ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ravana Movie: ರಾಮಾಯಣದಲ್ಲಿ ಯಶ್ ಅಭಿನಯಕ್ಕೆ ನಟ ಶರದ್ ಕೆಲ್ಕರ್ ಫಿದಾ!

Ravana Movie: ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ (Ramayana Movie) ಸಿನಿಮಾದ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರಬರುತ್ತಿವೆ. ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಚಿತ್ರದ ಹಿಂದಿ ವರ್ಷನ್‌ನಲ್ಲಿ ಯಶ್ (Yash) ಪಾತ್ರಕ್ಕೆ ಧ್ವನಿ ನೀಡಿರುವ ಖ್ಯಾತ ಡಬ್ಬಿಂಗ್ ಕಲಾವಿದ ಹಾಗೂ ನಟ ಶರದ್ ಕೆಲ್ಕರ್ ಕೂಡ ಯಶ್ ಅಭಿನಯವನ್ನು ಹಾಡಿಹೊಗಳಿದ್ದಾರೆ.

ರಾಮಾಯಣದಲ್ಲಿ ಯಶ್ ಅಭಿನಯಕ್ಕೆ ನಟ ಶರದ್ ಕೆಲ್ಕರ್ ಫಿದಾ!

ನಟ ಯಶ್‌ -

Yashaswi Devadiga
Yashaswi Devadiga Nov 12, 2026 8:46 PM

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ (Ramayana Movie) ಸಿನಿಮಾದ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರಬರುತ್ತಿವೆ. ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಚಿತ್ರದ ಹಿಂದಿ ವರ್ಷನ್‌ನಲ್ಲಿ ಯಶ್ (Yash) ಪಾತ್ರಕ್ಕೆ ಧ್ವನಿ ನೀಡಿರುವ ಖ್ಯಾತ ಡಬ್ಬಿಂಗ್ ಕಲಾವಿದ ಹಾಗೂ ನಟ ಶರದ್ ಕೆಲ್ಕರ್ ಕೂಡ ಯಶ್ ಅಭಿನಯವನ್ನು ಹಾಡಿಹೊಗಳಿದ್ದಾರೆ.

ಗುರುವಾರ ನಡೆದ ‘ಕಾಲಿ ಖೇತಿ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶರದ್ ಕೆಲ್ಕರ್, ಯಶ್‌ಗೆ ಡಬ್ಬಿಂಗ್ ಮಾಡುವುದು ಸ್ವಲ್ಪ ಸವಾಲಿನ ಕೆಲಸವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣ ಯಶ್ ಅವರ ಅದ್ಭುತ ಅಭಿನಯ ಎಂದು ಅವರು ತಿಳಿಸಿದ್ದಾರೆ.

‘ಯಶ್ ಅಭಿನಯಕ್ಕೆ ನಾನು ಮೆಚ್ಚುಗೆ ನೀಡಲೇಬೇಕು’

‘ರಾಮಾಯಣ’ ಸಿನಿಮಾದ ಹಿಂದಿ ವರ್ಷನ್‌ನಲ್ಲಿ ಯಶ್ ಅವರ ರಾವಣನ ಪಾತ್ರಕ್ಕೆ ಧ್ವನಿ ನೀಡಿರುವ ಶರದ್ ಕೆಲ್ಕರ್ ಅವರಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾತನಾಡಿದ ಅವರು, ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.ಕಾರ್ಯಕ್ರಮದಲ್ಲಿ ತಮ್ಮ ಡಬ್ಬಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತವಾದಾಗ, ಶರದ್ ಕೆಲ್ಕರ್ ಯಶ್ ಅವರ ಸಿನಿಮಾದ ಡೈಲಾಗ್ ಒಂದನ್ನು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: ಸೌಂದರ್ಯಾ-ಕಿರಣ್ ನಡುವೆ ನೇರ ವಾಗ್ದಾಳಿ; ಅಧ್ಯಕ್ಷ ಮಂಜು ಕಠಿಣ ನಿರ್ಧಾರ

“ಮೂರು ಲೋಕಗಳಲ್ಲಿ ಒಂದೇ ಒಂದು ಸಾಮ್ರಾಜ್ಯ ಇರಬೇಕು, ಅದು ಕೆಲ್ಕರ್ ಸಾಮ್ರಾಜ್ಯ” ಎಂದು ತಮಾಷೆಯಾಗಿ ಡೈಲಾಗ್ ಹೇಳಿ ನೆರೆದಿದ್ದವರನ್ನು ರಂಜಿಸಿದ್ದಾರೆ.

ಬಳಿಕ ಯಶ್ ಅಭಿನಯದ ಬಗ್ಗೆ ಮಾತನಾಡಿದ ಅವರು, “ನಾನು ಯಶ್ ಅವರಿಗೆ ಖಂಡಿತವಾಗಿಯೂ ಮೆಚ್ಚುಗೆ ನೀಡಲೇಬೇಕು. ಸಿನಿಮಾದಲ್ಲಿ ಅವರು ಅಭಿನಯಿಸಿರುವ ರೀತಿ ಅದ್ಭುತವಾಗಿದೆ. ಅವರ ಪಾತ್ರವನ್ನು ಬೇರೆ ಯಾರೂ ಇಷ್ಟು ಚೆನ್ನಾಗಿ ನಿರ್ವಹಿಸಲು ಸಾಧ್ಯವಿರಲಿಲ್ಲ ಎಂದು ನನಗನಿಸುತ್ತದೆ. ಅವರು ಅತ್ಯಂತ ಪ್ರತಿಭಾವಂತ ನಟ. ಅವರು ಆ ಪಾತ್ರಕ್ಕೆ ಜೀವ ತುಂಬಿರುವ ರೀತಿ ನಿಜಕ್ಕೂ ಅದ್ಭುತ. ಅದಕ್ಕಾಗಿಯೇ ಸಿನಿಮಾದಲ್ಲಿ ಅವರ ಅಭಿನಯಕ್ಕೆ ಇಷ್ಟೊಂದು ಮೆಚ್ಚುಗೆ ಸಿಗುತ್ತಿದೆ” ಎಂದು ಹೇಳಿದ್ದಾರೆ.

ಯಶ್‌ಗೆ ಡಬ್ಬಿಂಗ್ ಮಾಡುವುದು ಸುಲಭವಾಗಿರಲಿಲ್ಲ!

ಯಶ್ ಅವರ ಅಭಿನಯ ಎಷ್ಟು ಅದ್ಭುತವಾಗಿತ್ತು ಎಂದರೆ, ಅವರಿಗೆ ಹಿಂದಿಯಲ್ಲಿ ಧ್ವನಿ ನೀಡುವಾಗ ಸ್ವಲ್ಪ ಕಷ್ಟವಾಯಿತು ಎಂದು ಶರದ್ ಕೆಲ್ಕರ್ ಒಪ್ಪಿಕೊಂಡಿದ್ದಾರೆ.“ಅವರಿಗೆ ಡಬ್ಬಿಂಗ್ ಮಾಡುವಾಗ ನನಗೆ ಸ್ವಲ್ಪ ಕಷ್ಟವಾಯಿತು. ಏಕೆಂದರೆ ಸಿನಿಮಾದಲ್ಲಿ ಅವರು ಅಷ್ಟು ಅದ್ಭುತವಾಗಿ ಅಭಿನಯಿಸಿದ್ದಾರೆ. ಆದರೂ ನಿಮ್ಮೆಲ್ಲರಿಗೂ ಸಿನಿಮಾ ಮತ್ತು ನನ್ನ ಧ್ವನಿ ಇಷ್ಟವಾಗಿರುವುದಕ್ಕೆ ಧನ್ಯವಾದಗಳು” ಎಂದು ಶರದ್ ಹೇಳಿದ್ದಾರೆ.

ರಾವಣನ ಪಾತ್ರ ನಿರ್ವಹಿಸುವ ಒತ್ತಡದ ಬಗ್ಗೆ ಯಶ್ ಮಾತು

ಇದಕ್ಕೂ ಮೊದಲು ಐಜಿಎನ್ (IGN) ಸಂದರ್ಶನದಲ್ಲಿ ಮಾತನಾಡಿದ್ದ ಯಶ್, ರಾವಣನಂತಹ ಪೌರಾಣಿಕ ಪಾತ್ರವನ್ನು ನಿರ್ವಹಿಸುವಾಗ ಎದುರಾದ ಸವಾಲುಗಳ ಬಗ್ಗೆ ಹೇಳಿಕೊಂಡಿದ್ದರು.

“ಒಂದು ಪಾತ್ರದ ಬಗ್ಗೆ ಜನರಿಗೆ ಈಗಾಗಲೇ ಸಾಕಷ್ಟು ತಿಳಿದಿದ್ದರೆ, ಅದನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗುತ್ತದೆ. ಹೊಸ ಕಥೆಯನ್ನು ಹೇಳುವ ಸಿನಿಮಾದಲ್ಲಿ ನೀವು ಹೇಗೆ ಪಾತ್ರವನ್ನು ರೂಪಿಸುತ್ತೀರೋ ಅದೇ ಪಾತ್ರವಾಗುತ್ತದೆ. ಆದರೆ ಈಗಾಗಲೇ ಅನೇಕ ಕಲಾವಿದರು ವಿಭಿನ್ನ ರೀತಿಯಲ್ಲಿ ಆ ಪಾತ್ರವನ್ನು ನಿರ್ವಹಿಸಿರುವಾಗ, ಪ್ರೇಕ್ಷಕರ ಮನಸ್ಸಿನಲ್ಲಿ ಅದರ ಬಗ್ಗೆ ಒಂದು ನಿರ್ದಿಷ್ಟ ಚಿತ್ರಣ ಇರುತ್ತದೆ. ಇದು ನಟನ ಮೇಲೆ ಹೆಚ್ಚುವರಿ ಒತ್ತಡವನ್ನು ಸೃಷ್ಟಿಸುತ್ತದೆ” ಎಂದು ಯಶ್ ವಿವರಿಸಿದ್ದರು.

“ಆದರೆ ರಾವಣನ ಪಾತ್ರವನ್ನು ಅರ್ಥಮಾಡಿಕೊಳ್ಳಲು ನಾನು ಸರಳವಾದ ಮೂಲಭೂತ ವಿಚಾರಗಳತ್ತ ಗಮನ ಹರಿಸಿದೆ. ಆತ ಅಂತಹ ಕೆಲಸಗಳನ್ನು ಮಾಡಲು ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಆತನ ಉದ್ದೇಶವೇ ನನಗೆ ಮುಖ್ಯವಾಗಿತ್ತು” ಎಂದು ಯಶ್ ಹೇಳಿದ್ದಾರೆ.

1000 ಕೋಟಿ ರೂ. ಕ್ಲಬ್ ಸೇರಿದ ‘ರಾಮಾಯಣ’!

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ಶ್ರೀರಾಮನಾಗಿ, ಸಾಯಿ ಪಲ್ಲವಿ ಅವರು ಸೀತೆಯಾಗಿ ಹಾಗೂ ಯಶ್ ಅವರು ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಡಿಎನ್‌ಇಜಿ ಸಂಸ್ಥೆಗಳು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜೊತೆಗೂಡಿ ಈ ಸಿನಿಮಾವನ್ನು ನಿರ್ಮಿಸಿವೆ.

ಇದನ್ನೂ ಓದಿ: Daayra OTT: ಪೃಥ್ವಿರಾಜ್‌ –ಕರೀನಾ ಕಪೂರ್‌ ಅಭಿನಯದ ಈ ಥ್ರಿಲ್ಲರ್‌ ಮೂವಿ ಒಟಿಟಿಗೆ ಎಂಟ್ರಿ!

ಗುರುವಾರದ ವೇಳೆಗೆ ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿಗಳ ಗಡಿ ದಾಟಿದೆ ಎಂಬ ಮಾಹಿತಿಯೂ ವರದಿಯಾಗಿದೆ.