BBK 11 Winner, Hanumantha: ಟ್ರೋಫಿ ಗೆದ್ದ ಕೂಡಲೇ ಹನುಮಂತ ಮಾಡಿದ್ದೇನು ನೋಡಿ: ವಿನ್ನಿಂಗ್ ಸ್ಪೀಚ್ ಹೇಗಿತ್ತು ಗೊತ್ತಾ?
ಹನುಮಂತ ಅವರು ವಿನ್ನರ್ ಆದ ಬಳಿಕ ಅವರು ಏನು ಮಾತನಾಡಿದರು?, ಸುದೀಪ್ ಕೈ ಎತ್ತಿದ ತಕ್ಷಣ ಹನುಮಂತನ ಏನು ಮಾಡಿದ್ರು?, ಈ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಸದಾ ಸೀಸ ಹಳ್ಳಿ ಹೈದ ಹನುಮಂತ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ವಿಜೇತರಾಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಸೈಲೆಂಟ್ ಆಗಿ ಎಂಟ್ರಿ ಕೊಟ್ಟ ಹನುಮ ದೊಡ್ಮನೆಯಲ್ಲಿ ಘಟಾನುಘಟಿ ಸ್ಪರ್ಧಿಗಳಿಗೇ ಚಳ್ಳೆ ಹಣ್ಣು ತಿನ್ನಿಸಿ 50 ಲಕ್ಷ ರೂಪಾಯಿ ಹಾಗೂ ಬಿಗ್ ಬಾಸ್ ಟ್ರೋಫಿಯನ್ನು ಬಾಚಿಕೊಂಡಿದ್ದಾರೆ. ಜೊತೆಗೆ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಸ್ಪರ್ಧಿಯೊಬ್ಬ ಟ್ರೋಫಿ ಎತ್ತಿಹಿಡಿದ ಸಾಧನೆ ಮಾಡಿದ್ದಾರೆ. ಈ ಮೂಲಕ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದರೂ ವಿನ್ನರ್ ಆಗಬಹುದು ಎಂದು ಹನುಮಂತ ಲಮಾಣಿ ತೋರಿಸಿಕೊಟ್ಟಿದ್ದಾರೆ. 5 ಕೋಟಿ ಕನ್ನಡಿಗರ ಮನಗೆದ್ದಿದ್ದಾರೆ. ಹನುಮಂತ ಅವರು ವಿನ್ನರ್ ಆದ ಬಳಿಕ ಅವರು ಏನು ಮಾತನಾಡಿದರು?, ಸುದೀಪ್ ಕೈ ಎತ್ತಿದ ತಕ್ಷಣ ಹನುಮಂತನ ಏನು ಮಾಡಿದ್ರು?, ಈ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಹನುಮಂತ ಬರುವುದಕ್ಕೂ ಮೊದಲು ಬಿಗ್ ಬಾಸ್ ಮನೆಯಲ್ಲಿ ಜಗಳಗಳೇ ತುಂಬಿ ಹೋಗಿದ್ದವು. ಲಾಯರ್ ಜಗದೀಶ್ ನಿರ್ಗಮನದ ಬಳಿಕ ಇವರ ಎಂಟ್ರಿ ಆಯಿತು. ಹನುಮಂತ ಬಂದ ಬಳಿಕ ದೊಡ್ಮನೆಯಲ್ಲಿ ನಗುವಿನ ಅಲೆ ಶುರವಾಯಿತು. ಧನರಾಜ್ ಜೊತೆ ಸೇರಿ ಅವರು ನಗಿಸುವ ಕೆಲಸ ಮಾಡಿದರು. ಇವರ ದೋಸ್ತಾ ಡೈಲಾಗ್ ಇಡೀ ಕರ್ನಾಟಕದಲ್ಲಿ ಇಂದು ಫೇಮಸ್ ಆಗಿದೆ. ತಮ್ಮ ನಡತೆ, ಮಾತಿನ ಶೈಲಿಗಳಿಂದಲೇ ಹೊಟ್ಟೆ ಹುಣ್ಣಾಗುವಷ್ಟು ನಗಿಸಿರೆ. ಇವರ ಗ್ರಾಮೀಣ ಸೊಗಡಿನ ಭಾಷೆ, ಹಾಡುಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ. ಉತ್ತರ ಕರ್ನಾಟಕದವರಾದ ಇವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸಿವೆ.
ಬಿಗ್ ಬಾಸ್ ಮನೆಯಲ್ಲಿ ಇವರು ಟಾಸ್ಕ್ ಎಂಬ ವಿಚಾರ ಬಂದಾಗ ಎಂದಿಗೂ ಹಿಂದೇಟು ಹಾಕಿದ್ದೇ ಇಲ್ಲ. ಅವರು ಅನೇಕ ಟಾಸ್ಕ್ಗಳನ್ನು ಯಶಸ್ವಿಯಾಗಿ ಗೆದ್ದಿದ್ದಾರೆ. ಘಟಾನು ಘಟಿಗಳನ್ನು ಹನುಮಂತ ಅವರು ಸೋಲಿಸಿದ್ದಾರೆ. ಫಿನಾಲೆ ಟಿಕೆಟ್ ಸಂದರ್ಭದಲ್ಲಿ ತ್ರಿವಿಕ್ರಮ್ ಅವರನ್ನು ಸೋಲಿಸಿ ಭೇಷ್ ಎನಿಸಿಕೊಂಡರು. ರಜತ್ ಹಾಗೂ ಭವ್ಯಾ ಅವರಿಗೂ ಸೋಲು ಉಣಿಸಿದ್ದರು. ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಆದಾಗೆಲ್ಲ ಅವರ ತಂಡಕ್ಕೆ ಜಯ ಸಿಕ್ಕಿದೆ. ಅಂತಿಮವಾಗಿ ಫಿನಾಲೆ ಟಿಕೆಟ್ ಪಡೆದ ಮೊದಲ ಸ್ಪರ್ಧಿ ಇವರಾದರು.
ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ಎಂಬ ಮಾತಿನಂತೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿ ಹನುಮಂತ ಟ್ರೋಫಿ ಎತ್ತಿದ್ದಾರೆ. ಜವಾರಿ ಹುಡುಗ ಹನುಮಂತನ ಕೈ ಹಿಡಿದು ಸುದೀಪ್ ಮೇಲಕ್ಕೆ ಎತ್ತುವ ಮೂಲಕ ವಿನ್ನರ್ ಎಂದು ಘೋಷಿಸುತ್ತಿದ್ದಂತೆ, ಸಂಭ್ರಮ ಮುಗಿಲುಮುಟ್ಟಿತ್ತು. ಗೆದ್ದ ಖುಷಿಯಲ್ಲಿ ಹನುಮಂತ ಅವರು ಮೊದಲು ಸುದೀಪ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಇದು ಅನೇಕರ ಪ್ರಶಂಸೆಗೆ ಕಾರಣವಾಯಿತು. ಜನರಿಗೆ ಇವರು ಇಷ್ಟ ಆಗಿದ್ದು ಕೂಡ ಇದೇ ಸಿಂಪ್ಲಿಸಿಟಿಗೆ.
ಬಳಿಕ ಮಾತನಾಡಿದ ಹನುಮಂತ, ‘‘ದೇವರಾಣೆಗೂ ನಾನು ಟ್ರೋಫಿ ಗೆಲ್ಲುತ್ತೇನೆ ಎಂದು ನಾನು ಬಂದಿಲ್ಲ ಸರ್. ಕರೆದಿದ್ದಾರಾ, ಹೋಗಿ ಮಜಾ ಮಾಡಿ ಬರೋಣ ಅಂತಾ ಬಂದಿದ್ದೆ. ದೇವರ ಆಶೀರ್ವಾದ ಹಾಗೂ ಸುದೀಪ್ ಸರ್ ಆಶೀರ್ವಾದ ಹಾಗೂ ಇಡೀ ಕರ್ನಾಟಕದ ಜನರ ಆಶೀರ್ವಾದದಿಂದ ಇವತ್ತು ನಾನು ಗೆದ್ದೀನಿ ರೀ’’ ಎಂಬುದು ಅವರ ಮಾತಾಗಿತ್ತು. ಈ ಮೂಲಕ ಬರೋಬ್ಬರಿ 119 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ನಡೆದ ಅಸಲಿ ಆಟಕ್ಕೆ ಅದ್ಧೂರಿ ತೆರೆ ಬಿದ್ದಿದೆ.
BBK 11 Winner, Hanumantha: 50 ಲಕ್ಷ ಗೆದ್ದ ಹನುಮಂತನಿಗೆ ಟ್ಯಾಕ್ಸ್ ಎಲ್ಲ ಕಟ್ ಆಗಿ ಕೊನೆಗೆ ಸಿಗುವ ಹಣ ಎಷ್ಟು ನೋಡಿ