ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Choo Mantar Kannada Movie: ಸದ್ದಿಲ್ಲದೆ ಒಟಿಟಿಗೆ ಬಂತು ಕನ್ನಡದ ಈ ಹಾರರ್-ಥ್ರಿಲ್ಲರ್ ಸಿನಿಮಾ: ಮಿಸ್ ಮಾಡ್ಬೇಡಿ

ಶರಣ್ ಅಭಿನಯದ ಛೂ ಮಂತರ್ ಸಿನಿಮಾ ಇದೀಗ ಸದ್ದಿಲ್ಲದೆ ಓಟಿಟಿಗೆ ಪ್ರವೇಶ ಪಡೆದಿದೆ. ಇದು ಕೇವಲ ಹಾರರ್ ಸಿನಿಮಾ ಅಲ್ಲ. ಶರಣ್ ಇದ್ದಲ್ಲಿ ಹಾಸ್ಯ ಇರಲೇಬೇಕು. ಅದರಲ್ಲೂ ಚಿಕ್ಕಣ್ಣ ಜೊತೆಗಿದ್ದರೆ ಕೇಳಬೇಕೆ? ಈ ಚಿತ್ರದಲ್ಲಿ ಹಾಸ್ಯವೂ ಕೂಡ ಕೊಂಚ ಹೆಚ್ಚೇ ಇದೆ. ಜೊತೆಗೆ ಥ್ರಿಲ್ಲಿಂಗ್ ಕೊಡುವ ಅಂಶ ಕೂಡ ಇದೆ.

ಒಟಿಟಿಗೆ ಬಂತು ಕನ್ನಡದ ಈ ಹಾರರ್-ಥ್ರಿಲ್ಲರ್ ಸಿನಿಮಾ: ಮಿಸ್ ಮಾಡ್ಬೇಡಿ

choo mantar kannada movie

Profile Vinay Bhat Apr 1, 2025 7:13 AM

ಒಟಿಟಿಯಲ್ಲಿ ಇತ್ತೀಚಿನ ಕನ್ನಡ ಚಿತ್ರಗಳು ಹುಡುಕುತ್ತಿದ್ದೀರಾ?. ಕ್ರೈಮ್ ಥ್ರಿಲ್ಲರ್‌ಗಳಿಂದ (Crime Thriller) ಹಿಡಿದು ಭಾವನಾತ್ಮಕ ಡ್ರಾಮಗಳವರೆಗೂ, ಹಲವಾರು ರೋಮಾಂಚಕಾರಿ ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಸದ್ದಿಲ್ಲದೆ ರಿಲೀಸ್ ಆಗುತ್ತಿದೆ. ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಜಿಯೋ ಹಾಟ್‌ಸ್ಟಾರ್ ಮತ್ತು ಇನ್ನೂ ಹೆಚ್ಚಿನ ವೇದಿಕೆಗಳಲ್ಲಿ ಇವುಗಳ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಕಾಮಿಡಿ ಜತೆಗೆ ಸಸ್ಪೆನ್ಸ್‌ ಸಿನಿಮಾಗಳೂ ಸ್ಟ್ರೀಮಿಂಗ್‌ ಆರಂಭಿಸಿವೆ. ಈ ಪೈಕಿ ಚಿತ್ರಮಂದಿರಗಳಲ್ಲಿ ಹಿಟ್‌ ಪಟ್ಟ ಪಡೆದು, ಒಟಿಟಿಯಲ್ಲಿಯೂ ಕಮಾಲ್‌ ಮಾಡುತ್ತಿದೆ ಕನ್ನಡ ಛೂ ಮಂತರ್ ಸಿನಿಮಾ.

ಶರಣ್ ಅಭಿನಯದ ಛೂ ಮಂತರ್ ಸಿನಿಮಾ ಇದೀಗ ಸದ್ದಿಲ್ಲದೆ ಓಟಿಟಿಗೆ ಪ್ರವೇಶ ಪಡೆದಿದೆ. ಇದು ಕೇವಲ ಹಾರರ್ ಸಿನಿಮಾ ಅಲ್ಲ. ಶರಣ್ ಇದ್ದಲ್ಲಿ ಹಾಸ್ಯ ಇರಲೇಬೇಕು. ಅದರಲ್ಲೂ ಚಿಕ್ಕಣ್ಣ ಜೊತೆಗಿದ್ದರೆ ಕೇಳಬೇಕೆ? ಈ ಚಿತ್ರದಲ್ಲಿ ಹಾಸ್ಯವೂ ಕೂಡ ಕೊಂಚ ಹೆಚ್ಚೇ ಇದೆ. ಜೊತೆಗೆ ಥ್ರಿಲ್ಲಿಂಗ್ ಕೊಡುವ ಅಂಶ ಕೂಡ ಇದೆ.

ಈ ವರ್ಷ ಮೊದಲು ಹಿಟ್ ಲಿಸ್ಟ್ ಸೇರಿದ ಕನ್ನಡ ಸಿನಿಮಾ ಛೂ ಮಂತರ್. ತರುಣ್ ಶಿವಪ್ಪ ನಿರ್ಮಾಣದ ಈ ಚಿತ್ರವನ್ನು ಕರ್ವ ಸಿನಿಮಾ ಖ್ಯಾತಿಯ ನವನೀತ್ ಕಟ್ಟಿಕೊಟ್ಟಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 10ಕ್ಕೆ ಬಂದಿದ್ದ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿತ್ತು. 50 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಬಳಿಕ ಇದೀಗ ಓಟಿಟಿಗೆ ಬಂದಿದೆ. ಶರಣ್ ಹಾಗೂ ಚಿಕ್ಕಣ್ಣ ಜೊತೆಗೆ ಅದಿತಿ ಪ್ರಭುದೇವ, ಮೇಘನಾ ಗಾವ್ಕಂರ್, ಪ್ರಭು ಮುಂಡ್ಕರ್, ಗುರುಕಿರಣ್, ಓಂ ಪ್ರಕಾಶ್ ರಾವ್, ಪ್ರಥಮ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಂದನ್ ಶೆಟ್ಟಿ ಹಾಗೂ ಅವಿನಾಶ್ ಬಸುಟ್ಕರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಅನೂಪ್ ಕುಟ್ಟುಕರನ್ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ.

Trivikram: ಈ ದಿನಾಂಕದಿಂದ ಪ್ರಸಾರವಾಗಲಿದೆ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ

ಕೆಲವರಿಗೆ ಹಾರರ್ ಸಿನಿಮಾಗಳು ಇಷ್ಟ ಆಗೋದಿಲ್ಲ. ಆದರೆ, ಛೂ ಮಂತರ್ ಆ ರೀತಿ ಇಲ್ಲ. ಇಲ್ಲಿ ಹಾರರ್ ಅಂಶಗಳು ಇದ್ದರೂ ಅದನ್ನು ಆರಾಮಾಗಿ ವೀಕ್ಷಿಸಬಹುದು. ಒಂದು ಬಂಗಲೆಯಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಈ ಚಿತ್ರದಲ್ಲಿ ಹಲವು ಟ್ವಿಸ್ಟ್​ಗಳು ಬರುತ್ತವೆ. ಅದರಲ್ಲೂ ಮಧ್ಯಂತರದಲ್ಲಿ ಸಿಗೋ ಟ್ವಿಸ್ಟ್​ನ ಯಾರೂ ಊಹಿಸಲು ಸಾಧ್ಯವಿಲ್ಲ. ಸಿನಿಮಾದ ನಿಜವಾದ ಚಿತ್ರಕಥೆ ತಿಳಿದಾಗ ಥ್ರಿಲ್ ಆಗೋದು ಗ್ಯಾರಂಟಿ.