ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಸುಮಾರು ಒಂದೂವರೆ ವಾರ ಆಗಿದೆ. ಮೂರನೇ ವಾರದಲ್ಲಿ ಮೊದಲ ಫಿನಾಲೆ ಇರುವ ಕಾರಣ ಸ್ಪರ್ಧಿಗಳು ತಾನು ಎಲ್ಲ ಕಡೆ ಗುರಿತಿಸಬೇಕೆಂದು ಮುನ್ನುಗ್ಗುತ್ತಿದ್ದಾರೆ. ಇದಕ್ಕಾಗಿ ಕೆಲವರು ರೂಲ್ಸ್ ಬ್ರೇಕ್ ಕೂಡ ಮಾಡಿ ಬೇಕಂತಲೇ ಜಗಳ ಆಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ, ಇವುಗಳ ಮಧ್ಯೆ ಮೊದಲ ದಿನ ದೊಡ್ಮನೆಯಿಂದ ಎಲಿಮಿನೇಟ್ ಆಗಿ ವೀಕೆಂಡ್ನಲ್ಲಿ ಪುನಃ ಮನೆ ಸೇರಿದ ರಕ್ಷಿತಾ ಶೆಟ್ಟಿ ಯಾವುದೇ ಡಬಲ್ ಗೇಮ್ ಆಡದೆ ವೀಕ್ಷಕರಿಗೆ ಹತ್ತಿರವಾಗುತ್ತಿದ್ದರು. ಆದರೀಗ ಅವರು ಮಾಡಿದ ಒಂದು ಸಣ್ಣ ತಪ್ಪು ಅವರಿಗೆ ಮುಳುವಾಗುವ ಸಾಧ್ಯತೆ ಇದೆ.
ತಮ್ಮ ಮುಗ್ಧತೆ ಹಾಗೂ ಮಾತಿನಿಂದ ಪ್ರೇಕ್ಷರನ್ನು ರಕ್ಷಿತಾ ನಗಿಸುತ್ತಿದ್ದಾರೆ. ಒಂದು ವಾರದಲ್ಲೇ ಇವರಿಗೆ ಅಪಾರ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಆರಂಭದಲ್ಲಿ ಇವರನ್ನು ಎಲಿಮಿನೇಟ್ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ವಿರುದ್ಧ ಹಾಗೂ ಮನೆಯ ಒಂಟಿ ಸದಸ್ಯರ ವಿರುದ್ಧ ಫ್ಯಾನ್ಸ್ ಕೋಪಗೊಂಡಿದ್ದರು. ಬಳಿಕ ಬಿಗ್ ಬಾಸ್ ಮನೆಗೆ ಇವರು ಪುನಃ ಬಂದಾಗ ಕೃಷ್ಣ ಸುಂದರಿ ಎಂದೆಲ್ಲ ಕರೆದರು. ಆದರೀಗ ರಕ್ಷಿತಾ ಮೇಲೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ರಕ್ಷಿತಾ ಮಾಡಿರುವ ಈ ಕೆಲಸದಿಂದ ಅವರಿಗೆ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದು ಖಚಿತ ಎನ್ನಲಾಗುತ್ತಿದೆ.
ಬಿಗ್ ಬಾಸ್ಗೆ ಸಂಬಂಧಿಸಿದ ವಿಡಿಯೋ ನೋಡಿ:
ರಕ್ಷಿತಾ ಶೆಟ್ಟಿ ಹಾಗಲಕಾಯಿಯ ಪದಾರ್ಥ ತಯಾರಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಸುರ ಕಾಕ್ರೋಚ್ ಸುಧಿ, ರಕ್ಷಿತಾ ತಯಾರಿಸುತ್ತಿದ್ದ ಅಡುಗೆಗೆ ಟೀ ಪುಡಿ ಸೇರಿಸುತ್ತಾರೆ. ಅಸಲಿಗೆ ಇಲ್ಲಿ ಅಸುರಾಧಿಪತಿಗೆ ಯಾವರೀತಿ ಬೇಕಾದರು ವರ್ತಿಸುವ ಅವಕಾಶ ನೀಡಲಾಗಿದೆ. ಆದರೆ, ಅಉರಾಧಿಪತಿಯ ಕೆಲಸದಿಂದ ಕೋಪಗೊಂಡ ರಕ್ಷಿತಾ ಶೆಟ್ಟಿ, ಪ್ರತಿಕಾರ ತೀರಿಸಿಕೊಳ್ಳಲು ಮುಂದಾದರು. ಜಂಟಿಗಳಾಗಿರುವ 12 ಜನರಿಗೆ ಚಿಕನ್ ಬೇಯಿಸಲಾಗುತ್ತಿತ್ತು. ಆಗ ರಕ್ಷಿತಾ ಶೆಟ್ಟಿ ಅವರು ಚಿಕನ್ ಬೇಯುತ್ತಿದ್ದ ಪಾತ್ರೆಗೆ ಟೀ ಸುರಿದಿದ್ದಾರೆ. ಅದರಿಂದಾಗಿ ತಿನ್ನುವ ಅನ್ನಕ್ಕೆ ಮಣ್ಣು ಹಾಕಿದಂತಾಯಿತು.
BBK 12: ಗ್ಲಾಸ್ ಪುಡಿ-ಪುಡಿ: ಧನುಷ್-ಸತೀಶ್-ಚಂದ್ರಪ್ರಭಾ ಗಲಾಟೆಗೆ ಇಡೀ ಬಿಗ್ ಬಾಸ್ ಮನೆಯೇ ಶೇಕ್
ಚಿಕನ್ ಅಡುಗೆ ಹಾಳು ಮಾಡಲು ಪ್ರಯತ್ನಿಸಿದ್ದಕ್ಕೆ ಮಂಜು ಭಾಷಿಣಿ, ಇದು 12 ಜನರ ಊಟವಾಗಿದೆ. ಊಟದ ವಿಷಯದಲ್ಲಿ ಈ ರೀತಿ ಎಲ್ಲಾ ಮಾಡಬೇಡಿ. ನಿಮ್ಮ ಆಹಾರ ಹಾಳು ಮಾಡಿದವರನ್ನು ಪ್ರಶ್ನೆ ಮಾಡಿ ಎಂದು ಹೇಳುತ್ತಾರೆ. ಇದೇ ವೇಳೆ ಅಲ್ಲಿಗೆ ಬಂದ ಅಸುರ ಕಾಕ್ರೋಚ್, ಅದು 12 ಜನರ ಊಟ ಎಂದು ಹೇಳುತ್ತಾರೆ. ಇದಕ್ಕೆ ಮರು ಉತ್ತರ ನೀಡಿದ ರಕ್ಷಿತಾ ಶೆಟ್ಟಿ, ನನ್ನ ಹೊಟ್ಟೆಗೆ ಬೆಲೆ ಇಲ್ಲವಾ ಎಂದು ಪ್ರಶ್ನೆ ಮಾಡುತ್ತಾರೆ.
ರಕ್ಷಿತಾ ಮಾಡಿದ ಈ ಕೆಲಸದಿಂದ ಇಡೀ ಮನೆ ಹೊತ್ತಿ ಉರಿದಿದೆ. ಅದರಲ್ಲೂ ಬಿಗ್ ಬಾಸ್ ಮನೆಯ ಜಂಟಿಗಳಿಗೆ ತೀವ್ರ ಕೋಪ ಬಂದಿದೆ. ಕಾಕ್ರೋಜ್ ಸುಧಿ ಒಬ್ಬರು ಮಾಡಿದ ತಪ್ಪಿಗಾಗಿ ರಕ್ಷಿತಾ ಶೆಟ್ಟಿ ಅವರು 12 ಜನರ ಊಟ ಕೆಡಿಸಬಾರದಾಗಿತ್ತು ಎಂದು ಎಲ್ಲರೂ ರೇಗಾಡಿದರು. ಆ ವೇಳೆ ಮಂಜು ಭಾಷಿಣಿ ಅವರು ರಕ್ಷಿತಾ ಶೆಟ್ಟಿಗೆ ಖಡಕ್ ಆಗಿ ಕ್ಲಾಸ್ ಕೂಡ ತೆಗೆದುಕೊಂಡರು. ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಊಟ ಹಾಳು ಮಾಡಿದಾಗ ವೀಕೆಂಡ್ನಲ್ಲಿ ಸುದೀಪ್ ಸ್ಪರ್ಧಿಗಳ ಮೈಚಳಿ ಬಿಡಿಸಿದ್ದರು. ಇದೀಗ ರಕ್ಷಿತಾ ಕೂಡ ಅದೇ ತಪ್ಪನ್ನು ಮಾಡಿರುವ ಕಾರಣ ಈ ವಾರದ ಅಂತ್ಯದಲ್ಲಿ ಕಿಚ್ಚನ ಕ್ಲಾಸ್ ಖಚಿತ ಎನ್ನಲಾಗುತ್ತಿದೆ.