ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhoomi Shetty: ಬೋಲ್ಡ್ ಅವತಾರದಲ್ಲಿ ಪಡ್ಡೆ ಹೈಕ್ಕಳ ಮನ ಕದ್ದ ಕಿನ್ನರಿ: ಭೂಮಿ ಶೆಟ್ಟಿ ಹಾಟ್ ಫೋಟೋ ಶೂಟ್

ಕುಂದಾಪುರದ ಕೃಷ್ಣ ಸುಂದರಿ ಭೂಮಿ ಶೆಟ್ಟಿ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ. ಇವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಿನ್ನ ವಿಭಿನ್ನ ಆಗಿರೋ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇನ್‌ಸ್ಟಾಗ್ರಾಮ್ನಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಅನ್ನು ಹೊಂದಿರುವ ಭೂಮಿ ಶೆಟ್ಟಿ ಹೊಸ ಫೋಟೋಶೂಟ್ ಒಂದು ಸಖತ್ ಸದ್ದು ಮಾಡುತ್ತಿದೆ.

ಬೋಲ್ಡ್ ಅವತಾರದಲ್ಲಿ ಪಡ್ಡೆ ಹೈಕ್ಕಳ ಮನ ಕದ್ದ ಕಿನ್ನರಿ

Bhoomi Shetty

Profile Vinay Bhat Mar 10, 2025 4:06 PM

ಕಿನ್ನರಿ ಧಾರಾವಾಹಿ (Kinnari Serial) ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ ಭೂಮಿ ಶೆಟ್ಟಿ, ನಂತರ ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸೋ ಮೂಲಕ ಕನ್ನಡಿಗರಿಗೆ ಹತ್ತಿರವಾದರು. ಕಿರುತೆರೆಯಲ್ಲಿ ಬಿಜಿಯಾಗಿರುವಾಗಲೇ ಇಕ್ಕಟ್ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. ಇತ್ತೀಚಿನ ದಿನಗಳಲ್ಲಿ ಭೂಮಿ ಶೆಟ್ಟಿಯನ್ನ ಸೋಶಿಯಲ್ ಮೀಡಿಯಾದಲ್ಲಿಮಾತ್ರ ನೋಡುವಂತಾಗಿದೆ. ಸದ್ಯಕ್ಕೆ ಸಿನಿಮಾ, ಸಿರೀಯಲ್ ನಟನೆಯಿಂದ ದೂರ ಉಳಿದಿರುವ ಭೂಮಿ ಇನ್​ಸ್ಟಾಗ್ರಾಮ್​ನಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

ಕುಂದಾಪುರದ ಕೃಷ್ಣ ಸುಂದರಿ ಭೂಮಿ ಶೆಟ್ಟಿ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ. ಇವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಭಿನ್ನ ವಿಭಿನ್ನ ಆಗಿರೋ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಕ್ರಾಪ್ ಟಾಪ್, ಶಾರ್ಟ್ ಡ್ರೆಸ್, ಕ್ಲೀವೇಜ್ ಕಾಣಿಸುವಂತಹ ಟಾಪ್, ಮಿನಿ ಸ್ಕರ್ಟ್ ಧರಿಸೋ ಮೂಲಕ ನೆಟ್ಟಿಗರಿಗೆ ಶಾಕ್ ಆಗುವಂತೆ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಇದೀಗ ಮತ್ತೊಮ್ಮೆ ಬೋಲ್ಡ್ ಅವತಾರದಲ್ಲಿ ಪಡ್ಡೆ ಹೈಕ್ಕಳ ಮನ ಕದ್ದಿದ್ದಾರೆ ಭೂಮಿ ಶೆಟ್ಟಿ.

ಇನ್‌ಸ್ಟಾಗ್ರಾಮ್​ನಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಅನ್ನು ಹೊಂದಿರುವ ಭೂಮಿ ಶೆಟ್ಟಿ ಹೊಸ ಫೋಟೋಶೂಟ್ ಒಂದು ಸಖತ್ ಸದ್ದು ಮಾಡುತ್ತಿದೆ. ಈ ನಟಿಯ ಹೇರ್ ಸ್ಟೈಲ್, ಕಾಸ್ಟ್ಯೂಮ್ ಎಲ್ಲವೂ ನೆಟ್ಟಿಗರ ಗಮನವನ್ನು ಸೆಳೆಯುತ್ತಿದೆ. ಭೂಮಿ ಶೆಟ್ಟಿ ಫೋಟೋ ಕಂಡಾಗ ಒಂದು ಕ್ಷಣ ಇದು ಯಾರು ಎಂಬ ಪ್ರಶ್ನೆ ಮೂಡಿದರೂ ಆಶ್ಚರ್ಯವಿಲ್ಲ. ಗುರುತು ಸಿಗದಷ್ಟರ ಮಟ್ಟಿಗೆ ಭೂಮಿ ಶೆಟ್ಟಿ ಅವರ ಸ್ಟೈಲ್‌ನಲ್ಲಿ ಬದಲಾವಣೆಯಾಗಿದೆ. ಒಂದು ರೀತಿ ಆಫ್ರೀಕನ್ ಯುವ ರಾಣಿ ರೀತಿನೇ ಕಾಣಿಸಿಕೊಂಡಿದ್ದಾರೆ.

ತಮ್ಮ ಟಾಮ್ ಬಾಯ್ ಬಿಹೇವಿಯರ್, ಯಾರಿಗೂ ಕೇರ್ ಮಾಡದ ಸ್ವಭಾವ, ಬೈಕ್ ರೈಡಿಂಗ್, ಟೀಕೆಗಳಿಗೆ ಕ್ಯಾರೇ ಎನ್ನದ ಗುಣಗಳಿಂದಲೇ ಸದ್ದು ಮಾಡ್ತಿದ್ದ ನಟಿ ಭೂಮಿ ಶೆಟ್ಟಿ ಹವ್ಯಾಸಿ ಯಕ್ಷಗಾನ ಕಲಾವಿದೆಯೂ ಹೌದು. ಬಿಗ್ ಬಾಸ್‌ ಹಾಗೂ ಕಿನ್ನರಿ ಧಾರಾವಾಹಿ ಮೂಲಕ ಕರ್ನಾಟಕ ಜನತೆಗೆ ಪರಿಚಿತರಾದ ಭೂಮಿ ಶೆಟ್ಟಿ, ಯಕ್ಷಗಾನದಲ್ಲಿಯೂ ಪಾತ್ರ ಮಾಡಿದ್ದಾರೆ.

ಕನ್ನಡದ ಕಿನ್ನರಿ ಸೀರಿಯಲ್‌ ಮೂಲಕವೇ ಭೂಮಿ ಶೆಟ್ಟಿ ಎಲ್ಲರ ಹೃದಯ ಗೆದ್ದಿದ್ದರು. ಈ ಸೀರಿಯಲ್ ಆದ್ಮೇಲೆ ಭೂಮಿ ಶೆಟ್ಟಿ ಸಿನಿಮಾರಂಗಕ್ಕೂ ಕಾಲಿಟ್ಟರು. 2021 ರಲ್ಲಿ ಬಂದ ಇಕ್ಕಟ್ ಚಿತ್ರದ ಮೂಲಕವೇ ದೊಡ್ಡಪರದೆಗೆ ಬಂದರು. ಈ ಚಿತ್ರ ಆದ್ಮೇಲೆ ಟಾಲಿವುಡ್‌ಗೂ ಕಾಲಿಟ್ಟರು. ಟಾಲಿವುಡ್‌ನಲ್ಲಿ ಶರತುಲು ವರ್ತಿಸ್ತೈ ಅನ್ನುವ ಸಿನಿಮಾ ಮಾಡಿದರು. ಈ ಚಿತ್ರ 2024 ಕಳೆದ ವರ್ಷ ರಿಲೀಸ್ ಆಗಿತ್ತು.

Bhagya Lakshmi Serial: ತಾಂಡವ್​ನ ಮೈಚಳಿ ಬಿಡಿಸಿದ ಭಾಗ್ಯಾ, ಶ್ರೇಷ್ಠಾಗೂ ಖಡಕ್ ವಾರ್ನಿಂಗ್