Ugramm Manju: ಮಂಜು ವಿನ್ ಆಗದಿರಲು ಗೌತಮಿ ಜೊತೆಗಿನ ಸ್ನೇಹವೇ ಕಾರಣ?: ತಂದೆ ಹೇಳಿದ್ದೇನು?
ಆರಂಭದಲ್ಲಿ ವಿನ್ನಿಂಗ್ ಕ್ಯಾಂಡಿಡೇಟ್ ಆಗಿದ್ದ ಮಂಜು 4ನೇ ಸ್ಥಾನಕ್ಕೆ ಇಳಿಯಲು ಗೌತಮಿ ಕಾರಣ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ. ಇದೀಗ ಉಗ್ರಂ ಮಂಜು ಅವರ ತಂದೆ ಈ ಕುರಿತು ಮಾತನಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶೋ ಆರಂಭವಾಗಿ ಕೆಲವು ದಿನಗಳಾದ ಬಳಿಕ ಉಗ್ರಂ ಮಂಜು ಅವರ ಕಂಡು ಎಲ್ಲರೂ ಇವರೇ ಈ ಸೀಸನ್ನ ವಿನ್ನರ್ ಎಂದು ಭಾವಿಸಿದ್ದರು. ಆಟ ಎಂದು ಬಂದಾಗ ಆಟ.. ಆಟದಲ್ಲಿ ಗ್ರೇ ಏರಿಯಾ.. ಕಾಮಿಡಿಯಲ್ಲೂ ಸೈ.. ಎಲ್ಲರ ಜೊತೆ ಬೆರೆತು ನಗುನಗುತ್ತಾ ಮಂಜು ಇದ್ದರು. ಆದರೆ, ಯಾವಾಗ ಗೌತಮಿ ಜಾಧವ್, ಮೋಕ್ಷಿತಾ ಪೈ ಜೊತೆ ಗುಂಪಾಗಿ ಕುಳಿತುಕೊಂಡು ಮಾತನಾಡಲು ಬಯಸಿದರೊ ಅಲ್ಲಿಂದು ಮಂಜು ಆಟ ಡಲ್ ಆಗುತ್ತಾ ಬಂತು. ಮಧ್ಯ-ಮಧ್ಯದಲ್ಲಿ ಅಬ್ಬರಿಸಿದರೂ ಅದು ರಿಯಲ್ ಮಂಜು ಅಂತೆ ಕಾಣಿಸಲಿಲ್ಲ.
ಇದೇ ಕಾರಣಕ್ಕೆ ಇವರು 4ನೇ ರನ್ನರ್ ಅಪ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು. ಕಿಚ್ಚ ಸುದೀಪ್ ಅವರು ಪ್ರತಿ ವೀಕೆಂಡ್ ಬಂದು ನೀವು ಒಬ್ಬರೇ ಆಡಿ ಎಂದು ಮಂಜುಗೆ ಬುದ್ದಿ ಹೇಳಿದ್ದರು. ಆದರೆ, ಮಂಜು ಬದಲಾಗಲೇ ಇಲ್ಲ. ಅಲ್ಲದೆ ಗೌತಮಿ ಕೂಡ ಈ ಫ್ರೆಂಡ್ಶಿಪ್ ಬೇಡ.. ಇಂಡಿವ್ಯೂಜುವಲ್ ಆಟ ಆಡೋಣ ಎಂದರು. ಅದಕ್ಕೆ ಒಕೆ ಎಂದರೂ ಮಂಜು ಅದನ್ನು ಪಾಲಿಸಲಿಲ್ಲ. ಆರಂಭದಲ್ಲಿ ವಿನ್ನಿಂಗ್ ಕ್ಯಾಂಡಿಡೇಟ್ ಆಗಿದ್ದ ಮಂಜು 4ನೇ ಸ್ಥಾನಕ್ಕೆ ಇಳಿಯಲು ಗೌತಮಿ ಕಾರಣ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ.
ಇದೀಗ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಉಗ್ರಂ ಮಂಜು ಅವರ ತಂದೆ ಈ ಕುರಿತು ಮಾತನಾಡಿದ್ದಾರೆ. ‘ನಮ್ಮ ಮನೆಯಲ್ಲಿ ಮಂಜು ಹೆಣ್ಮಕ್ಕಳ ಜೊತೆ ಹೇಗೆ ಬೆರೆತಿದ್ದಾನೋ ಅದೇ ರೀತಿ ಅವನು ಬಿಗ್ ಬಾಸ್ ಮನೆಯಲ್ಲಿ ಬೆರೆತಿದ್ದಾನೆ. ಮೋಕ್ಷಿತಾ ಮತ್ತು ಗೌತಮಿ ಅವರನ್ನು ಬಿಟ್ಟು ಬಂದಿದ್ದರೆ ಚೆನ್ನಾಗಿ ಆಡುತ್ತಿದ್ದ ಎಂದು ಜನರು ಹಾಗೂ ಸುದೀಪ್ ಸರ್ ಹೇಳಿರಬಹುದು. ಅವರು ಬಿಟ್ಟು ಬಾರದೇ ಇರುವುದೇ ಒಳ್ಳೆಯದಾಯ್ತು. ಅದನ್ನು ಕೆಟ್ಟದ್ದು ಅಂತ ನಾವು ಹೇಳೋಕೆ ಆಗಲ್ಲ. ಅವನ ಆಟವನ್ನು ಆಡಿದ್ದಾನೆ ಎಂದು ರಾಮಣ್ಣ ಹೇಳಿದ್ದಾರೆ.
‘ಗೌತಮಿಯ ಸ್ನೇಹದಿಂದ ಮಂಜು ಆಟವನ್ನು ನಿರ್ಲಕ್ಷಿಸಿದ್ದಾನೆ ಅಂತ ಹೇಳೋಕೆ ನಮಗೆ ಇಷ್ಟ ಇಲ್ಲ. ಯಾಕೆಂದರೆ, ನಾವು ಅವನನ್ನು ಚಿಕ್ಕಂದಿನಿಂದ ನೋಡಿದ್ದೇವೆ. ಹೆಣ್ಮಕ್ಕಳನ್ನು ಅವನು ಹಚ್ಚಿಕೊಂಡರೆ ಸಡನ್ ಆಗಿ ಬಿಡಲ್ಲ. ಅದನ್ನೇ ಬಿಗ್ ಬಾಸ್ ಮನೆಯಲ್ಲೂ ಮಾಡಿದ್ದಾನೆ. ಅದು ಬಿಟ್ಟರೆ ಬೇರೆ ಏನೂ ಇಲ್ಲ. ಹೆಣ್ಮಕ್ಕಳು ಎಂದರೆ ಅವನಿಗೆ ತುಂಬ ಗೌರವ. ಅದನ್ನು ಬೇರೆಯವರು ಬೇರೆ ರೀತಿ ತಿಳಿದುಕೊಂಡರೆ ನಾವು ಜವಾಬ್ದಾರಲ್ಲ’ ಎಂದು ಉಗ್ರಂ ಮಂಜು ತಂದೆ ಹೇಳಿದ್ದಾರೆ.