ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shiva Rajkumar Birthday: ‘ಸರ್ವೈವರ್’ ಸಾಕ್ಷ್ಯಚಿತ್ರದ ಪ್ರೋಮೋ ಔಟ್‌! ಶಿವಣ್ಣ ಕಷ್ಟದ ದಿನಗಳ ಸಂಪೂರ್ಣ ಚಿತ್ರವಿದು

Shiva Rajkumar Birthday: ಶಿವರಾಜ್​ಕುಮಾರ್ ಅವರು ಅನಾರೋಗ್ಯದ ಕಾರಣದಿಂದ ಒಂದಷ್ಟು ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಗೀತಾ ಶಿವರಾಜ್​ಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಮೂಲಕ ಈ ಸಾಕ್ಷ್ಯಚಿತ್ರ ನಿರ್ಮಾಣ ಆಗಿದೆ. ಹುಟ್ಟುಹಬ್ಬದ ಪ್ರಯುಕ್ತ ಅದರ ಪ್ರೋಮೋ ರಿಲೀಸ್ ಮಾಡಲಾಗಿದ್ದು, ಶಿವರಾಜ್​ಕುಮಾರ್, ಮಧು ಬಂಗಾರಪ್ಪ, ನಿವೇದಿತಾ ಶಿವರಾಜ್​ಕುಮಾರ್ ಇದರಲ್ಲಿ ಮಾತನಾಡಿದ್ದಾರೆ.

Shiva Rajkumar Birthday: ‘ಸರ್ವೈವರ್’ ಸಾಕ್ಷ್ಯಚಿತ್ರದ ಪ್ರೋಮೋ ಔಟ್‌!

ಶಿವರಾಜ್‌ ಕುಮಾರ್‌ -

Yashaswi Devadiga
Yashaswi Devadiga Jul 12, 2026 9:10 AM

ಶಿವರಾಜ್ ಕುಮಾರ್ (Shiva Rajkumar) ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. 63 ಮುಗಿಸಿ 64 ಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಶಕ್ತಿಧಾಮಕ್ಕೆ ಧನ ಸಹಾಯ ಮಾಡೋಕೆ ಮುಂದಾಗಿದ್ದಾರೆ. ಶಿವಣ್ಣ ಕೂಡ ಒಂದು ಮನವಿ ಮಾಡಿದ್ದಾರೆ. ಕೇಕ್ ಮತ್ತು ಇತರ ಉಡುಗೊರೆ ತರಬೇಡಿ ಅಂತಲೇ ಕೇಳಿಕೊಂಡಿದ್ದಾರೆ. ಇದರ ನಡುವೆ ಒಂದು ವಿಶೇಷ ಪ್ರೋಮೋ ಹಂಚಿಕೊಳ್ಳಲಾಗಿದೆ. . ‘ಸರ್ವೈವರ್’ (Survivor) ಶೀರ್ಷಿಕೆಯಲ್ಲಿ ಸಾಕ್ಷ್ಯಚಿತ್ರ ಸಿದ್ಧವಾಗಿದೆ. ಶೀಘ್ರದಲ್ಲೇ ಅದು ಬಿಡುಗಡೆ ಆಗಲಿದೆ.

ಶಿವರಾಜ್​ಕುಮಾರ್ ಅವರು ಅನಾರೋಗ್ಯದ ಕಾರಣದಿಂದ ಒಂದಷ್ಟು ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಗೀತಾ ಶಿವರಾಜ್​ಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಮೂಲಕ ಈ ಸಾಕ್ಷ್ಯಚಿತ್ರ ನಿರ್ಮಾಣ ಆಗಿದೆ. ಹುಟ್ಟುಹಬ್ಬದ ಪ್ರಯುಕ್ತ ಅದರ ಪ್ರೋಮೋ ರಿಲೀಸ್ ಮಾಡಲಾಗಿದ್ದು, ಶಿವರಾಜ್​ಕುಮಾರ್, ಮಧು ಬಂಗಾರಪ್ಪ, ನಿವೇದಿತಾ ಶಿವರಾಜ್​ಕುಮಾರ್ ಇದರಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: Singer S Janaki: ಗಾನ ಕೋಗಿಲೆ ಎಸ್.ಜಾನಕಿ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು!

ಕಿಚ್ಚ ಸುದೀಪ್, ಸಾಯಿ ಕುಮಾರ್, ಕಮಲ್ ಹಾಸನ್, ನಾಗಾರ್ಜುನ, ದುನಿಯಾ ವಿಜಯ್, ಡಾಲಿ ಧನಂಜಯ ಸೇರಿದಂತೆ ಹಲವರು ಕೂಡ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಆಸ್ಪತ್ರೆಯೊಳಗಿನ ದೃಶ್ಯಗಳು ಕೂಡ ಇದರಲ್ಲಿ ಇವೆ. ಸದ್ಯಕ್ಕೆ ಇದರ ಪ್ರೋಮೋ ಮಾತ್ರ ಬಿಡುಗಡೆ ಆಗಿದ್ದು, ಶೀಘ್ರದಲ್ಲೇ ‘ಗೀತಾ ಪಿಕ್ಚರ್ಸ್’ ಮೂಲಕ ಈ ಸಾಕ್ಷ್ಯಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ.

ಈ ಬಾರಿ ಶಿವಣ್ಣ ಮನವಿ ಇದು



ಶಿವರಾಜ್​​​​ಕುಮಾರ್ ಹೇಳಿದ್ದೇನು?

''ಹಾಯ್​​. ಎಲ್ಲರಿಗೂ ನಮಸ್ಕಾರ. ಜುಲೈ 12, ನನ್ನ ಹುಟ್ದಬ್ಬ. ನಿಮ್ಮೆಲ್ಲರಿಗೂ ಗೊತ್ತೇ ಇದೆ. ನೀವೆಲ್ಲರೂ ಬರ್ತೀರ. ಬನ್ನಿ. ಆದ್ರೆ ಈ ವರ್ಷ ನನ್ನದೊಂದು ವಿನಂತಿ ಇದೆ. ಯಾವುದೇ ತರಹದ ಉಡುಗೊರೆ ತರಲು ಹೋಗಬೇಡಿ. ವಿಶೇಷವಾಗಿ, ಕೇಕ್​, ಹಾರ, ಶಾಲು ಯಾವುದೂ ಬೇಡ. ಆದ್ರೆ ನಿಮ್ಮಗಳ ಪರವಾಗಿ ನಾನೊಂದು ಕೇಕ್​ ಕಟ್​ ಮಾಡ್ತೀನಿ. ನಿಮ್ಮ ವಿಶಸ್ಸೇ ನನಗೆ ಆಶೀರ್ವಾದ. ಎಲ್ಲರೂ ಬನ್ನಿ. ಸೇರೋಣ. ಮಜಾ ಮಾಡೋಣ''.ಎಂದಿದ್ದಾರೆ.

ಇನ್ನೂ ಸಿನಿಮಾ ವಿಚಾರ ಗಮನಿಸೋದಾದ್ರೆ, ಶಿವರಾಜ್​​ಕುಮಾರ್​ ಬ್ಯಾಕ್​ ಟು ಬ್ಯಾಕ್​​ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಆರ್​ಆರ್​ಆರ್​ ಸ್ಟಾರ್ ರಾಮ್​ ಚರಣ್​ ಮುಖ್ಯಭೂಮಿಕೆಯ ಪೆದ್ದಿ ಸಿನಿಮಾದಲ್ಲಿ ಕಾಣಿಸಿಕೊಂಡ ಹ್ಯಾಟ್ರಿಕ್ ಹೋರೋನ ಕೈಯಲ್ಲಿ 10ಕ್ಕೂ ಹೆಚ್ಚು ಚಿತ್ರಗಳಿವೆ. ಅದರಲ್ಲಿ ​'666 ಆಪರೇಷನ್ ಡ್ರೀಮ್ ಥಿಯೇಟರ್' ಈ ವರ್ಷ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.

ಇದನ್ನೂ ಓದಿ: Ramayana Movie: ‘ರಾಮಾಯಣ’ ಚಿತ್ರದ ಟ್ರೇಲರ್ ರಿಲೀಸ್‌ ಡೇಟ್‌ ಅನೌನ್ಸ್‌!

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಶಿವಣ್ಣನ ಜೊತೆ ನಟರಾಕ್ಷಸ ಡಾಲಿ ಧನಂಜಯ್ ಮುಖ್ಯಭೂಮಿಕೆಯಲ್ಲಿ ತೆರೆಹಂಚಿಕೊಂಡಿದ್ದಾರೆ.