Vinay Gowda: ರಜತ್ ಪರಪ್ಪನ ಅಗ್ರಹಾರಕ್ಕೆ: ವಿನಯ್ ಗೌಡ ಬಚಾವ್ ಆಗಿದ್ದು ಹೇಗೆ?, ಇಲ್ಲಿದೆ ಕಾರಣ
Rajath Kishan- Vinay Gowda long video: ಕೋರ್ಟ್ ರಜತ್ ಅವರಿಗೆ ಏಪ್ರಿಲ್ 29ನೇ ತಾರೀಖಿನವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಆದರೆ, ಎರಡನೇ ಬಾರಿಗೆ ಬಂಧನದ ಭೀತಿಯಿಂದ ವಿನಯ್ ಗೌಡ ಬಚಾವ್ ಆಗಿದ್ದಾರೆ. ಇದು ಹೇಗೆ?, ಇಲ್ಲಿದೆ ನೋಡಿ ಕಾರಣ.

Vinay Gowda

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ (Rajath Kishan) ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಒಂದೇ ಒಂದು ರೀಲ್ಸ್ ಅವರನ್ನು ಮತ್ತೆ ಸಂಕಷ್ಟಕ್ಕೆ ದೂಡಿದೆ. ಕೇವಲ ರಜತ್ ಮಾತ್ರವಲ್ಲದೆ ವಿನಯ್ ಗೌಡ ಕೂಡ ಇದರಿಂದ ದೊಡ್ಡ ತೊಂದರೆಗೆ ಸಿಲುಕಿಕೊಂಡರು. ಜೈಲಿಗೆ ಹೋಗಬೇಕಾದ ಸಂದರ್ಭ ಕೂಡ ಬಂತು. ಶಸ್ತ್ರಾಸ್ತ್ರ ಕಾಯ್ದೆ ಅಡಿ ಇಬ್ಬರನ್ನೂ ಬಂಧಿಸಲಾಗಿತ್ತು. ಬಳಿಕ ಈ ಪ್ರಕರಣದಲ್ಲಿ ಇಬ್ಬರಿಗೂ ರಿಲೀಫ್ ಸಿಕ್ಕಿತ್ತು. ಆದರೀಗ ರಜತ್ ಮತ್ತೆ ಅರೆಸ್ಟ್ ಆಗಿದ್ದಾರೆ.
ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜನ್‌ನನ್ನು ಮತ್ತೆ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಈ ಕೇಸ್ ವಿಚಾರಣೆ ನಡೆಸಿದ ಕೋರ್ಟ್ ರಜತ್ ಅವರಿಗೆ ಏಪ್ರಿಲ್ 29ನೇ ತಾರೀಖಿನವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಆದರೆ, ಎರಡನೇ ಬಾರಿಗೆ ಬಂಧನದ ಭೀತಿಯಿಂದ ವಿನಯ್ ಗೌಡ ಬಚಾವ್ ಆಗಿದ್ದಾರೆ. ಇದು ಹೇಗೆ?, ಇಲ್ಲಿದೆ ನೋಡಿ ಕಾರಣ.
ಈ ಹಿಂದೆ ಈ ಕೇಸ್ನಲ್ಲಿ ಇದುವರೆಗೆ ಇವರು ರೀಲ್ಸ್ನಲ್ಲಿ ಬಳಕೆ ಮಾಡಿದ್ದ ಮಾರಕಾಸ್ತ್ರವನ್ನು ಪೊಲೀಸರ ಎದುರು ಹಾಜರು ಪಡಿಸಿಲ್ಲ. ಹೀಗಾಗಿ ಸಾಕ್ಷಿನಾಶ ಎಂದು ಸಹ ಪೋಲಿಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಅತ್ತ ಕೋರ್ಟ್ನಲ್ಲಿ ರಜತ್ ಹಾಘೂ ವಿನಯ್ಗೆ ಜಾಮೀನು ನೀಡಲಾಗಿತ್ತು. ಈ ವೇಳೆ ಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿತ್ತು. ಇದರಲ್ಲಿ ಅವರು ವಿಚಾರಣೆಗೆ ಹಾಜರಿ ಹಾಕಲೇಬೇಕು ಎಂಬುದು ಕೂಡ ಆಗಿತ್ತು.
Ajay Raj: ಹಿಟ್ಲರ್ ಕಲ್ಯಾಣ ನಟಿ ಪದ್ಮಿನಿ ದೇವನಹಳ್ಳಿಗೆ ಗಂಡು ಮಗು ಜನನ: ತಂದೆಯಾದ ಖುಷಿಯಲ್ಲಿ ಅಜಯ್ ರಾಜ್
ಆದರೆ, ರಜತ್ ಅವರು ಕೋರ್ಟ್ ವಿಚಾರಣೆಗೆ ಹಾಜರಿ ಹಾಕಿಲ್ಲ. ಇವರಿಗೆ ಜಾಮೀನು ರದ್ದು ಮಾಡಿ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಮನವಿ ಮಾಡಿದರು. ಆದರೆ, ಕೋರ್ಟ್ ವಾರೆಂಟ್ ಜಾರಿಯಾದ ಮೇಲೆ ವಿನಯ್ ಗೌಡ ಅವರು ವಿನಾಯಿತಿ ಅರ್ಜಿ ಹಾಕಿದ್ದರು. ಅತ್ತ ರಜತ್ ಕಿಶನ್ ಅವರು ವಿನಾಯಿತಿ ಅರ್ಜಿಯನ್ನು ಹಾಕಿರಲಿಲ್ಲ. ಹೀಗಾಗಿ ವಾರೆಂಟ್ ಜಾರಿ ಮಾಡಿದ್ದ ಕೋರ್ಟ್ ರಜತ್ ಅವರನ್ನು ಮಾತ್ರ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ.
‘‘ನನಗೆ ಕಣ್ಣು ಇನ್ಫೆಕ್ಷನ್ ಆಗಿತ್ತು. ಹಾಗಾಗಿ ನನಗೆ ಮೊದಲ ಹಿಯರಿಂಗ್ ದಿನ ಬರೋದಕ್ಕೆ ಆಗಿರಲಿಲ್ಲ. ಇವತ್ತು (ನಿನ್ನೆ) ಕೋರ್ಟ್‌ಗೆ ಪೊಲೀಸರು ಬರೋದಕ್ಕೆ ಹೇಳಿದ್ದರು. ಪ್ರತಿ 15 ದಿನಕ್ಕೊಮ್ಮೆ ಪೊಲೀಸ್ ಠಾಣೆಗೆ ಹೋಗಿ ಸೈನ್ ಮಾಡಿ ಬರ್ತಿದ್ದೆ. ನನ್ನ ವಾರೆಂಟ್ ರೀ ಕಾಲ್ ಮಾಡಿದ್ದಾರೆ. ನಾನು ನನ್ನ ಸಮಸ್ಯೆಯನ್ನು ನ್ಯಾಯಾಧೀಶರ ಮುಂದೆ ಹೇಳಿದ್ದೆ. ಮುಂದಿನ ಹಿಯರಿಂಗ್‌ಗೆ ತಪ್ಪದೇ ಹಾಜರಾಗ್ತೀನಿ. ಸದ್ಯ ನಾನು ದಂಡ ಕಟ್ಟಿ ನ್ಯಾಯಾಲಕ್ಕೆ ಮನವಿ ಮಾಡಿದ್ದೇನೆ. ಮುಂದಿನದ್ದು ನನ್ನ ವಕೀಲರು ನೋಡಿಕೊಳ್ತಾರೆ ಎಂದು ವಿನಯ್ ಹೇಳಿದ್ದಾರೆ.