ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಭಾಗ್ಯಲಕ್ಷ್ಮೀಯಲ್ಲಿ ಬಿಗ್ ಟ್ವಿಸ್ಟ್: ತಾಂಡವ್​ನನ್ನು ಭಾಗ್ಯ ಮನೆಗೆ ಕರೆತಂದ ಆದೀಶ್ವರ್

ತಾಂಡವ್-ಶ್ರೇಷ್ಠಾ, ಬಹುಶಃ ಅವರನ್ನು ನಮ್ಮನ್ನ ಇಲ್ಲಿಗೆ ಕರ್ಕೊಂಡು ಬಂದಿದ್ದು ಭಾಗ್ಯ ನಮ್ಮ ಬಳಿ ಕ್ಷಮೆ ಕೇಳಲು ಆಗಿರಬೇಕು ಎಂದು ಮಾತನಾಡಿಕೊಳ್ಳುತ್ತಾರೆ. ಆದೀಶ್ವರ್ ಬನ್ನಿ ಮನೆಯೊಳಗೆ ಎಂದು ಕರೆದುಕೊಂಡು ಹೋಗುತ್ತಾನೆ.. ಆದರೆ ಇಲ್ಲೂ ಒಂದು ಬಿಗ್ ಟ್ವಿಸ್ಟ್ ನೀಡಲಾಗಿದೆ.

ತಾಂಡವ್​ನನ್ನು ಭಾಗ್ಯ ಮನೆಗೆ ಕರೆತಂದ ಆದೀಶ್ವರ್

Bhagya Lakshmi Serial

Profile Vinay Bhat Aug 5, 2025 12:02 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ (Bhagya Lakshmi) ಧಾರಾವಾಹಿಯಲ್ಲಿ ಒಂದರ ಹಿಂದೆ ಒಂದರಂತೆ ಮಹಾ ತಿರುವು ನೀಡಲಾಗುತ್ತಿದೆ. ಭಾಗ್ಯ ತಂಗಿ ಪೂಜಾಳ ಬರ್ತ್ ಡೇ ಪಾರ್ಟಿಯಲ್ಲಿ ಭಾಗ್ಯ-ತಾಂಡವ್ ಮುಖಾಮುಖಿ ಆದರು. ಇಲ್ಲಿ ಇವರಿಬ್ಬರ ನಡುವೆ ದೊಡ್ಡ ಜಗಳವೇ ನಡೆದು ಹೋಗಿದೆ. ಅಷ್ಟೇ ಅಲ್ಲದೆ ಭಾಗ್ಯ ತಾಳ್ಮೆ ಕಳೆದುಕೊಂಡು ಎಲ್ಲರ ಎದುರೇ ತಾಂಡವ್​ನ ಕೆನ್ನಗೆ ಬಾರಿಸಿದ್ದಾಳೆ. ಇದರ ಉಪಯೋಗವನ್ನು ಕನ್ನಿಕಾ ಪಡೆದುಕೊಂಡು ಆದೀಶ್ವರ್ ತಲೆಗೆ ಇಲ್ಲಸಲ್ಲದ ವಿಚಾರ ತುಂಬಿ ಭಾಗ್ಯ ಕೆಟ್ಟವಳು ಎಂಬಂತೆ ಬಿಂಬಿಸಿದ್ದಾಳೆ. ಈ ಎಲ್ಲ ಘಟನೆಯ ಬಳಿಕ ಆದೀಶ್ವರ್, ತಾಂಡವ್ ಹಾಗೂ ಶ್ರೇಷ್ಠಾರನ್ನು ಕರೆದುಕೊಂಡು ಭಾಗ್ಯ ಮನೆಗೆ ಬಂದಿದ್ದಾನೆ.

ಭಾಗ್ಯ ಮನೆಯವರೆಲ್ಲರೂ ಪೂಜಾ ಬರ್ತ್ ಡೇ ಪಾರ್ಟಿಗೆ ಬಂದಿದ್ದರು. ಇದೇ ಪಾರ್ಟಿಗೆ ಆದೀಶ್ವರ್ ತನ್ನ ಬ್ಯುಸಿನೆಸ್ ಪಾರ್ಟ್ನರ್ ತಾಂಡವ್​ನನ್ನೂ ಕರೆದಿದ್ದಾನೆ. ಆದರೆ, ಆದೀಗೆ ಆತ ಭಾಗ್ಯಳ ಗಂಡ ಎನ್ನುವುದು ಗೊತ್ತಿಲ್ಲ. ತಾಂಡವ್​ಗೂ ಪೂಜಾ ಇವನ ಮನೆಯ ಸೊಸೆಯಾಗಿ ಹೋಗಿದ್ದಾಳೆ ಎನ್ನುವುದು ತಿಳಿದಿಲ್ಲ. ಇಲ್ಲಿ ಭಾಗ್ಯಳನ್ನು ನೋಡಿ ಮತ್ತಷ್ಟು ಉರಿ ಹೊತ್ತಿಕೊಂಡಿದೆ.

ಇಷ್ಟೇ ಅಲ್ಲದೆ ಗುಂಡಣ್ಣ ಹಾಗೂ ತನ್ವಿ ಊಟ ತೆಗೆದುಕೊಂಡು ಹೋಗುವಾಗ ಗುಂಡಣ್ಣನ ಕೈಯಲ್ಲಿದ್ದ ತಟ್ಟೆ ಅಚಾನಕ್ ಆಗಿ ಶ್ರೇಷ್ಠಾಳ ಡ್ರೆಸ್​ಗೆ ತಾಗಿದೆ. ಇಲ್ಲಿ ಶ್ರೇಷ್ಠಾ ಇವರಿಬ್ಬರಿಗೆ ಮ್ಯಾನರ್ಸ್ ಇಲ್ವಾ ಎಂದು ಮನಬಂದಂತೆ ಬೈದಿದ್ದಾಳೆ. ಗುಂಡಣ್ಣನಿಗೆ ಹೊಡೆಯಲೂ ಹೋಗಿದ್ದಾಳೆ. ಆಗ ಭಾಗ್ಯ ಬಂದಿದ್ದಾಳೆ.. ಅತ್ತ ತಾಂಡವ್ ಕೂಡ ಬಂದಿದ್ದಾನೆ. ಭಾಗ್ಯಾ ಎದುರು ಕಂಡಾಗ ಟಾಂಟ್​ ಕೊಟ್ಟಿದ್ದಾನೆ. ದೊಡ್ಡವರ ಮನೆಯನ್ನು ಹುಡುಕಿ ಅವರನ್ನು ಬುಟ್ಟಿಗೆ ಹಾಕೋದು, ಅವರ ಮನೆ ಹುಡುಗರನ್ನು ಹುಡುಕಿ ತಂಗಿದೆ ಮದುವೆ ಮಾಡಿಕೊಡುವುದು.. ಇದಕ್ಕೆ ಮೊದಲ ಬಕ್ರಾ ನಾನು.. ಈಗ ಕಿಶನ್.. ಅಕ್ಕ-ತಂಗಿ ಸೇರ್ಕೊಂಡು ಒಬ್ಬರ ಜೀವನ ಹಾಳು ಮಾಡೋಕೆ ಏನು ಬೇಕಾದ್ರು ನಾಟಕ ಮಾಡ್ತೀರಿ ಅಲ್ವಾ ಎಂದಿದ್ದಾನೆ. ಕೇಳುವಷ್ಟು ಕೇಳಿದ ಭಾಗ್ಯ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂ ತಾಂಡವ್​ಗೆ ಕಪಾಳಮೋಕ್ಷ ಮಾಡಿದ್ದಾಳೆ.

ಈ ಎಲ್ಲ ಘಟನೆಯನ್ನು ಕನ್ನಿಕಾ ನೋಡಿದ್ದಾಳೆ. ಸಿಕ್ಕಿದ್ದೇ ಚಾನ್ಸ್ ಎಂದು ಕನ್ನಿಕಾ ಆದೀ ಬಳಿ ಹೋಗಿ ಭಾಗ್ಯ ಬಂದ ಗೆಸ್ಟ್​ನ ಕಪಾಳಕ್ಕೆ ಹೊಡೆದಿದ್ದಾಳೆ ಎಂದು ಹೇಳಿದ್ದಾಳೆ. ಪಾರ್ಟಿ ಮುಗಿದ ಬಳಿಕ ಕೂಡ ಕನ್ನಿಕಾ ಹಾಗೂ ಮೀನಾಕ್ಷಿ, ಈ ಮಿಡಲ್ ಕ್ಲಾಸ್ ಮೆಂಟಾಲಿಟಿ ಹೀಗೆ.. ಆ ಭಾಗ್ಯ ನಮ್ಮ ಮನೆಯ ಮಾನ-ಮರಿಯಾದೆ ಹಾಳು ಮಾಡಿದಳು ಎಂದು ಆದೀಗೆ ತಲೆಗೆ ತುಂಬಿದ್ದಾರೆ. ಆದರೆ, ಆದೀಶ್ವರ್​ ಇದನ್ನೆಲ್ಲ ನಂಬಬೇಕೊ ಬೇಡವೊ ಎಂಬ ಗೊಂದಲದಲ್ಲಿದ್ದಾರೆ. ಯಾಕೆಂದರೆ ಭಾಗ್ಯ ಕಾರಣ ಇಲ್ಲದೆ ಆರೀತಿ ಮಾಡುವವಳು ಅಲ್ಲ ಎಂಬುದು ಆತನ ನಂಬಿಕೆ.



ಬಳಿಕ ತಾಂಡವ್​ಗೆ ಕಾಲ್ ಮಾಡಿ ಆದೀಶ್ವರ್ ಕ್ಷಮೆ ಕೇಳುತ್ತಾನೆ. ಅತ್ತ ತಾಂಡವ್ ಸಿಕ್ಕಿದ್ದೆ ಚಾನ್ಸ್ ಎಂದು, ಯಾರು ಆ ಹೆಂಗಸು.. ಸ್ವಲ್ಪನೂ ಮ್ಯಾನರ್ಸ್ ಇಲ್ಲ ಎಂದು ಹೇಳಿದ್ದಾನೆ. ಶಾಕಿಂಗ್ ಎಂದರೆ ಮರುದಿನ ಮನೆಗೆಲಸದವಳು ಬಂದು ಆದೀಶ್ವರ್​​ಗೆ ಎಲ್ಲ ಸತ್ಯ ಹೇಳಿದ್ದಾಳೆ. ಪಾರ್ಟಿಯಲ್ಲಿ ಏನೆಲ್ಲ ಆಯಿತು.. ಭಾಗ್ಯ ತಾಂಡವ್​ಗೆ ಯಾಕೆ ಹೊಡೆದಳು.. ಶ್ರೇಷ್ಠಾ ಮಕ್ಕಳಿಗೆ ಬೈದು.. ಹೊಡೆಯಲು ಮುಂದಾಗಿದ್ದನ್ನು ಹೇಳಿದ್ದಾಳೆ. ಬಳಿಕ ಆದೀ ಸ್ವತಃ ತಾಂಡವ್ ಮನೆ ಬಳಿ ಬಂದು ನಾವು ಒಂದುಕಡೆ ಹೋಗಬೇಕು ದಯವಿಟ್ಟು ನೀವಿಬ್ಬರೂ (ತಾಂಡವ್-ಶ್ರೇಷ್ಠಾ) ಬನ್ನಿ ಎಂದು ಕರೆದುಕೊಂಡು ಹೋಗುತ್ತಾನೆ.



ಹೀಗೆ ಆದೀಶ್ವರ್ ಇವರಿಬ್ಬರನ್ನು ಕರೆದುಕೊಂಡು ಬಂದಿದ್ದು ಭಾಗ್ಯ ಮನೆಗೆ. ಭಾಗ್ಯ ಮನೆ ಕಡೆ ಎದುರು ಕಾರು ನಿಲ್ಲಿಸಿದಾಗ ತಾಂಡವ್-ಶ್ರೇಷ್ಠಾಗೆ ಶಾಕ್ ಆಗುತ್ತದೆ. ಬ್ರೋ ನೀವು ಇಲ್ಲಿಗೆ ಕರ್ಕೊಂಡು ಬಂದ್ರ ಯಾಕೆ ಎಂದು ಕೇಳಿದ್ದಾನೆ. ಆಗ ಆದೀಶ್ವರ್, ಅರೇ ಈ ಮನೆ ನಿಮಗೆ ಗೊತ್ತಾ? ಎಂದು ಕೇಳಿದ್ದಾನೆ. ಆಗ ತಾಂಡವ್ ಇಲ್ಲ ಇಲ್ಲ ಎಂದು ತಪ್ಪಿಸಿಕೊಳ್ಳುತ್ತಾನೆ. ಬಳಿಕ ತಾಂಡವ್-ಶ್ರೇಷ್ಠಾ, ಬಹುಶಃ ಅವರನ್ನು ನಮ್ಮನ್ನ ಇಲ್ಲಿಗೆ ಕರ್ಕೊಂಡು ಬಂದಿದ್ದು ಭಾಗ್ಯ ನಮ್ಮ ಬಳಿ ಕ್ಷಮೆ ಕೇಳಲು ಆಗಿರಬೇಕು ಎಂದು ಮಾತನಾಡಿಕೊಳ್ಳುತ್ತಾರೆ. ಆದೀಶ್ವರ್ ಬನ್ನಿ ಮನೆಯೊಳಗೆ ಎಂದು ಕರೆದುಕೊಂಡು ಹೋಗುತ್ತಾನೆ.. ಆದರೆ ಇಲ್ಲೂ ಒಂದು ಬಿಗ್ ಟ್ವಿಸ್ಟ್ ನೀಡಲಾಗಿದೆ.. ಅದು ಏನು ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Vaishnavi Gowda: ಟ್ರೋಲರ್ಸ್​ಗೆ ವೈಷ್ಣವಿ ಗೌಡ ಖಡಕ್ ತಿರುಗೇಟು: ಕಾಲುಂಗುರ ಕಾಣುವಂತೆ ಫೋಟೋ ಶೂಟ್