BBK 11: ದೊಡ್ಮನೆ ಮಂದಿ ನಡುವೆ ರಾಜಿ ಸಂಧಾನ ಮಾಡಿಸಲು ಬಂದ್ರು ಹೊಸ ಜೋಡಿ: ಯಾರಿವರು?
ಬಿಗ್ ಬಾಸ್ ಮನೆಗೆ ವಧು ಧಾರಾವಾಹಿ ತಂಡದ ಸದಸ್ಯರಿಬ್ಬರು ಬಂದಿದ್ದಾರೆ. ಜನವರು 27 ರಿಂದ ಶುರುವಾಗಲಿರುವ ಈ ಧಾರಾವಾಹಿಯ ಮುಖ್ಯ ಪಾತ್ರದಾರಿಗಳಾದ ವಧು ಮತ್ತು ಸಾರ್ಥಕ್ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇವರನ್ನು ಸ್ಪರ್ಧಿಗಳು ಫುಲ್ ಖುಷಿ ಆಗಿದ್ದು, ಸಖತ್ ಎಂಜಾಯ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಸದ್ಯ ಫಿನಾಲೆ ವೀಕ್ ಸಾಗುತ್ತಿದೆ. ಇನ್ನೇನು ಕೇವಲ ಮೂರು ದಿನಗಳಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಹೀಗಾಗಿ ಈ ವಾರ ದೊಡ್ಡ ಟಾಸ್ಕ್ಗಳು ನಡೆಯುತ್ತಿಲ್ಲ. ಹೀಗಿರುವಾಗ ಬಿಗ್ ಬಾಸ್ ಮನೆಗೆ ಕಲರ್ಸ್ ಕನ್ನಡ ಫ್ಯಾಮಿಲಿಯ ಸದಸ್ಯರು ಕಾಲಿಡುತ್ತಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಇದೇ ಸಮಯಕ್ಕೆ ಪ್ರಸಾರ ಕಾಣಲಿರುವ ಯಜಮಾನ ಧಾರಾವಾಹಿಯ ರಾಘವೇಂದ್ರ ಹಾಗೂ ಝಾನ್ಸಿ ನಿನ್ನೆ ದೊಡ್ಮನೆಗೆ ಬಂದಿದ್ದರು. ಇಂದು ಮತ್ತೊಂದು ತಂಡ ಬಿಗ್ ಬಾಸ್ ಮನೆಗೆ ಬಂದಿದೆ. ಇವರು ದೊಡ್ಮನೆ ಮಂದಿ ನಡುವೆ ರಾಜಿ ಸಂಧಾನ ಮಾಡಲು ಹೊರಟಿದ್ದಾರೆ.
ಹೌದು, ಬಿಗ್ ಬಾಸ್ ಮನೆಗೆ ವಧು ಧಾರಾವಾಹಿ ತಂಡದ ಸದಸ್ಯರಿಬ್ಬರು ಬಂದಿದ್ದಾರೆ. ಜನವರು 27 ರಿಂದ ಶುರುವಾಗಲಿರುವ ಈ ಧಾರಾವಾಹಿಯ ಮುಖ್ಯ ಪಾತ್ರದಾರಿಗಳಾದ ವಧು ಮತ್ತು ಸಾರ್ಥಕ್ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇವರನ್ನು ಸ್ಪರ್ಧಿಗಳು ಫುಲ್ ಖುಷಿ ಆಗಿದ್ದು, ಸಖತ್ ಎಂಜಾಯ್ ಮಾಡಿದ್ದಾರೆ.
ತನ್ನ ಪರಿಚಯ ಮಾಡಿಕೊಂಡಿರುವ ವಧು, ನಾನು ಡಿವೋರ್ಸ್ ಲಾಯರ್, ನನ್ನ ಇಂಟೆನ್ಶನ್ ಏನಂದ್ರೆ ಒಬ್ಬರ ಮಧ್ಯೆ ಒಬ್ಬರಿಗೆ ಮನಸ್ತಾಪ ಇರಬಾರದು ಎಂದು ಹೇಳಿದ್ದಾರೆ. ಈ ಮೂಲಕ ಸದ್ಯ ಮನೆಯೊಳಗಿನ ಸದಸ್ಯರ ಮಧ್ಯೆ ಇರುವ ಮನಸ್ತಾಪವನ್ನು ಸರಿ ಮಾಡಲು ಮುಂದಾಗಿದ್ದಾರೆ. ಈ ಪೈಕಿ ಮೊದಲಿಗೆ ಬಂದ ರಜತ್ ಕಿಶನ್ ಹಾಗೂ ಉಗ್ರಂ ಮಂಜು ತಮಾಷೆಯಾಗಿ ಮಾತನಾಡಿದ್ದಾರೆ. ಇಲ್ಲಿ ಏನೇ ಕಾಂಪ್ರಮೈಸ್ ಮಾಡ್ಕೊಂಡು.. ಆರಾಮಾಗಿ ಮಾತಾಡಿದ್ರೂ ಟಾಸ್ಕ್ ಅಂತ ಬಂದಾಗ ಅವ್ನು ಹುಚ್ಚ ಆಗ್ತಾನೆ.. ನಾನೂ ಹುಚ್ಚ ಆಗ್ತೇನೆ ಎಂದಿದ್ದಾರೆ. ಮಂಜು ತುಂಬಾ ಒಳ್ಳೆ ವ್ಯಕ್ತಿ ಆದ್ರೆ ಸಂಜೆ ಮೇಲೆ ಸಿಗಬಾರದು ಎಂದು ರಜತ್ ಹೇಳಿದ್ದಾರೆ.
ಇನ್ನು ತ್ರಿವಿಕ್ರಮ್ ಹಾಗೂ ಮೋಕ್ಷಿತಾ ಪೈ ನಡುವಿನ ಮನಸ್ತಾಪವನ್ನು ಸರಿಮಾಡಲು ವಧು ಮುಂದಾಗಿದ್ದಾರೆ. ಮೊದಲಿಗೆ ಪ್ರತಿಕ್ರಿಯಿಸಿದ ತ್ರಿವಿಕ್ರಮ್, ನಾವಿಬ್ರೂ ಚೆನ್ನಾಗಿದ್ದೀವಿ. ಆ ಗ್ಲಜ್ ಆ ತರದ್ದೆಲ್ಲ ಏನು ಇಲ್ಲ ಎಂದು ಹೇಳಿದ್ದಾರೆ. ಕಂಡ್ರೆ ಆಗಲ್ಲ ಆತರದ್ದೆಲ್ಲ ಏನಿಲ್ಲ ಎಂದು ಮೋಕ್ಷಿತಾ ಹೇಳಿದ್ದಾರೆ. ಆಗ ತ್ರಿವಿಕ್ರಮ್ ಅವರು, ಚೆನ್ನಾಗಿರೊ ಹುಡುಗಿ ಜೊತೆ ನಾನು ಜಗಳ ಆಡಲ್ಲ ಎಂದಿದ್ದಾರೆ. ಆಗ ಮಧ್ಯೆ ಬಾಯಿಹಾಕಿದ ರಜತ್, ಚೆನ್ನಾಗಿರೊ ಹುಡುಗಿ ಹತ್ರ ಜಗಳ ಆಡಲ್ಲ ಒಕೆ.. ಆದ್ರೆ ಭವ್ಯಾ ಹತ್ರ ಯಾಕೆ ಯಾವಾಗ್ಲೂ ಜಗಳ ಆಡ್ತೀಯಾ ಎಂದು ತಮಾಷೆ ಮಾಡಿದ್ದಾರೆ. ಒಟ್ಟಾರೆ ವಧು ತಂಡದ ಜೊತೆ ಬಿಗ್ ಬಾಸ್ ಸ್ಪರ್ಧಿಗಳು ಸಖತ್ ಹರಟೆ ಹೊಡೆದು ಮಸ್ತ್ ಮಜಾ ಮಾಡಿದ್ದಾರೆ.
ದೊಡ್ಮನೆ ಮಂದಿ ನಡುವೆ ರಾಜಿ ಸಂಧಾನ ಮಾಡಿಸ್ತಾರಾ ವಧು?
— Colors Kannada (@ColorsKannada) January 22, 2025
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/sNTP9BmLLe
ಮತ್ತೊಂದೆಡೆ ಬಿಗ್ ಬಾಸ್ ಮನೆಯೊಳಗೆ ಮಜಾ ಟಾಕೀಸ್ ತಂಡ ಕಾಲಿಟ್ಟಿದೆ. ಇವರ ಜೊತೆ ಕೂಡ ಬಿಗ್ ಬಾಸ್ ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದ್ದು, ನಕ್ಕಿ-ನಕ್ಕಿ ಸುಸ್ತಾಗಿದ್ದಾರೆ. ವಿನೋದ್ ಗೊಬ್ರಗಾಲ, ಪ್ರಿಯಾಂಕ, ವಿಶ್ವಾಸ್, ಕುರಿ ಪ್ರತಾಪ್, ಪಿ.ಕೆ, ಶಿವು ಸೇರಿದಂತೆ ಮಜಾ ಟಾಕೀಸ್ನ ಅನೇಕ ಮಂದಿ ಡೊಡ್ಮನೆಗೆ ಬಂದಿದ್ದಾರೆ. ಇವರು ಸ್ಪರ್ಧಿಗಳ ಎದುರು ಸಣ್ಣ ಸ್ಕಿಟ್ ಮಾಡಿ ಕೂಡ ತೋರಿಸಿದ್ದಾರೆ. ಕನ್ನಡಿಗರನ್ನು ನಕ್ಕು ನಗಿಸುವ ಶೋ ಮಜಾ ಟಾಕೀಸ್ ಫೆಬ್ರವರಿ 1ರಿಂದ ಈ ಶೋ ಆರಂಭವಾಗಲಿದೆ. ವಧು ಧಾರಾವಾಹಿ ಜನವರಿ 27 ರಿಂದ ರಾತ್ರಿ 7:30ಕ್ಕೆ ಪ್ರಸಾರ ಕಾಣಲಿದೆ.
BBK 11: ಬಿಗ್ ಬಾಸ್ ಮನೆಗೆ ಬಂತು ಮಜಾ ಟಾಕೀಸ್ ಟೀಮ್: ಸ್ಪರ್ಧಿಗಳಿಗೆ ಮಜಾವೋ ಮಜಾ