ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದರೆ ಅದು ಸರಿಗಮಪ. Zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಅನೇಕ ಸಿಂಗರ್ಗಳನ್ನು ಕೊಡುಗೆಯಾಗಿ ನೀಡಿದೆ. ಇದೀಗ 21ನೇ ಸೀಸನ್ನಿಂದ ಇನ್ನಷ್ಟು ಸಿಂಗರ್ಸ್ ಹುಟ್ಟುಕೊಂಡಿದ್ದಾರೆ. ಈ ಬಾರಿಯ ವಿನ್ನರ್ ಪಟ್ಟ ಬೀದರ್ನ ಶಿವಾನಿ ಸ್ವಾಮಿಗೆ (Shivani swami) ಸಿಕ್ಕಿದೆ.
ಮೊದಲ ದಿನದಿಂದ ಕೊನೆಯವರೆಗೂ ಶಿವಾನಿ ಅವರು ಅದ್ಭುತವಾಗಿ ಹಾಡಿದ್ದರು. ಅಷ್ಟೇ ಅಲ್ಲದೇ ಬೀದರ್ ಪ್ರತಿಭೆ ಶಿವಾನಿ ಶಿವದಾಸ್ ಅವರು ಹಾಡಿದ ಶಿವ ಶಿವಾ ಗಾಯನಕ್ಕೆ ಇಡೀ ಜನತೆ ತಲೆದೂಗಿದ್ದರು. ಈ ಹಿಂದೆ ಶಿವಾನಿ ಶಿವದಾಸ್ ಹಿಂದಿ ಐಡಿಯಲ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯೂ ಕೂಡ ಫೇಮಸ್ ಆಗಿದ್ದರು. ಶಿವಾನಿ ಸ್ವಾಮಿ ಕಷ್ಟದಿಂದ ಮೇಲೆ ಬಂದವರು. ಅವರ ಪ್ರತಿಭೆಯನ್ನು ಗುರುತಿಸಿ ಝೀ ಕನ್ನಡ ಸರಿಗಮಪ ಶೋಗೆ ಅವಕಾಶ ನೀಡಿತು. ಈ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡು ವಿನ್ ಆದರು.
ಸರಿಗಮಪ ಸೀಸನ್ 21 ಕಾರ್ಯಕ್ರಮದಲ್ಲಿ ಟಾಪ್ 3 ಹಂತಕ್ಕೆ ಹೋದ ಮೂವರೂ.. ಮಹಿಳಾ ಸ್ಪರ್ಧಿಗಳೇ ಅನ್ನೋದು ವಿಶೇಷ. ಟಾಪ್ 3 ಹಂತಕ್ಕೆ ಬಂದವರು - ಶಿವಾನಿ ಸ್ವಾಮಿ, ರಶ್ಮಿ ಹಾಗೂ ಆರಾಧ್ಯ ರಾವ್. ಈ ಮೂವರ ಪೈಕಿ ಶಿವಾನಿ ಸ್ವಾಮಿ ವಿನ್ನರ್ ಆಗಿದ್ದು, ಆರಾಧ್ಯ ರಾವ್ ರನ್ನರ್ ಅಪ್ ಆಗಿದ್ದಾರೆ. ರಶ್ಮಿ ಮೂರನೇ ಸ್ಥಾನ ಗಿಟ್ಟಿಸಿದ್ದಾರೆ.
Vaishnavi Gowda: ಮದುವೆ ಸಂಭ್ರಮದ ಸುಂದರ ಕ್ಷಣ ಹಂಚಿಕೊಂಡ ವೈಷ್ಣವಿ ಗೌಡ: ಇಲ್ಲಿದೆ ಫೋಟೋಸ್
ಫಿನಾಲೆಯಲ್ಲಿ ಒಟ್ಟು ಆರು ಮಂದಿ ಇದ್ದರು. ಶಿವಾನಿ, ರಶ್ಮಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಕಾಲಿಟ್ಟಿದ್ದರು. ಈ ಆರು ಮಂದಿಯಲ್ಲಿ ಶಿವಾನಿ ಅವರಿಗೆ ವಿನ್ನರ್ ಪಟ್ಟ ಸಿಕ್ಕಿದೆ. ಕಳೆದ ವಾರ ನಡೆದ ಟಿಕೆಟ್ ಟು ಫಿನಾಲೆ ರೌಂಡ್‌ನಲ್ಲಿ ಆರಾಧ್ಯಾ ರಾವ್ ಹಾಗೂ ಶಿವಾನಿ ಇಬ್ಬರೂ ನೇರವಾಗಿ ಫೈನಲ್‌ಗೆ ನೇರಪ್ರವೇಶ ಪಡೆದಿದ್ದರು.