ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shah Rukh Khan: ಶಾರುಖ್ ಖಾನ್ ಬರ್ತ್‌ಡೇ ; 'ಕಿಂಗ್' ಚಿತ್ರದ ಮೊದಲ ಹಾಡು ರಿಲೀಸ್

Shah Rukh Khan: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಒಂದು ದಿನ ಮುಂಚಿತವಾಗಿಯೇ ಆರಂಭವಾಗಿದೆ. ನವೆಂಬರ್ 2ರ ಮಧ್ಯರಾತ್ರಿ ಶಾರುಖ್ ಅಭಿನಯದ ಬಹುನಿರೀಕ್ಷಿತ 'ಕಿಂಗ್' ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. 'ತು ಮಿಲ್ ಜಾಯೆ' (Tu Mil Jaye) ಎಂಬ ಹೆಸರಿನ ಈ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಅಭಿಮಾನಿಗಳ ಗಮನ ಸೆಳೆದಿದೆ.

ಶಾರುಖ್ ಖಾನ್ ಬರ್ತ್‌ಡೇ ; 'ಕಿಂಗ್' ಚಿತ್ರದ ಮೊದಲ ಹಾಡು ರಿಲೀಸ್

ಶಾರುಖ್‌ ಖಾನ್‌ -

Yashaswi Devadiga
Yashaswi Devadiga Nov 2, 2026 10:53 AM

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ (Sharukh khan) ಅವರ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಒಂದು ದಿನ ಮುಂಚಿತವಾಗಿಯೇ ಆರಂಭವಾಗಿದೆ. ನವೆಂಬರ್ 2ರ ಮಧ್ಯರಾತ್ರಿ ಶಾರುಖ್ ಅಭಿನಯದ ಬಹುನಿರೀಕ್ಷಿತ 'ಕಿಂಗ್' (King Movie) ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. 'ತು ಮಿಲ್ ಜಾಯೆ' (Tu Mil Jaye) ಎಂಬ ಹೆಸರಿನ ಈ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಅಭಿಮಾನಿಗಳ ಗಮನ ಸೆಳೆದಿದೆ.

ಸಚಿನ್-ಜಿಗರ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಅರ್ಜಿತ್ ಸಿಂಗ್ ಮತ್ತು ಮಧುಬಂತಿ ಬಾಗ್ಚಿ ಧ್ವನಿಯಾಗಿದ್ದಾರೆ. ವಿಶೇಷವೆಂದರೆ, ಖ್ಯಾತ ಪಾಪ್ ಗಾಯಕ ಎಡ್ ಶೀರನ್ ಕೂಡ ಈ ಹಾಡಿನಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇಂಟರ್‌ಸ್ಕೋಪ್ ರೆಕಾರ್ಡ್ಸ್ ಮತ್ತು ಜಿಂಜರ್‌ಬ್ರೆಡ್ ಮ್ಯಾನ್ ರೆಕಾರ್ಡ್ಸ್ ಸಹಯೋಗದಲ್ಲಿ ಹಾಡು ಮೂಡಿಬಂದಿದೆ.

ಶಾರುಖ್-ದೀಪಿಕಾ ಜೋಡಿಯ ಮೋಡಿ

'ತು ಮಿಲ್ ಜಾಯೆ' ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಪ್ರೇಕ್ಷಕರಿಗೆ ಪ್ರೀತಿಯ ರಸದೌತಣ ನೀಡಿದೆ. ವಿದೇಶಿ ತಾಣಗಳಲ್ಲಿ ಚಿತ್ರೀಕರಿಸಿರುವ ಹಾಡಿನಲ್ಲಿ ಇಬ್ಬರ ಕೆಮಿಸ್ಟ್ರಿ, ಆಕರ್ಷಕ ನೃತ್ಯ ಹಾಗೂ ವಿಭಿನ್ನ ಲೊಕೇಷನ್‌ಗಳು ಗಮನ ಸೆಳೆಯುತ್ತವೆ.

ಆದರೆ ಹಾಡು ಕೇವಲ ಪ್ರಣಯಕ್ಕೆ ಸೀಮಿತವಾಗಿಲ್ಲ. ರಕ್ತಪಾತ, ಹಿಂಸಾತ್ಮಕ ದೃಶ್ಯಗಳು ಮತ್ತು ಸ್ಟೈಲಿಶ್ ಆಕ್ಷನ್ ಕೂಡ ಇದರಲ್ಲಿವೆ. ಚಿತ್ರದ ಮುಖ್ಯ ಕಥೆಗೆ ಸಂಬಂಧಿಸಿದ ರಹಸ್ಯ ಮಿಷನ್‌ನ ಸಣ್ಣ ಸುಳಿವನ್ನೂ ಹಾಡಿನಲ್ಲಿ ತೋರಿಸಲಾಗಿದೆ.ಶಾರುಖ್ ಖಾನ್ ಹಾಡಿನಲ್ಲಿ ತಮ್ಮ ಪಾತ್ರವನ್ನು ಪರಿಚಯಿಸಿಕೊಳ್ಳುವ ಸಂಭಾಷಣೆ ಕೂಡ ವಿಶೇಷವಾಗಿದೆ.ಈ ಹಾಡು ನೋಡಿದಾಗ ಶಾರುಖ್ ಮತ್ತು ದೀಪಿಕಾ ಈ ಹಿಂದೆ ನಟಿಸಿದ್ದ 'ಪಠಾಣ್' ಹಾಗೂ 'ಜವಾನ್' ಸಿನಿಮಾಗಳ ಜೋಡಿಯ ನೆನಪಾಗುತ್ತದೆ.

ಶಾರುಖ್ ಹುಟ್ಟುಹಬ್ಬಕ್ಕೆ ಮನ್ನತ್ ಮುಂದೆ ಸಂಭ್ರಮ

ಪ್ರತಿವರ್ಷ ಹುಟ್ಟುಹಬ್ಬದ ಸಂದರ್ಭದಲ್ಲಿ ಮನ್ನತ್ ಮನೆಯ ಮುಂದೆ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದ ಶಾರುಖ್, ಈ ಬಾರಿ ಕೆಲಸದ ಒತ್ತಡದಿಂದಾಗಿ ಎಂದಿನಂತೆ ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಆದರೂ ಅಭಿಮಾನಿಗಳ ಸಂಭ್ರಮಕ್ಕೆ ಯಾವುದೇ ಕೊರತೆಯಾಗಿಲ್ಲ. ಹುಟ್ಟುಹಬ್ಬದ ಹಿಂದಿನ ರಾತ್ರಿಯಿಂದಲೇ ಸಾವಿರಾರು ಅಭಿಮಾನಿಗಳು ಮನ್ನತ್ ಮನೆಯ ಮುಂದೆ ಜಮಾಯಿಸಿ ತಮ್ಮ ನೆಚ್ಚಿನ ನಟನನ್ನು ನೋಡಲು ಕಾದಿದ್ದರು.

ಇನ್ನೊಂದೆಡೆ, ಶಾರುಖ್ ಅವರ ಹುಟ್ಟುಹಬ್ಬದ ಪ್ರಯುಕ್ತ 'ಕಿಂಗ್' ಚಿತ್ರದ ಮೂರು ಟೀಸರ್ ಪೋಸ್ಟರ್‌ಗಳನ್ನು ಮನ್ನತ್ ಮನೆಯ ಹೊರಗಿನ ಬೃಹತ್ ಎಲ್‌ಇಡಿ ಪರದೆಗಳಲ್ಲಿ ಪ್ರದರ್ಶಿಸಲಾಗಿದೆ.

'ಕಿಂಗ್' ಚಿತ್ರದಲ್ಲಿ ದೊಡ್ಡ ತಾರಾಬಳಗ

'ಪಠಾಣ್' ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಮತ್ತು ಶಾರುಖ್ ಖಾನ್ ಮತ್ತೊಮ್ಮೆ ಒಂದಾಗಿರುವ ಸಿನಿಮಾ 'ಕಿಂಗ್'. ಈ ಚಿತ್ರದಲ್ಲಿ ಶಾರುಖ್ ಮತ್ತು ದೀಪಿಕಾ ಜೋಡಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದೆ.ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಹೊಸ ಪೋಸ್ಟರ್‌ನಲ್ಲಿ ಶಾರುಖ್ ಅವರ ವಿಭಿನ್ನ ಹಾಗೂ ಆಕ್ಷನ್ ಪ್ರಧಾನ ಲುಕ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು.

ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಅವರ ಪುತ್ರಿ ಸುಹಾನಾ ಖಾನ್, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ರಾಣಿ ಮುಖರ್ಜಿ, ಜಾಕಿ ಶ್ರಾಫ್, ಅರ್ಷದ್ ವಾರ್ಸಿ ಮತ್ತು ಅಭಯ್ ವರ್ಮಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.ಇದಲ್ಲದೆ, ಕರೀನಾ ಕಪೂರ್ ಕೂಡ ಚಿತ್ರದಲ್ಲಿ ವಿಶೇಷ ಡ್ಯಾನ್ಸ್ ನಂಬರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: Amitabh Bachchan: ಬುಲೆಟ್‌ಪ್ರೂಫ್ ಗಾಜಿನ ಒಳಗಿನಿಂದ ಅಭಿಮಾನಿಗಳಿಗೆ ಕೈಬೀಸಿದ ಅಮಿತಾಭ್ ಬಚ್ಚನ್!

ಶಾರುಖ್ ಖಾನ್ ಅಭಿನಯದ 'ಕಿಂಗ್' ಸಿನಿಮಾ 2026ರ ಡಿಸೆಂಬರ್ 24ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.