ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauthami Jadav: ಬಿಗ್ ಬಾಸ್ ಬಳಿಕ ಹೊಸ ಅಪ್ಡೇಟ್ ಕೊಡಲು ಮುಂದಾದ ಗೌತಮಿ: ಸದ್ಯದಲ್ಲೇ ಬರಲಿದೆ ಬೆಂಕಿ ಫೋಟೋ

ಗೌತಮಿ ಜಾಧವ್ ಮುಂದಿನ ಪ್ಲ್ಯಾನ್ ಏನು?, ಸಿನಿಮಾ ಅಥವಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರ ಎಂಬ ಕುರಿತು ಯಾವುದೇ ಅಪ್ಡೇಟ್ ಇರಲಿಲ್ಲ. ಆದರೀಗ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಸದ್ಯದಲ್ಲೇ ಗೌತಮಿ ಜಾಧವ್ ಅವರು ತೆರೆಮೇಲೆ ಬರುವ ಹಿಂಟ್ ಕೊಟ್ಟಿದ್ದಾರೆ.

ಬಿಗ್ ಬಾಸ್ ಬಳಿಕ ಹೊಸ ಅಪ್ಡೇಟ್ ಕೊಡಲು ಮುಂದಾದ ಗೌತಮಿ

Gauthami Jadav

Profile Vinay Bhat Mar 10, 2025 7:45 AM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯವಾದ ಬಳಿಕ ಸ್ಪರ್ಧಿಗಳು ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲ ಸ್ಪರ್ಧಿಗಳಿಗೆ ಸಿನಿಮಾ, ಸೀರಿಯಲ್​ಗಳಿಂದ ಆಕರ್ಷಕ ಆಫರ್ ಬರುತ್ತಿದ್ದರೆ ಇನ್ನೂ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನ್ನರ್ ಹನುಮಂತ, ಧನರಾಜ್, ರಜತ್, ಚೈತ್ರ ಸೇರಿದಂತೆ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ನಲ್ಲಿ ಭಾಗವಹಿಸುತ್ತಿದ್ದಾರೆ. ರನ್ನರ್-ಅಪ್ ತ್ರಿವಿಕ್ರಮ್ ಸಿಸಿಎಲ್ ಮುಗಿಸಿ ಇದೀಗ ಮುದ್ದು ಸೊಸೆ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಉಗ್ರಂ ಮಂಜು ಕೂಡ ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಆದರೆ, ಗೌತಮಿ ಜಾಧವ್ ಅವರು ಬಿಗ್ ಬಾಸ್ ಶೋ ಮುಗಿದ ಬಳಿಕ ಮಜಾ ಟಾಕೀಸ್​ಗೆ ಬಂದಿದ್ದು ಬಿಟ್ಟರೆ ಮತ್ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಯಾವುದೇ ಸೀರಿಯಲ್ ಅಥವಾ ಸಿನಿಮಾ ಆಫರ್ ಬಗ್ಗೆಯೂ ಸುಳಿವು ನೀಡಿಲ್ಲ. ಹೆಚ್ಚು ಕರಾವಳಿಯಲ್ಲಿ ಬೀಡುಬಿಟ್ಟಿದ್ದರು. ಅನೇಕ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಟೆಂಪಲ್ ರನ್ ನಡೆಸಿದರು. ಇತ್ತೀಚೆಗೆ ಕೃಷ್ಣನ ನಾಡು ಉಡುಪಿಯಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ಗೌತಮಿ ಜಾಧವ್ ದಿಢೀರ್ ಆಗಿ ಧನರಾಜ್ ಆಚಾರ್ ಮನೆಗೆ ಭೇಟಿ ಕೊಟ್ಟರು ಸರ್​​ಪ್ರೈಸ್ ನೀಡಿದ್ದರು.

ಆದರೆ, ಗೌತಮಿ ಮುಂದಿನ ಪ್ಲ್ಯಾನ್ ಏನು?, ಸಿನಿಮಾ ಅಥವಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರ ಎಂಬ ಕುರಿತು ಯಾವುದೇ ಅಪ್ಡೇಟ್ ಇರಲಿಲ್ಲ. ಆದರೀಗ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಸದ್ಯದಲ್ಲೇ ಗೌತಮಿ ಜಾಧವ್ ಅವರು ತೆರೆಮೇಲೆ ಬರುವ ಹಿಂಟ್ ಕೊಟ್ಟಿದ್ದಾರೆ. ಇದೀಗ ಗೌತಮಿ ಅವರು ಮೊದಲ ಬಾರಿಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ದೊಡ್ಮನೆಯಿಂದ ಹೊರಬಂದ ಬಳಿಕ ಭವ್ಯಾ ಗೌಡ, ಮೋಕ್ಷಿತಾ ಪೈ, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ ಸೇರಿದಂತೆ ಅನೇಕ ಸ್ಪರ್ಧಿಗಳು ಫೋಟೋ ಶೂಟ್ ನಡೆಸಿ ತಮ್ಮ ಸಾಮಾಜಿಕ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಗೌತಮಿ ಖಾತೆಯಲ್ಲಿ ಈ ರೀತಿಯ ಫೋಟೋಗಳು ಯಾವುದೂ ಬಂದಿರಲಿಲ್ಲ. ಆದರೀ. ಇವರು ಫೋಟೋ ಶೂಟ್ ಮಾಡಿಕೊಂಡಿದ್ದು, ದೊಡ್ಡ ಅಪ್ಡೇಟ್​ನ ಸೂಚನೆ ಕೊಟ್ಟಿದ್ದಾರೆ.

ಕೆಂಪು ಬಣ್ಣದ ಡ್ರೆಸ್​ನಲ್ಲಿ ಫಾಗ್ ಮಧ್ಯೆ ಗೌತಮಿ ಜಾಧವ್ ನಡೆದುಕೊಂಡು ಬಂದಿದ್ದಾರೆ. ಈ ಕುರಿತ ವಿಡಿಯೋ ಅವರ ಇನ್​ಸ್ಟಾಗ್ರಾಮ್​ನಲ್ಲಿ ಅಪ್ಲೋಡ್ ಆಗಿದೆ. ಇದಕ್ಕೆ ‘‘ಬಿಗ್ ಬಾಸ್ ನಂತರ ಮೊದಲನೇ ಫೋಟೋ ಶೂಟ್ ಮಾಡಿಸಿಕೊಂಡ ಗೌತಮಿ ಜಾದವ್’’ ಎಂದು ಕ್ಯಾಪ್ಶನ್ ನೀಡಲಾಗಿದೆ. ಇದಕ್ಕೆ ಸಾಕಷ್ಟು ಕಮೆಂಟ್​ಗಳು ಬರುತ್ತಿದ್ದು, ಇದರ ರಿಸಲ್ಟ್​ಗಾಗಿ ಕಾಯುತ್ತಿದ್ದೇವೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಇದು ಹೊಸ ಧಾರಾವಾಹಿಯ ಶೂಟ್ ಎಂದು ಹೇಳುತ್ತಿದ್ದಾರೆ.

Dhanraj Achar: ನಾನು ಮಾಡುವ ವಿಡಿಯೋಗಳಲ್ಲಿ ಕೆಟ್ಟ ಪದ ಇರಲ್ಲ, ಫ್ಯಾಮಿಲಿಗಳು ನೋಡಬೇಕು: ಧನರಾಜ್ ಆಚಾರ್