ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Saraswati Chandra Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ; ನಾಯಕ, ನಾಯಕಿ ಇವರೇ!

Saraswati Chandra Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ (Colors Kannada) ‘ಸರಸ್ವತಿ ಚಂದ್ರ’ (Saraswati chandra serial) ಸೀರಿಯಲ್‌ ಬರಲು ರೆಡಿಯಾಗಿದೆ. ಮುಖ್ಯಮಂತ್ರಿ ಚಂದ್ರು ಅವರು ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುಧಾರಾಣಿ (Sudharani) ಕೂಡ ಇರಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಯಾವ ಸೀರಿಯಲ್‌ ಮುಕ್ತಾಯ ಆಗುತ್ತೆ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ!

ಸರಸ್ವತಿ ಚಂದ್ರ ಧಾರಾವಾಹಿ -

Yashaswi Devadiga
Yashaswi Devadiga Oct 23, 2026 8:05 PM

ಕಲರ್ಸ್‌ ಕನ್ನಡ ವಾಹಿನಿಯಲ್ಲಿ (Colors Kannada) ‘ಸರಸ್ವತಿ ಚಂದ್ರ’ (Saraswati chandra serial) ಸೀರಿಯಲ್‌ ಬರಲು ರೆಡಿಯಾಗಿದೆ. ಮುಖ್ಯಮಂತ್ರಿ ಚಂದ್ರು ಅವರು ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುಧಾರಾಣಿ (Sudharani) ಕೂಡ ಇರಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಯಾವ ಸೀರಿಯಲ್‌ ಮುಕ್ತಾಯ ಆಗುತ್ತೆ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ 'ದೃಷ್ಟಿ' ಎಂಬ ಮುಖ್ಯ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅರ್ಪಿತಾ ಮೋಹಿತೆ ಈ ಸೀರಿಯಲ್‌ ನಾಯಕಿ. ಆನಂದ ರಾಗ ಸೀರಿಯಲ್ ನಲ್ಲಿ ನಟಿಸಿದ್ದರು. ರಿಯಲ್ ಲೈಫಲ್ಲಿ ಈಕೆ ಮುದ್ದು ಮುಖದ ಸುಂದರಿ, ಅಪ್ಸರೆಯನ್ನು ಮೀರಿಸುವ ಸೌಂದರ್ಯ ಇವರಿಗಿದೆ ಎಂದರೆ ತಪ್ಪಾಗಲ್ಲ. ಸರಸ್ವತಿ ಚಂದ್ರ’ ಧಾರಾವಾಹಿ ಮೂಲಕ ಹೊಸ ನಾಯಕ ಚಮನ್‌ ನಾಯ್ಕ್‌ ನಟಸಲಿದ್ದಾರೆ.

ಇದನ್ನೂ ಓದಿ: Bigg Boss Kannada 13: ತಾಂಡವ್ ರಾಮ್ ಪರ ಮಾತಾಡಿದ ಗಗನ್‌! ಸೌಂದರ್ಯಾ ಶೆಟ್ಟಿ ತಕರಾರು

ನವೀಲಗರಿ ಸೋಮು ಹಾಗೂ ನಿರ್ದೇಶಕ ಹರ್ಷಪ್ರಿಯಾ ಅವರು ಜೊತೆಗೆ ಸೇರಿ ‘ಮಹ’ ಹೊಸ ನಿರ್ಮಾಣ ಸಂಸ್ಥೆಯನ್ನ ಮಾಡಿದ್ದರು. ಇವರೆ ನಿರ್ಮಾಣ ಎನ್ನಲಾಗಿದೆ.

ಸರಸ್ವತಿ ಚಂದ್ರ’ ಧಾರಾವಾಹಿಯ ಟೀಸರ್‌ನಲ್ಲಿಮಗು ಸತ್ತೋಯ್ತು ಅಂತ ತಾಯಿಗೆ ಹೇಳು ಎಂದು ನರ್ಸ್‌ಗೆ ಹೇಳ್ತಾರೆ ಮುಖ್ಯಮಂತ್ರಿ ಚಂದ್ರು ಅವರು. ಇದೊಂದು ರಿಮೇಕ್‌ ಕಥೆ ಎಂದು ಹೇಳಲಾಗುತ್ತಿದೆ. ಇನ್ನು ಯಾವ ಸೀರಿಯಲ್‌ ಅಂತ್ಯ ಆಗಲಿದೆ ಎಂಬ ಮಾಹಿತಿ ಇಲ್ಲ.