ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಫುಡ್ ಬ್ಯುಸಿನೆಸ್ ಮಾಡಲು ಭಾಗ್ಯಾಗೆ ಸಿಗುತ್ತ ಲೈಸೆನ್ಸ್?: ರೋಚಕ ಘಟ್ಟದತ್ತ ಧಾರಾವಾಹಿ

ಮರುದಿನ ಭಾಗ್ಯ ಊಟದ ಆರ್ಡರ್ ಪಡೆದುಕೊಂಡು ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಆಹಾರ ಇಲಾಖೆಯ ಅಧಿಕಾರಿಗಳು ಬಂದು ಭಾಗ್ಯಳ ಮನೆ ಬಾಗಿಲು ಬಡಿದಿದ್ದಾರೆ. ನಾವು ಫುಡ್ ಇನ್ಸ್‌ಪೆಕ್ಟರ್, ನೀವು ಲೈಸನ್ಸ್ ಇಲ್ಲದೇ ಊಟ ತಯಾರಿಸಿ ಕೊಡುತ್ತಿದ್ದೀರಿ, ಇದಕ್ಕೆಲ್ಲಾ ಅನುಮತಿ ಪಡೆದುಕೊಳ್ಳಬೇಕು ಎಂದಿದ್ದಾರೆ.

ಫುಡ್ ಬ್ಯುಸಿನೆಸ್ ಮಾಡಲು ಭಾಗ್ಯಾಗೆ ಸಿಗುತ್ತ ಲೈಸೆನ್ಸ್?

Bhagya Lakshmi Serial

Profile Vinay Bhat Apr 15, 2025 11:56 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಗೆ ಮತ್ತೆ ದೊಡ್ಡ ಸಂಕಷ್ಟ ಬಂದೊದಗಿದೆ. ತನ್ನ ಹೊಟ್ಟೆ ಪಾಡಿಗಾಗಿ ಬೇರೆಯವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದ ಫುಡ್ ಬ್ಯುಸಿನೆಸ್ ಈಗ ಬಂದ್ ಆಗಿದೆ. ತಾಂಡವ್-ಶ್ರೇಷ್ಠಾ ಜೊತೆಗೆ ಭಾಗ್ಯಾಳ ಫುಡ್ ಬ್ಯುಸಿನೆಸ್ ಮುಗಿಸಲು ಕನ್ನಿಕಾ ಮಾಡಿದ ಮಾಸ್ಟರ್ ಪ್ಲ್ಯಾನ್ ಈ ಬಾರಿ ವರ್ಕ್ ಆಗಿದೆ. ಭಾಗ್ಯಾಳನ್ನು ಸೋಲಿಸಲು ಈ ಮೂವರು ಸೇರಿ ಮಾಡಿದ ಮಾಸ್ಟರ್ ಪ್ಲ್ಯಾನ್​ಗೆ ಭಾಗ್ಯ ಬಲಿಯಾಗಿದ್ದಾಳೆ. ಸದ್ಯ ಭಾಗ್ಯ ಫುಡ್ ಬ್ಯುಸಿನೆಸ್ ಮುಂದುವರೆಸಲು ಲೈಸನ್ಸ್​ಗೋಸ್ಕರ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾಗ್ಯಾಳನ್ನು ಹೇಗಾದರು ಮಾಡಿ ಸೋಲಿಸಬೇಕೆಂದು ತಾಂಡವ್-ಶ್ರೇಷ್ಠಾ ಇಬ್ಬರೂ ಪಣತೊಟ್ಟಿದ್ದರು. ಒಂದು ಪ್ಲ್ಯಾನ್ ಫ್ಲಾಫ್ ಆದ ಬೆನ್ನಲ್ಲೇ ಮತ್ತೊಂದು ದೊಡ್ಡ ಪ್ಲ್ಯಾನ್ ಮಾಡಿದ್ದಾರೆ. ಹೋಟೆಲ್ ಒಂದರಲ್ಲಿ ಶ್ರೇಷ್ಠಾ-ತಾಂಡವ್ ಹಾಗೂ ಕನ್ನಿಕಾ ಭೇಟಿ ಆಗಿದ್ದಾರೆ. ಇಲ್ಲಿ ಭಾಗ್ಯಾಳ ಬ್ಯುಸಿನೆಸ್ ನಡಿಬಾರದು, ಅವಳು ಬೀದಿಗೆ ಬರಬೇಕು.. ಅದಕ್ಕೆ ನಾನು ವ್ಯವಸ್ಥೆ ಮಾಡ್ತೇನೆ.. ಇನ್ಮುಂದೆ ಭಾಗ್ಯ ಫುಡ್ ಬ್ಯುಸಿನೆಸ್ ನಡಿಯಲ್ಲ ಎಂದು ಕನ್ನಿಕಾ ಹೇಳುತ್ತಾಳೆ.

ಅದರಂತೆ ಮರುದಿನ ಭಾಗ್ಯ ಊಟದ ಆರ್ಡರ್ ಪಡೆದುಕೊಂಡು ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಆಹಾರ ಇಲಾಖೆಯ ಅಧಿಕಾರಿಗಳು ಬಂದು ಭಾಗ್ಯಳ ಮನೆ ಬಾಗಿಲು ಬಡಿದಿದ್ದಾರೆ. ನಾವು ಫುಡ್ ಇನ್ಸ್‌ಪೆಕ್ಟರ್, ನೀವು ಲೈಸನ್ಸ್ ಇಲ್ಲದೇ ಊಟ ತಯಾರಿಸಿ ಕೊಡುತ್ತಿದ್ದೀರಿ, ಇದಕ್ಕೆಲ್ಲಾ ಅನುಮತಿ ಪಡೆದುಕೊಳ್ಳಬೇಕು, ಇಲ್ಲವಾದರೆ ಊಟದ ಸರ್ವಿಸ್ ನೀಡುವ ಹಾಗಿಲ್ಲ ಎಂದು ಹೇಳಿ, ಇನ್ನು ಮುಂದೆ ಹೀಗೆ ಮಾಡುವಂತಿಲ್ಲ ಎಂದು ಎಚ್ಚರಿಸಿದ್ದಾರೆ.

ಫುಡ್​ಗೆ ಟೇಸ್ಟ್ ಪೌಡರ್, ಕಲರ್ ಏನೆಲ್ಲ ಹಾಕ್ತಾ ಇದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೆಲ್ಲ ಕೇಳಿ ಭಾಗ್ಯಾಗೆ ಮಾತೇ ಬಂದಿಲ್ಲ. ಇದಕ್ಕೆ ಉತ್ತರ ನೀಡಿದ ಭಾಗ್ಯ ಅಮ್ಮ, ಆತರ ಏನು ಮಾಡ್ತಿಲ್ಲ ನಾವು, ಸುಳ್ಳು ಹೇಳಿ ನಮಗೇನು ಆಗಬೇಕಾಗಿಲ್ಲ.. ಈ ರೀತಿಯ ವ್ಯಾಪಾರವನ್ನು ತುಂಬಾ ಜನ ಮಾಡ್ತಾರೆ.. ಅವರೆಲ್ಲರ ಹತ್ರ ಈ ಲೈಸನ್ಸ್ ಎಲ್ಲ ಇರುತ್ತ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಅಧಿಕಾರಿಗಳು, ಅವರತ್ರ ಇದೆಯೊ ಇಲ್ಲವೊ ನಮಗೆ ಗೊತ್ತಿಲ್ಲ.. ನಮಗೆ ಇಲ್ಲಿ ರೈಡ್ ಮಾಡಬೇಕು ಎಂಬ ಮಾಹಿತಿ ಬಂದಿದೆ ಅದನ್ನು ಮಾಡ್ತಾ ಇದ್ದೇವೆ ಅಷ್ಟೆ ಎಂದು ಹೇಳಿ ರೈಡ್ ಮಾಡಿದ್ದಾರೆ.



ಜತೆಗೆ ಭಾಗ್ಯ ತಯಾರಿಸಿದ್ದ ಅಡುಗೆಯನ್ನು ಸೀಜ್ ಮಾಡಿ ಕ್ವಾಲಿಟಿ ಚೆಕ್ ಮಾಡಬೇಕು ಎಂದು ಅಲ್ಲಿಂದ ಫುಡ್ ತೆಗೆದುಕೊಂಡು ಹೋಗಲು ಮುಂದಾಗುತ್ತಾರೆ. ಆಗ ಭಾಗ್ಯ ಬಂದು, ಸರಿ ಇದನ್ನೆಲ್ಲ ನೀವು ತೆಗೆದುಕೊಂಡು ಹೋಗಿ ಪರೀಕ್ಷೆ ನಡೆಸಿ.. ನಾನು ಲೈಸನ್ಸ್​ಗೆ ಅಪ್ಲೈ ಮಾಡ್ತೇನೆ.. ಅದನ್ನು ಹೇಗೆ ಮಾಡೋದು ಅಂತ ಹೇಳಿ ಎನ್ನುತ್ತಾಳೆ. ಆಗ ಅಧಿಕಾರಿಗಳು, ಅದೆಲ್ಲ ಹೇಳೋಕೆ ಆಗಲ್ಲ.. ನೀವು ಫುಡ್ ಬ್ಯುಸಿನೆಸ್ ಇವತ್ತಿಂದ ಮಾಡಬಾರದು ಎಂದು ಆರ್ಡರ್ ಮಾಡುತ್ತಾರೆ.



ಮನೆ ಮೇಲೆ ರೈಡ್ ಆಗಿರುವ ವಿಚಾರ ತಾಂಡವ್-ಶ್ರೇಷ್ಠಾಗೆ ತಿಳಿಯುತ್ತದೆ, ಇವರು ಖುಷಿಯಲ್ಲಿ ನಗುತ್ತಾರೆ.. ಅತ್ತ ಭಾಗ್ಯ ಏನಾದ್ರು ಆಗ್ಲಿ ನಾನು ಈ ಫುಡ್ ಬ್ಯುಸಿನೆಸ್ ಕ್ಲೋಸ್ ಆಗೋಕೆ ನಾನು ಬಿಡಲ್ಲ.. ನಾಳೆ ಲೈಸನ್ಸ್ ಸಿಕ್ಕೇ ಸಿಗುತ್ತೆ ಎಂದು ಮನೆಯಲ್ಲಿ ಹೇಳಿದ್ದಾಳೆ. ಮತ್ತೊಂದೆಡೆ ಕನ್ನಿಕಾ ಅಧಿಕಾರಿಗಳಿಗೆ ಕಾಲ್ ಮಾಡಿ ಅವಳಿಗೆ ಯಾವುದೇ ಕಾರಣಕ್ಕೂ ಲೈಸನ್ಸ್ ಸಿಗಬಾರದು ಎಂದು ಹೇಳಿದ್ದಾಳೆ. ಒಟ್ಟಾರೆ ಭಾಗ್ಯ ಲಕ್ಷ್ಮೀ ಧಾರಾವಾಹಿ ಮಹತ್ವದ ಘಟ್ಟಕ್ಕೆ ತಲುಪಿದ್ದು, ಮುಂದಿನ ಸಂಚಿಕೆ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

Trivikram: ತ್ರಿವಿಕ್ರಮ್ ಸಿನಿಮಾ ಬದಲು ಧಾರಾವಾಹಿ ಯಾಕೆ ಒಪ್ಪಿಕೊಂಡ್ರು..?: ಇಲ್ಲಿದೆ ಕಾರಣ