Trivikram: ಹೊಸ ಫೋಟೋ ಶೂಟ್ನಲ್ಲಿ ಮಿಂಚಿದ ತ್ರಿವಿಕ್ರಮ್: ಸ್ಟೈಲಿಶ್ ಲುಕ್ಗೆ ಫ್ಯಾನ್ಸ್ ಫಿದಾ
Trivikram new photoshoot: ತ್ರಿವಿಕ್ರಮ್ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನು ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ತ್ರಿವಿಕ್ರಮ್ ಹಂಚಿಕೊಂಡಿದ್ದು, ಭರ್ಜರಿ ವೈರಲ್ ಆಗುತ್ತಿದೆ. ಬಣ್ಣ-ಬಣ್ಣದ ಶರ್ಟ್ ಹಾಗೂ ಜೀನ್ಸ್ನಲ್ಲಿ ಸಖತ್ ಸೈಲಿಶ್ ಲುಕ್ನಲ್ಲಿ ತ್ರಿವಿಕ್ರಮ್ ಮಿಂಚಿದ್ದಾರೆ.

Trivikram Photoshoot

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ತನ್ನ ವಿಶೇಷ ವ್ಯಕ್ತಿತ್ವದ ಮೂಲಕ ಎಲ್ಲರ ಮನಗೆದ್ದ ಸ್ಪರ್ಧಿ ಎಂದರೆ ಅದು ತ್ರಿವಿಕ್ರಮ್ (Trivikram). ಕನ್ನಡ ಕಿರುತೆರೆಯಲ್ಲಿ ಸಾಮ್ರಾಟ್ ಎಂದೇ ಜನಪ್ರಿಯತೆ ಪಡೆದಿರುವ ಬಿಬಿಕೆ 11ರ ಫಸ್ಟ್ ರನ್ನರ್ ರಪ್ ತ್ರಿವಿಕ್ರಮ್ಗೆ ಈಗ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಇವರು ಎಲ್ಲೇ ಕಂಡರು ಅಭಿಮಾನಿಗಳು ಸೆಲ್ಫಿಗೋಸ್ಕರ ಮುಗಿಬೀಳುತ್ತಿದ್ದಾರೆ. ಇವರು ಜೀವನದಲ್ಲಿ ನಡೆದುಕೊಂಡು ಬಂದ ದಾರಿ, ಇವರ ಕ್ರಿಕೆಟ್ ಪ್ರೇಮ, ಇನ್ನೂ ಏನಾದರು ಮಾಡಬೇಕು ಎಂಬ ಛಲ ಕಂಡು ಅನೇಕ ಫ್ಯಾನ್ಸ್ ಇವರನ್ನು ಫಾಲೋ ಮಾಡುತ್ತಿದ್ದಾರೆ.
ಬಿಗ್ ಬಾಸ್ ಮುಗಿದ ಬಳಿಕ ಇವರು ನೇರವಾಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಭಾಗವಹಿಸಿದರು. ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಆಡಿದರು. ಆ ಬಳಿಕ ಧನರಾಜ್ ಆಚಾರ್ ಮನೆಗೆ ತೆರಳಿ ಸುದ್ದಿಯಲ್ಲಿದ್ದರು. ಇದೀಗ ತ್ರಿವಿಕ್ರಮ್ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನು ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ತ್ರಿವಿಕ್ರಮ್ ಹಂಚಿಕೊಂಡಿದ್ದು, ಭರ್ಜರಿ ವೈರಲ್ ಆಗುತ್ತಿದೆ.
ಬಣ್ಣ-ಬಣ್ಣದ ಶರ್ಟ್ ಹಾಗೂ ಜೀನ್ಸ್ನಲ್ಲಿ ಸಖತ್ ಸೈಲಿಶ್ ಲುಕ್ನಲ್ಲಿ ತ್ರಿವಿಕ್ರಮ್ ಮಿಂಚಿದ್ದಾರೆ. ಇದಕ್ಕೆ ಆತ್ಮವಿಶ್ವಾಸದಿಂದ ಮುನ್ನಡೆಯಿರಿ ಎಂಬರ್ಥದಲ್ಲಿ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೋಕ್ಕೆ ಸಾಕಷ್ಟು ಲೈಕ್ಸ್ ಮತ್ತು ಕಮೆಂಟ್ಗಳು ಬರುತ್ತಿದೆ.
ಬಿಗ್ ಬಾಸ್ ಮುಕ್ತಾಯದ ನಂತರ ತ್ರಿವಿಕ್ರಮ್ ಏನ್ ಮಾಡ್ತಾರೆ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಸಿನಿಮಾ ಮಾಡ್ತಾರಾ ಅಥವಾ ಪುನಃ ಧಾರಾವಾಹಿಗೆ ಮರಳುತ್ತಾರ ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ಇದಕ್ಕೆ ಮೊನ್ನೆಯಷ್ಟೆ ಉತ್ತರ ಸಿಕ್ಕಿದೆ. ಕಲರ್ಸ್ ಕನ್ನಡದಲ್ಲೇ ಹೊಸ ಧಾರಾವಾಹಿ ಮೂಲಕ ತ್ರಿವಿಕ್ರಮ್ ಮತ್ತೆ ವೀಕ್ಷಕರ ಮುಂದೆ ಬರಲಿದ್ದಾರೆ. ಕಲರ್ಸ್ ಕನ್ನಡದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಒಂದು ಶುರುವಾಗಲಿದೆ. ಈ ಸೀರಿಯಲ್ಗೆ ತ್ರಿವಿಕ್ರಮ್ ನಾಯಕನಾಗಿ ಆಯ್ಕೆ ಆಗಿದ್ದಾರೆ.
ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹೊಸ ಧಾರಾವಾಹಿಗೆ ಮುದ್ದು ಸೊಸೆ ಎಂದು ಹೆಸರಿಡಲಾಗಿದೆ. ಈಗಾಗಲೇ ಪ್ರೋಮೋ ಕೂಡ ರಿಲೀಸ್ ಆಗಿದೆ. ಈ ಸೀರಿಯಲ್ಗೆ ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ. ಈ ಪ್ರೋಮೋದಲ್ಲಿ ತ್ರಿವಿಕ್ರಮ್ ಹೆಣ್ಣು ನೋಡುವ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಪದ್ಮಾವತಿ ಧಾರಾವಾಹಿಯಲ್ಲಿ ಸಾಮ್ರಾಟ್ ಪಾತ್ರದಲ್ಲಿ ತ್ರಿವಿಕ್ರಮ್ ಕಾಣಿಸಿಕೊಂಡಿದ್ದರು. ಮೇಲ್ನೋಟಕ್ಕೆ ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಎಂದು ಕಾಣುತ್ತಿದೆ.
Bhoomi Shetty: ಬೋಲ್ಡ್ ಅವತಾರದಲ್ಲಿ ಪಡ್ಡೆ ಹೈಕ್ಕಳ ಮನ ಕದ್ದ ಕಿನ್ನರಿ: ಭೂಮಿ ಶೆಟ್ಟಿ ಹಾಟ್ ಫೋಟೋ ಶೂಟ್