡಿದ್ದಾರಾ ಎಂಬುದು ಅನುಮಾನ ಮೂಡಿದೆ. ಈ ವಾರ ಶೋಗೆ ಅತಿಥಿಗಳಾಗಿ ಅದಿತಿ ಪ್ರಭುದೇವ ಹಾಗೂ ನೆನಪಿರಲಿ ಪ್ರೇಮ್ ಬಂದಿದ್ದಾರೆ.

Karna Serial: ಕರ್ಣನಿಗೆ ಜೋಡಿಯಾದ ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ: ಲೀಕ್ ಆಯ್ತು ಪ್ರೊಮೋ ಶೂಟ್