ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಎಲ್ಲರ ಮನೆ ಮಾತಾಗಿರುವ ಯುವನಟ ಎಂದರೆ ಅದು ರಾಘವೇಂದ್ರ (Raghavendra). ರಾಗಿಣಿಯಾಗಿ ಹುಡುಗಿ ವೇಷದಲ್ಲಿ ಎಲ್ಲರನ್ನೂ ಎಂಟರ್‌ಟೈನ್ ಮಾಡುತ್ತಿರುವ ರಾಘು ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶಿರವಾಳ ಗ್ರಾಮದವರು. ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ವಿಭಿನ್ನ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿದ್ದಾರೆ. ಇವರು ಎಲ್ಲರಿಗೂ ಹೆಣ್ಣುಮಗಳ ಅವತಾರದಲ್ಲಿಯೇ ಕಂಡಿದ್ದೇ ಹೆಚ್ಚು. ಮಜಾ ಭಾರತ, ಗಿಚ್ಚಿ ಗಿಲಿಗಿಲಿ, ಮಜಾ ಟಾಕೀಸ್‌ನಲ್ಲಿಯೂ ಸ್ತ್ರೀ ವೇಷದಿಂದಲೇ ಮೋಡಿ ಮಾಡಿದ್ದಾರೆ.
ಇದೀಗ ಇಂತಹ ಶ್ರೇಷ್ಠ ನಟನಿಗೆ ಸ್ಯಾಂಡಲ್ವುಡ್ ಡೈರೆಕ್ಟರ್ ತರುಣ್ ಸುಧೀರ್ ಅವರು ಬಿಗ್ ಆಫರ್ ಕೊಟ್ಟಿದ್ದಾರೆ. ಮಹಾನಟಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದ ರಾಘುಗೆ ಅಡ್ವಾನ್ಸ್ ಕೊಟ್ಟಿದ್ದಾರೆ. ಅಂದರೆ ತರುಣ್ ಸುಧೀರ್ ಅವರ ಮುಂದಿನ ಪ್ರಾಜಕ್ಟ್ನಲ್ಲಿ ರಾಘು ಅವರಿಗೆ ಅವಕಾಶ ನೀಡಲಾಗಿದೆ.
ಮಹಾನಟಿ ಶೋನಲ್ಲಿ ಲವ್ & ರೊಮ್ಯಾನ್ಸ್ ರೌಂಡ್ ಇತ್ತು. ಈ ವೇಳೆ ರಾಘವೇಂದ್ರ ಎಂಟ್ರಿಕೊಟ್ಟರು. ಪ್ರಿಯತಮ.. ಕರುಣೆಯ ತೋರೆಯಾ.. ಹಾಡಿಗೆ ಪ್ರೇಮಾ ಜೊತೆ ಎಕ್ಸ್‌ಪ್ರೆಷನ್ ಕೊಟ್ಟಿದ್ದಾರೆ. ಜೊತೆಗೆ ವೇದಿಕೆ ಮೇಲೆ ಪುಟ್ನಂಜ, ಕುರಿಗಳು ಸಾರ್ ಕುರಿಗಳು ಸಿನಿಮಾದಲ್ಲಿ ನಟಿ ಉಮಾಶ್ರೀ ಅವರು ಡೈಲಾಂಗ್ ಅನ್ನು ಹೇಳಿದ್ದಾರೆ. ರಾಘು ಅವರ ಡೈಲಾಂಗ್ ಹಾಗೂ ಌಕ್ಟಿಂಗ್ಗೆ ಎಲ್ಲರೂ ಫಿದಾ ಆಗಿದ್ದಾರೆ.
Bhagya Lakshmi Serial: ಭಾಗ್ಯಲಕ್ಷ್ಮೀಯಲ್ಲಿ ಬಿಗ್ ಟ್ವಿಸ್ಟ್: ತಾಂಡವ್ನನ್ನು ಭಾಗ್ಯ ಮನೆಗೆ ಕರೆತಂದ ಆದೀಶ್ವರ್
ಮುಖ್ಯವಾಗಿ ರಾಘವೇಂದ್ರ ಅವರ ಆಕ್ಟಿಂಗ್ ಕಂಡು ರಮೇಶ್ ಅರವಿಂದ್, ನಿಶ್ಚಿಕಾ ನಾಯ್ಡು, ಪ್ರೇಮಾ ಹಾಗೂ ತರುಣ್ ಸುಧೀರ್ ಬೆರಗಾಗಿದ್ದಾರೆ. ಅದರಲ್ಲೂ ತರುಣ್ ಸುಧೀರ್ ಅವರನ್ನ ಇಂಪ್ರೆಸ್ ಮಾಡೋದ್ರಲ್ಲಿ ರಾಘವೇಂದ್ರ ಯಶಸ್ವಿಯಾದರು, ಇವರ ಆಕ್ಟಿಂಗ್ ಮೆಚ್ಚಿ ವೇದಿಕೆಗೆ ಬಂದ ತರುಣ್ ಸುಧೀರ್ ಒಟ್ಟಿಗೆ ಕೆಲಸ ಮಾಡೋಣ ಮಗಾ ಅಂತ್ಹೇಳಿ ಅಡ್ವಾನ್ಸ್ ಕೊಟ್ಟರು. ಅಲ್ಲಿಗೆ, ತರುಣ್ ಸುಧೀರ್ ಅವರ ಮುಂಬರುವ ಪ್ರಾಜೆಕ್ಟ್‌ನಲ್ಲಿ ರಾಘವೇಂದ್ರ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ.