ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 (Bharjari Bachelors Season 2) ಇತ್ತೀಚೆಗಷ್ಟೆ ಮುಕ್ತಾಯ ಕಂಡಿತು. ಇದರಲ್ಲಿ ಸುನೀಲ್ ವಿನ್ನರ್ ಆಗಿ ಹೊರಹೊಮ್ಮಿದರು. ತೀರ್ಪುಗಾರರಾದ ರವಿಚಂದ್ರನ್ ‘ಸುನೀಲ್ ವಿನ್ನರ್’ ಎಂದು ಘೋಷಿಸಿದರು. ಆ ಮೂಲಕ ಸುನೀಲ್ ಹಾಗೂ ಅಮ್ರಿಟಾ ಜೋಡಿ ವಿನ್ನರ್ ಪಟ್ಟಕ್ಕೇರಿತು. ವಿಜೇತರಿಗೆ ವಿನ್ನರ್ ಕಪ್ ಹಾಗೂ 15 ಲಕ್ಷ ರೂಪಾಯಿ ಕ್ಯಾಶ್ ಪ್ರೈಝ್ ನೀಡಲಾಗಿದೆ. ಇದೀಗ ಸುನೀಲ್ ತಮಗೆ ಸಿಕ್ಕ ಹಣವನ್ನು ಏನು ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸುನೀಲ್, ‘‘ಭರ್ಜರಿ ಬ್ಯಾಚ್ಯುಲರ್ಸ್ನಲ್ಲಿ ಗೆದ್ದ ಅಮೌಂಟ್ ಇನ್ನೂ ಬಂದಿಲ್ಲ. ಒಂದು ಮನೆ ಆಗಬೇಕು ಅಂತ ನಮಗೆ ಒಂದು ಕನಸು ಇರುತ್ತದೆ ಅಲ್ವಾ? ಅದೇ ರೀತಿ ಊರಿನಲ್ಲಿ ಮನೆ ಎಲ್ಲವೂ ಇದೆ. ಆದರೆ ನಮ್ಮ ಊರು ಗುಲ್ಬರ್ಗಾ, ಅಲ್ಲಿಂದ ಬೆಂಗಳೂರಿಗೆ ಬಂದಿದ್ದೇನೆ. ಬೆಂಗಳೂರಲ್ಲಿ ನನ್ನದೊಂದು ಮನೆ ಆಗಬೇಕು ಅನ್ನೋದು ನನ್ನ ಆಸೆ. ತುಂಬಾ ದಿನದಿಂದ ಇಲ್ಲಿ ಮನೆ ಮಾಡಬೇಕು ಅನ್ನೋ ಕನಸಿತ್ತು. ಆ ಕನಸಿಗೆ ಈ ಹಣ ಸ್ವಲ್ಪ ಸಹಾಯ ಆಗಿದೆ’’ ಎಂದು ಹೇಳಿದ್ದಾರೆ.
‘‘ಒಂದು ಶೋನ ವಿನ್ನಿಂಗ್ ಟ್ರೋಫಿ ಒಬ್ಬರ ಕೈನಲ್ಲಿ ಬರುತ್ತೆ ಅಂತಂದ್ರೆ, ತುಂಬಾ ಗ್ರೇಟ್. ಯಾಕಂದ್ರೆ ಸಾವಿರಾರು ಜನ ಆಡಿಷನ್ ಕೊಟ್ಟಿರುತ್ತಾರೆ. ಅದರಲ್ಲಿ ಒಂದು 30 ಜನ ಸೆಲೆಕ್ಟ್ ಆಗಿ, ಮೆಗಾ ಆಡಿಷನ್‌ನಲ್ಲಿ 15 ಜನ ಉಳಿದಿರುತ್ತೇವೆ. ಅದರಲ್ಲಿ 6 ತಿಂಗಳು ಇಲ್ಲ 5 ತಿಂಗಳು ಶೋನಲ್ಲಿ ಭಾಗವಹಿಸಿರುತ್ತೇವೆ. ಸರಿಗಮಪ ಸಿಂಗಿಂಗ್ ಶೋ ಗೆದ್ದಿದ್ದೆ. ಆ ಟ್ರೋಫಿ ಸಿಕ್ಕಾಗಲೇ ದೇವರ ಆಶೀರ್ವಾದ, ನಮ್ಮ ಅಪ್ಪ-ಅಮ್ಮ ಮಾಡಿರುವ ಪುಣ್ಯ ನಮಗೆ ತಟ್ಟಿದೆ ಅಂದುಕೊಂಡಿದ್ದೆ’’ ಎಂದು ಹೇಳಿಕೊಂಡಿದ್ದಾರೆ.
Bhagya Lakshmi Serial: ಆದೀಶ್ವರ್-ತಾಂಡವ್ನ ಹುಡುಕಿಕೊಂಡು ಆಫೀಸ್ಗೆ ಬಂದ ಭಾಗ್ಯ
ಇನ್ನು ಈ ಶೋನಲ್ಲಿ ಡ್ರೋನ್ ಪ್ರತಾಪ್ ಹಾಗೂ ಗಗನಾ ಜೋಡಿಗೆ ಎರಡನೇ ರನ್ನರ್ ಅಪ್ ಸ್ಥಾನ ಹಾಗೂ ರಕ್ಷಕ್ ಮತ್ತು ರಮೋಲಾ ಜೋಡಿಗೆ ಮೊದಲ ರನ್ನರ್ ಅಪ್ ಸ್ಥಾನ ಸಿಕ್ಕಿತು. ಪ್ರತಾಪ್ಗೆ 3 ಲಕ್ಷ ರೂಪಾಯಿ ಸಿಕ್ಕಿತು. ಅದರಲ್ಲಿ ಅರ್ಧ ಹಣವನ್ನು ಗಗನಾಗೆ ನೀಡೋದಾಗಿ ಪ್ರತಾಪ್ ವೇದಿಕೆ ಮೇಲೆ ಹೇಳಿದ್ದರು. ರಕ್ಷಕ್ಗೆ 10 ಲಕ್ಷ ರೂಪಾಯಿ ನೀಡಲಾಯಿತು. ಸೂರ್ಯ - ಅಭಿಜ್ಞಾ ಭಟ್ ಜೋಡಿಗೆ 1 ಲಕ್ಷ ರೂಪಾಯಿ ಕ್ಯಾಶ್ ಪ್ರೈಝ್ ನೀಡಲಾಗಿತ್ತು.