ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss: ಹೊರಬಿತ್ತು ಬಿಗ್ ಬಾಸ್ ಮುಂದಿನ ಸೀಸನ್​ನ ನಿರೂಪಣೆ ಮಾಡುವ ನಟನ ಹೆಸರು: ಇವರೇ ನೋಡಿ

ತೆಲುಗು ಬಿಗ್ ಬಾಸ್‌ ಕಾರ್ಯಕ್ರಮವನ್ನು ನಾಗಾರ್ಜುನ ಹೋಸ್ಟ್ ಮಾಡುತ್ತಿದ್ದಾರೆ. ಆದರೆ ಮುಂದಿನ ಆವೃತ್ತಿಯಲ್ಲಿ ತೆಲುಗು ಬಿಗ್ ಬಾಸ್ ಶೋ ಕಾರ್ಯಕ್ರಮವನ್ನು ನಾಗಾರ್ಜುನ ಬದಲು ಯುವ ನಟನಿಗೆ ಜವಾಬ್ದಾರಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಬಿಗ್ ಬಾಸ್ ತೆಲುಗು ಸೀಸನ್ -9 ಕ್ಕಾಗಿ ವಿಜಯ್ ದೇವರಕೊಂಡ ಅವರ ಜತೆ ಮಾತುಕತೆಯಲ್ಲಿದ್ದಾರೆ

ಹೊರಬಿತ್ತು ಬಿಗ್ ಬಾಸ್ ಮುಂದಿನ ಸೀಸನ್​ನ ನಿರೂಪಣೆ ಮಾಡುವ ನಟನ ಹೆಸರು

Bigg Boss

Profile Vinay Bhat Mar 7, 2025 7:04 AM

ಬಿಗ್ ಬಾಸ್ ಕನ್ನಡ ಸೀಸನ್ 11 ಇತ್ತೀಚೆಗಷ್ಟೆ ಮುಕ್ತಾಯಗೊಂಡಿದ್ದು, ಸಿಂಗರ್ ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದರು. ಈ ಸೀಸನ್ ಮುಕ್ತಾಯ ಆಗುವ ಮೂಲಕ ಕಿಚ್ಚ ಸುದೀಪ್ ಕೂಡ ಬಿಗ್ ಬಾಸ್ ಶೋಗೆ ಗುಡ್ ಬೈ ಹೇಳಿದರು. ಇವರ ನಿವೃತ್ತಿ ಬಳಿಕ ಮುಂದಿನ ಬಿಗ್ ಬಾಸ್ ಕನ್ನಡ ಸೀಸನ್​ಗೆ ಯಾರು ನಿರೂಪಕ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ. ಇದರ ಜೊತೆಗೆ ಅತ್ತ ತೆಲುಗು ಬಿಗ್ ಬಾಸ್ ಶೋನಲ್ಲೂ ನಿರೂಪಕರನ್ನು ಬದಲಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾತು ಕೇಳಿಬಂದಿದೆ.

ತೆಲುಗು ಬಿಗ್ ಬಾಸ್‌ ಕಾರ್ಯಕ್ರಮವನ್ನು ನಾಗಾರ್ಜುನ ಹೋಸ್ಟ್ ಮಾಡುತ್ತಿದ್ದಾರೆ. ಆದರೆ ಮುಂದಿನ ಆವೃತ್ತಿಯಲ್ಲಿ ತೆಲುಗು ಬಿಗ್ ಬಾಸ್ ಶೋ ಕಾರ್ಯಕ್ರಮವನ್ನು ನಾಗಾರ್ಜುನ ಬದಲು ಯುವ ನಟನಿಗೆ ಜವಾಬ್ದಾರಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ತೆಲುಗು ಬಿಗ್ ಬಾಸ್ ಆರಂಭವಾದಾಗ ನಟ ಜೂನಿಯರ್ ಎನ್‌ಟಿಆರ್ ಅವರು ಸಾರಥ್ಯ ವಹಿಸಿದ್ದರು. ಒಂದೇ ಸೀಸನ್‌ಗೆ ಅವರು ಹೊರನಡೆದಾಗ, ಆ ಜಾಗಕ್ಕೆ ನಟ ನಾನಿ ಬಂದಿದ್ದರು. ಅವರು ಸಹ ಎರಡನೇ ಸೀಸನ್ ಮುಗಿಸಿಕೊಟ್ಟು, ವಿದಾಯ ಹೇಳಿದ್ದರು. ಆನಂತರ ತೆಲುಗು ಬಿಗ್ ಬಾಸ್‌ನ ಮೂರನೇ ಸೀಸನ್‌ನಿಂದ ಕಳೆದ 8ನೇ ಸೀಸನ್‌ವರೆಗೂ ಅಚ್ಚುಕಟ್ಟಾಗಿ ನಡೆಸಿಕೊಟ್ಟವರು ನಟ ನಾಗಾರ್ಜುನ.

ಇದೀಗ ನಾಗಾರ್ಜುನ್‌ ಅವರು ಮುಂದಿನ ಸೀಸನ್‌ ನಡೆಸಿಕೊಡುವುದು ಅನುಮಾನ ಎನ್ನುವ ಸುದ್ದಿಯೊಂದು ಹರಿದಾಡಿದೆ. ಅವರು ನಿರೂಪಕನ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣದಿಂದ ಆಯೋಜಕರು ಬಿಗ್ ಬಾಸ್ ತೆಲುಗು ಸೀಸನ್ -9 ಕ್ಕಾಗಿ ವಿಜಯ್ ದೇವರಕೊಂಡ ಅವರ ಜತೆ ಮಾತುಕತೆಯಲ್ಲಿದ್ದಾರೆ ಎಂದು ಸಿಯಾಸತ್ ವರದಿ ಮಾಡಿದೆ.

ಸಿನಿಮಾ ಸೇರಿದಂತೆ ಇತರ ಕಾರಣಗಳಿಂದ ಮುಂದಿನ ಬಿಗ್ ಬಾಸ್ ಶೋ ನಿರೂಪಕಣೆ ಮಾಡಲು ನಾಗಾರ್ಜುನಗೆ ಸಾಧ್ಯವಾಗುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ನಾಗಾರ್ಜುನ್ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ವಿಜಯ ದೇವರಕೊಂಡ ಜೊತೆ ಮೊದಲ ಸುತ್ತಿನ ಮಾತುಕತೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. ಈ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.

Ramesh Aravind: ರಮೇಶ್ ವೃತ್ತಿ ಬದುಕಿಗೆ 40 ವರ್ಷ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು ಸರಿಗಮಪ ಶೋ