ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಆದೀಶ್ವರ್-ತಾಂಡವ್​ನ ಹುಡುಕಿಕೊಂಡು ಆಫೀಸ್​ಗೆ ಬಂದ ಭಾಗ್ಯ

ತಾಂಡವ್ ಹಾಗೂ ಆದೀಶ್ವರ್ ಕಾರಿಗೆ ಹತ್ತಿ ಪ್ರಾಜೆಕ್ಟ್ ಫೈಲ್ ಹಿಡಿದುಕೊಂಡು ಆಫೀಸ್ಗೆ ಹೋಗಲು ಮುಂದಾಗುತ್ತಾರೆ. ಆದರೆ, ತಾಂಡವ್ ಕಾರಿಗೆ ಹತ್ತುವಾಗ ಆ ಕೆಂಪು ಬಣ್ಣದ ಇಂಪಾರ್ಟೆಂಟ್ ಫೈಲ್ ಆತನ ಕೈ ಜಾರಿ ಕೆಳಗೆ ಬೀಳುತ್ತದೆ.. ತಾಂಡವ್ಗೆ ಇದು ಗೊತ್ತಾಗುವುದಿಲ್ಲ.. ಆದರೆ, ಭಾಗ್ಯ ಇದನ್ನು ನೋಡುತ್ತಾಳೆ.

ಆದೀಶ್ವರ್-ತಾಂಡವ್​ನ ಹುಡುಕಿಕೊಂಡು ಆಫೀಸ್​ಗೆ ಬಂದ ಭಾಗ್ಯ

Bhagya Lakshmi Serial

Profile Vinay Bhat Aug 7, 2025 12:08 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಒಂದರ ಹಿಂದೆ ಒಂದರಂತೆ ಮಹಾ ತಿರುವು ನೀಡಲಾಗುತ್ತಿದೆ. ಭಾಗ್ಯ ತಂಗಿ ಪೂಜಾಳ ಬರ್ತ್ ಡೇ ಪಾರ್ಟಿಯಲ್ಲಿ ಭಾಗ್ಯ-ತಾಂಡವ್ ಮುಖಾಮುಖಿ ಆಗಿ ಅಲ್ಲಿ ದೊಡ್ಡ ಜಗಳವೇ ನಡೆದು ಹೋಯಿತು. ಅಷ್ಟೇ ಅಲ್ಲದೆ ಭಾಗ್ಯ ತಾಳ್ಮೆ ಕಳೆದುಕೊಂಡು ಎಲ್ಲರ ಎದುರೇ ತಾಂಡವ್​ನ ಕೆನ್ನಗೆ ಬಾರಿಸಿದಳು. ಎಲ್ಲರೂ ಇಲ್ಲಿ ಭಾಗ್ಯಾಳದ್ದೇ ತಪ್ಪು ಎಂದು ಅಂದುಕೊಂಡರು. ಆದರೆ, ಮರುದಿನ ಕೆಲಸದವಳು ಬಂದು ಆದೀಶ್ವರ್ ಬಳಿ ನಿಜ ಹೇಳಿದ್ದಾಳೆ. ಭಾಗ್ಯಾಳದ್ದು ತಪ್ಪಿಲ್ಲ ತಾಂಡವ್-ಶ್ರೇಷ್ಠಾರದ್ದೇ ತಪ್ಪು ಎಂದು ಹೇಳಿದ್ದಾಳೆ.

ಬಳಿಕ ಆದೀ ಸ್ವತಃ ತಾಂಡವ್ ಮನೆ ಬಳಿ ಬಂದು ನಾವು ಒಂದುಕಡೆ ಹೋಗಬೇಕು ದಯವಿಟ್ಟು ನೀವಿಬ್ಬರೂ ಬನ್ನಿ ಎಂದು ಭಾಗ್ಯ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಷ್ಟೇ ಅಲ್ಲದೆ ಶ್ರೇಷ್ಠಾ-ತಾಂಡವ್ ನೀವು ಭಾಗ್ಯ ಬಳಿ ಕ್ಷಮೆ ಕೇಳಿ.. ಅಲ್ಲಿ ತಪ್ಪು ನಿಮ್ಮದೆ ಎಂದು ಆದೀ ಹೇಳಿದ್ದಾನೆ. ಆದರೆ, ಶ್ರೇಷ್ಠಾ ಇದು ಸಾಧ್ಯವೇ ಇಲ್ಲ ಎಂದು ಹೊರಟು ಹೋಗಿದ್ದಾಳೆ. ಬಳಿಕ ಆದೀ ಕ್ಷಮೆ ಕೇಳಿದ್ದಾನೆ.

ತಾಂಡವ್ ಮನೆ ಹೊರಗೆ ನಿಂತಿರುವಾಗ ಭಾಗ್ಯ ಕೆಲಸಕ್ಕೆಂದು ಹೊರಹೊರಡುತ್ತಾಳೆ. ಆಗ ತಾಂಡವ್ ಅಡ್ಡ ಬಂದು, ನಾನು-ಆದೀಶ್ವರ್ ಒಂದು ಪ್ರಾಜೆಕ್ಟ್​ನಲ್ಲಿ ವರ್ಕ್ ಮಾಡ್ತಾ ಇದ್ದೇವೆ.. ಈ ಹಿಂದೆ ನೀನು ನನ್ನ ಮಕ್ಕಳನ್ನ ನನ್ನಿಂದ ದೂರ ಮಾಡಿದೆ.. ಅಪ್ಪ-ಅಮ್ಮನನ್ನ ದೂರ ಮಾಡಿದೆ.. ನನ್ನ ಕೆಲಸ ಕಸಿದುಕೊಂಡೆ ಈಗ ಈ ಪ್ರಾಜೆಕ್ಟ್ ಮೇಲೆ ಕಣ್ಣು ಹಾಕಿದರೆ ಸರಿ ಇರಲ್ಲ ಎಂದು ಅವಾಜ್ ಹಾಕುತ್ತಾನೆ. ನನಗೆ ಬೇರೆಯವರ ತಟ್ಟೆ ಮೇಲೆ ಕಣ್ಣು ಹಾಕಿ ಅಭ್ಯಾಸ ಇಲ್ಲ ಎಂದು ಹೊರಡುತ್ತಾಳೆ.

ಅಸಲಿಗೆ ಭಾಗ್ಯ ಇಲ್ಲಿ ಹೊರಟಿರುವುದು ತಂಗಿ ಪೂಜಾ ಮನೆಗೆ. ಪೂಜಾ ಭಾಗ್ಯಾಳ ಸ್ಪೆಷಲ್ ಫುಡ್ ‘ಭಾಗೀಬಾತ್’ ಮಾಡಿ ತಾ ಎಂದು ಹೇಳಿದ್ದಳು ಅದನ್ನು ಕೊಡಲು ಭಾಗ್ಯ ರಾಮ್​ದಾಸ್ ಮನೆಗೆ ಹೋಗಿದ್ದಾಳೆ. ಆದರೆ, ಭಾಗ್ಯ ಇಲ್ಲಿಗೆ ಬಂದರೆ ಆಕೆಯನ್ನು ಒಳಗೆ ಬಿಡಬೇಡ ಎಂದು ಕನ್ನಿಕಾ ಸೆಕ್ಯುರಿಟಿ ಬಳಿ ಹೇಳಿದ್ದಾಳೆ. ಅದರಂತೆ ಭಾಗ್ಯ ಬಂದಾಗ ಆತ ಒಳಗೆ ಬಿಡುವುದಿಲ್ಲ.. ನೀವು ಯಾರು ಅಂತಾನೆ ಗೊತ್ತಿಲ್ಲ ಎಂದು ಹೇಳಿದ್ದಾನೆ.. ಪೂಜಾಗೆ ಕಾಲ್ ಮಾಡಿದರೂ ಆಕೆ ಬೇರೆ ಕೆಲಸದಲ್ಲಿ ಇರುವ ಕಾರಣ ರಿಸಿವ್ ಮಾಡಿಲ್ಲ.

ಇದೇ ಸಂದರ್ಭ ಮನೆಯ ಮಾಳಿಗೆಯಲ್ಲಿ ಆದೀಶ್ವರ್ ಹಾಗೂ ತಾಂಡವ್ ಪ್ರಾಜೆಕ್ಟ್ ಕುರಿತು ಮಾತನಾಡುತ್ತಾ ಇರುತ್ತಾರೆ.. ಅಲ್ಲಿ ಆದೀಶ್ವರ್ ತಾಂಡವ್ ಬಳಿ ಒಂದು ಕೆಂಪು ಬಣ್ಣದ ಫೈಲ್ ಕೊಟ್ಟು, ಈ ಫೈಲ್ ತುಂಬಾ ಇಂಪಾರ್ಟೆಂಟ್ ಇವತ್ತು ಪ್ರಾಜೆಕ್ಟ್ ಅಪ್ರೂವ್ ಆಗಬೇಕು ಎಂದರೆ ಈ ಫೈಲ್ ಬೇಕೇಬೇಕು.. ಇದನ್ನು ಮಿಸ್ ಮಾಡಲೇ ಬಾರದು ಎಂದು ಹೇಳಿದ್ದಾನೆ. ತಾಂಡವ್ ಒಕೆ ಎಂದು ಆ ಫೈಲ್ ತೆಗೆದುಕೊಂಡಿದ್ದಾನೆ. ಭಾಗ್ಯ ಮನೆಯ ಹೊರಗೆ ನಿಂತು ಇದನ್ನ ಗಮನಿಸಿದ್ದಾಳೆ.

ಬಳಿಕ ತಾಂಡವ್ ಹಾಗೂ ಆದೀಶ್ವರ್ ಕಾರಿಗೆ ಹತ್ತಿ ಪ್ರಾಜೆಕ್ಟ್ ಫೈಲ್ ಹಿಡಿದುಕೊಂಡು ಆಫೀಸ್​ಗೆ ಹೋಗಲು ಮುಂದಾಗುತ್ತಾರೆ. ಆದರೆ, ತಾಂಡವ್ ಕಾರಿಗೆ ಹತ್ತುವಾಗ ಆ ಕೆಂಪು ಬಣ್ಣದ ಇಂಪಾರ್ಟೆಂಟ್ ಫೈಲ್ ಆತನ ಕೈ ಜಾರಿ ಕೆಳಗೆ ಬೀಳುತ್ತದೆ.. ತಾಂಡವ್​ಗೆ ಇದು ಗೊತ್ತಾಗುವುದಿಲ್ಲ.. ಆದರೆ, ಭಾಗ್ಯ ಇದನ್ನು ನೋಡುತ್ತಾಳೆ. ಭಾಗ್ಯ ಕಾರಿನ ಬಳಿ ಹೋಗುವ ವೇಳೆ ಕಾರಿನಲ್ಲಿ ಅವರಿಗೆ ತೆರಳಿ ಆಗಿದೆ. ಭಾಗ್ಯ ತಾಂಡವ್​ಗೆ ಕಾಲ್ ಮಾಡಿ ಫೈಲ್ ಇಲ್ಲಿ ಬಿದ್ದಿದೆ ಎಂದು ಹೇಳಲು ಪ್ರಯತ್ನಿಸುತ್ತಾಳೆ.

ಆದರೆ, ತಾಂಡವ್ ಕೋಪಗೊಂಡು ಕಾಲ್ ಕಟ್ ಮಾಡುತ್ತಾನೆ.. ತಾಂಡವ್-ಆದೀ ಆಫೀಸ್​ಗೆ ತೆರಳಿ ಪ್ರಾಜೆಕ್ಟ್ ಕುರಿತು ಫಾರಿನ್ ಇನ್​ವೆಸ್ಟರ್​​ಗಳಿಗೆ ವಿವರಿಸಲು ಮುಂದಾಗುತ್ತಾರೆ. ಕೆಂಪು ಬಣ್ಣದ ಫೈಲ್​ನಲ್ಲಿರುವ ವಿಷಯವನ್ನು ಹೇಳಲು ಹೊರಟಾಗ ತಾಂಡವ್​ಗೆ ಆ ಫೈಲ್ ಕಾಣಿಸುವುದಿಲ್ಲ.. ತಾಂಡವ್ ಫುಲ್ ಟೆನ್ಶನ್ ಆಗುತ್ತಾನೆ. ಅತ್ತ ಭಾಗ್ಯ ಆ ಫೈಲ್​ನ ಅಗತ್ಯತೆ ಅರಿದು ಅದನ್ನು ಹಿಡಿದುಕೊಂಡು ಆಫೀಸ್​ಗೆ ಬಂದಿದ್ದಾಳೆ.



ಆದರೆ, ಆಫೀಸ್​ನಲ್ಲಿ ಭಾಗ್ಯಾಳನ್ನು ಸೆಕ್ಯುರಿಟಿ ಒಳಗೆ ಬಿಡುವುದಿಲ್ಲ.. ಆದೀಶ್ವರ್ ಅವರನ್ನು ನೋಡಬೇಕು.. ಅವರಿಗೆ ಈ ಫೈಲ್ ಕೊಡಬೇಕು ಎಂದು ಎಷ್ಟು ಹೇಳಿದರು ಆತ ಕೇಳುತ್ತಿಲ್ಲ.. ನನ್ಗೆ ಅವರು ಪರಿಚಯ.. ನಮ್ಮ ಸಂಬಂಧಿ ಅವರು.. ನನ್ನ ಹತ್ರ ಅವರ ನಂಬರ್ ಕೂಡ ಇದೆ ಎಂದು ತೋರಿಸುತ್ತಾಳೆ.. ಅದಕ್ಕೆ ಸೆಕ್ಯುರಿಟಿ, ಯಾರತ್ರ ಸುಳ್ಳು ಹೇಳ್ತಾ ಇದ್ದೀಯಾ.. ಈ ಆಫೀಸ್​ನ ಸೆಕ್ಯುರಿಟಿ ನಾನು ನನ್ನ ಹತ್ರನೇ ಅವರ ನಂಬರ್ ಇಲ್ಲ.. ಬೇಕಾದ್ರೆ ಫೈಲ್ ಇಲ್ಲಿ ಇಟ್ಟೋಗು ನಾನು ಕೊಡುತ್ತೇನೆ ಎಂದು ಹೇಳಿದ್ದಾನೆ.

ಸರಿ ಎಂದು ಭಾಗ್ಯ ಅಲ್ಲಿ ಫೈಲ್ ಇಟ್ಟು ಹೊರಡಲು ಮುಂದಾಗುತ್ತಾಳೆ. ಆಗ ಆಫೀಸ್​ನ ಕ್ಲೀನರ್ ಬರುತ್ತಾಳೆ.. ಅವಳ ಬಳಿ ಆ ಸೆಕ್ಯುರಿಟಿ ಈ ಫೈಲ್ ಅನ್ನು ಕಸಕ್ಕೆ ಹಾಕು ಎನ್ನುತ್ತಾನೆ. ಇದನ್ನ ಕಂಡ ಭಾಗ್ಯಾಗೆ ಕೋಪ ಬಂದಿದ್ದು, ಸೆಕ್ಯುರಿಟಿಯ ಮಾತು ಕೇಳದೆ ಆ ಫೈಲ್ ಹಿಡಿದುಕೊಂಡು ಆಫೀಸ್ ಒಳಗೆ ಹೋಗಿದ್ದಾಳೆ. ಸದ್ಯ ಇಲ್ಲಿದೆ ಸಂಚಿಕೆ ಮುಕ್ತಾಯಗೊಂಡಿದೆ. ಮುಂದಿನ ಸಂಚಿಕೆಯಲ್ಲಿ ಏನಾಗುತ್ತೆ ಎಂಬುದು ಕುತೂಹಲ ಕೆರಳಿಸಿದೆ. ಯಾಕೆಂದರೆ, ತಾಂಡವ್​ ಪ್ರಾಜೆಕ್ಟ್ ಕಂಪ್ಲಿಟ್ ಆಗಲು ಆ ಫೈಲ್ ಮುಖ್ಯ. ಹೀಗಾಗಿ ಭಾಗ್ಯಾಳ ಈ ಸಹಾಯವನ್ನು ತಾಂಡವ್ ಮತ್ತು ಆದೀ ಯಾವರೀತಿ ತೆಗೆದುಕೊಳ್ಳುತ್ತಾರೆ ಎಂಬುದು ನೋಡಬೇಕಿದೆ.

Amruthadhare Serial: ಕೊನೆಗೂ ಭೂಮಿಕಾ ಮುಂದೆ ಕಳಚಿಬಿತ್ತು ಶಕುಂತಲಾ ಮುಖವಾಡ: ರೋಚಕ ಘಟ್ಟದಲ್ಲಿ ಅಮೃತಧಾರೆ ಧಾರಾವಾಹಿ