ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ತಾಂಡವ್ ರಾಮ್ ಪರ ಮಾತಾಡಿದ ಗಗನ್‌! ಸೌಂದರ್ಯಾ ಶೆಟ್ಟಿ ತಕರಾರು

Bigg Boss Kannada 13:ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ರಲ್ಲಿ (Bigg Boss Kannada 13) ಈ ವಾರ ಸ್ಪರ್ಧಿಗಳ ನಡುವಿನ ಪೈಪೋಟಿ ತೀವ್ರಗೊಂಡಿದೆ. ಇದೇ ಆಟ ಮುಂದುವರಿದರೆ ಸೌಂದರ್ಯ ಶೆಟ್ಟಿ (Soundarya shetty), ತಾಂಡವ್ ಮತ್ತು ಆಸಿಯಾ ಟಾಪ್ 3 ಸ್ಥಾನಕ್ಕೆ ತಲುಪೋದು ಫಿಕ್ಸ್ ಎನ್ನಲಾಗುತ್ತಿದೆ. ಗಗನ್ ಚಿನ್ನಪ್ಪ (Gagan Chinnappa) ಮತ್ತು ತಾಂಡವ್ ರಾಮ್ ಅವರ ನಡುವೆ ಒಳ್ಳೆಯ ಸ್ನೇಹವಿದೆ.

ತಾಂಡವ್ ರಾಮ್ ಪರ ಮಾತಾಡಿದ ಗಗನ್‌!  ಸೌಂದರ್ಯಾ ಶೆಟ್ಟಿ ತಕರಾರು

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 23, 2026 7:18 PM

`ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ರಲ್ಲಿ (Bigg Boss Kannada 13) ಈ ವಾರ ಸ್ಪರ್ಧಿಗಳ ನಡುವಿನ ಪೈಪೋಟಿ ತೀವ್ರಗೊಂಡಿದೆ. ಇದೇ ಆಟ ಮುಂದುವರಿದರೆ ಸೌಂದರ್ಯ ಶೆಟ್ಟಿ (Soundarya shetty), ತಾಂಡವ್ ಮತ್ತು ಆಸಿಯಾ ಟಾಪ್ 3 ಸ್ಥಾನಕ್ಕೆ ತಲುಪೋದು ಫಿಕ್ಸ್ ಎನ್ನಲಾಗುತ್ತಿದೆ. ಗಗನ್ ಚಿನ್ನಪ್ಪ (Gagan Chinnappa) ಮತ್ತು ತಾಂಡವ್ ರಾಮ್ ಅವರ ನಡುವೆ ಒಳ್ಳೆಯ ಸ್ನೇಹವಿದೆ.

ಈ ವಾರದ ಟಾಸ್ಕ್​ನಲ್ಲಿ ಯಾರು ಚೆನ್ನಾಗಿ ಆಟ ಆಡಿದ್ದಾರೆ ಎಂಬುದನ್ನು ನಿರ್ಧರಿಸುವ ಸಂದರ್ಭ ಬಂದಾಗ ಗಗನ್ ಚಿನ್ನಪ್ಪ ಅವರು ತಾಂಡವ್ ರಾಮ್ ಹೆಸರು ಹೇಳಿದ್ದಾರೆ. ಆದರೆ ಅದಕ್ಕೆ ಸೌಂದರ್ಯಾ ಶೆಟ್ಟಿ ತಕರಾರು ತೆಗೆದಿದ್ದಾರೆ. . ಈ ಮೊದಲು ಕೂಡ ಸೌಂದರ್ಯಾ ಶೆಟ್ಟಿ ಅವರು ಆಡಿದ ಮಾತುಗಳಿಂದಾಗಿ ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ನಡುವಿನ ಸ್ನೇಹದಲ್ಲಿ ಬಿರುಕು ಮೂಡುವ ಸಾಧ್ಯತೆ ಎದುರಾಗಿತ್ತು.

ಇದನ್ನೂ ಓದಿ: Bigg Boss Kannada 13: ರಕ್ಷಕರ ಜಗಳದಲ್ಲಿ ಲೂಟಿಗಾರರಿಗೆ ಲಾಭ!

ತಾಳ್ಮೆ ಮತ್ತು ಸೈಲೆಂಟ್ ಗೇಮ್‌ ಪ್ಲಾನ್ ಸೌಂದರ್ಯ ಅವರ ಆಟದ ಸ್ಟೈಲ್‌ ವೀಕ್ಷಕರಿಗೆ ಆರಂಭದಿಂದಲೂ ಇಷ್ಟವಾಗುತ್ತಿದೆ. ಪ್ರತಿಯೊಂದು ವಿಚಾರದಲ್ಲೂ ಅನಗತ್ಯ ಜಗಳಕ್ಕೆ ಹೋಗದೇ, ತಮ್ಮ ತಾಳ್ಮೆಯನ್ನು ಕಾಯ್ದುಕೊಳ್ಳುತ್ತಾ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳೋದು ಅವರ ಪ್ಲಸ್ ಪಾಯಿಂಟ್.

ಇದನ್ನೂ ಓದಿ: Bigg Boss Kannada 13: ಸೌಂದರ್ಯ ಕ್ವಾಟ್ಲೆಗೆ ಗಗನ್ ತಲೆ 'ಗಿರ ಗಿರ'!

ಇನ್ನೊಂದೆಡೆ ತಾಂಡವ್ ಅವರ ಪ್ರದರ್ಶನ ಡೈಮೆಂಡ್‌ ಟಾಸ್ಕ್‌ನಲ್ಲಿ ಭರ್ಜರಿಯಾಗಿತ್ತು. ʻಬಿಗ್‌ ಬಾಸ್‌ʼನಲ್ಲಿ ಭರ್ಜರಿ ಕಂಬ್ಯಾಕ್‌ ಮಾಡಿರುವ ತಾಂಡವ್‌ ಆಟದ ವೈಖರಿಗೆ ವೀಕ್ಷಕರು ಫಿದಾ ಆಗಿದ್ದಾರೆ.