Sikandar Naache: ʼಸಿಕಂದರ್ʼ ಚಿತ್ರದ ಹೊಸ ಹಾಡು ರಿಲೀಸ್; ಭರ್ಜರಿ ಸ್ಟೆಪ್ ಹಾಕಿದ ಸಲ್ಮಾನ್ ಖಾನ್-ರಶ್ಮಿಕಾ ಮಂದಣ್ಣ
Sikandar Naache Song Out: ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪೈಕಿ ಒಂದು ಎನಿಸಿಕೊಂಡಿರುವ ಸಲ್ಮಾನ್ ಖಾನ್ -ರಶ್ಮಿಕಾ ಮಂದಣ್ಣ ಜೋಡಿಯ 'ಸಿಕಂದರ್'ನ ಹೊಸ ಹಾಡಿ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ. ಸಿಕಂದರ್ ನಾಚೆʼ ಹೆಸರಿನ ಈ ಹಾಡಿನಲ್ಲಿ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ.

ಸಲ್ಮಾನ್ ಖಾನ್-ರಶ್ಮಿಕಾ ಮಂದಣ್ಣ.

ಮುಂಬೈ: ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪೈಕಿ ಒಂದು ಎನಿಸಿಕೊಂಡಿರುವ ಸಲ್ಮಾನ್ ಖಾನ್ (Salman Khan)-ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯ 'ಸಿಕಂದರ್' (Sikandar Movie) ಫ್ಯಾನ್ಸ್‌ಗೆ ಮತ್ತೊಂದು ಗಿಫ್ಟ್ ನೀಡಿದೆ. ಈಗಾಗಲೇ ಟೀಸರ್, ಹಾಡಿನ ಮೂಲಕ ಗಮನ ಸೆಳೆದಿರುವ ಚಿತ್ರತಂಡ ಇದೀಗ ಡ್ಯಾನ್ಸಿಂಗ್ ನಂಬರ್ ರಿಲೀಸ್ ಮಾಡಿದೆ. ʼಸಿಕಂದರ್ ನಾಚೆʼ (Sikandar Naache) ಹೆಸರಿನ ಈ ಹಾಡಿನಲ್ಲಿ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಭರ್ಜರಿಯಾಗಿ ಸ್ಟೆಪ್ ಹಾಕಿದ್ದು, ಈ ವರ್ಷದ ಹಿಟ್ ಲಿಸ್ಟ್‌ಗೆ ಸೇರುವ ಎಲ್ಲ ಸಾಧ್ಯತೆ ಇದೆ.
ಸಲ್ಮಾನ್ ಖಾನ್ ಬೀಟ್‌ಗೆ ತಕ್ಕಂತೆ ಹೆಜ್ಜೆ ಹಾಕಿದ್ದರೆ, ಈಗಾಗಲೇ ಡ್ಯಾನ್ಸ್ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿರುವ ರಶ್ಮಿಕಾ ಮಂದಣ್ಣ ಭರ್ಜರಿಯಾಗಿ ಸಾಥ್ ನೀಡಿದ್ದಾರೆ. ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಈ ಜೋಡಿ ಈಗಾಗಲೇ ಬಾಲಿವುಡ್‌ನ ಗಮನ ಸೆಳೆದಿದೆ. ಸಮೀರ್ ಅಂಜಾನ್ ಬರೆದ ಹಾಡಿಗೆ ಅಮಿತ್ ಮಿಶ್ರಾ, ಆಕಾಶ್ ಮತ್ತು ಸಿದ್ಧಾರ್ಥ್ ಮಿಶ್ರಾ ಧ್ವನಿ ನೀಡಿದ್ದಾರೆ.
ʼಸಿಕಂದರ್ ನಾಚೆʼ ಹಾಡಿನ ಲಿಂಕ್ ಇಲ್ಲದೆ:
ಟರ್ಕಿಯಲ್ಲಿ ಈ ಹಾಡಿನ ಶೂಟಿಂಗ್ ನಡೆದಿದೆ. 2014ರಲ್ಲಿ ತೆರೆಕಂಡ ʼಕಿಕ್ʼ ಚಿತ್ರದ ಬ್ಲಾಕ್ ಬ್ಲಸ್ಟರ್ ʼಜುಮ್ಮೆ ಕಿ ರಾತ್ʼ ಬಳಿಕ ಸಲ್ಮಾನ್ ಖಾನ್-ಸಾಜಿದ್ ನಾಡಿಯಾವಾಲ ಮತ್ತು ಅಹಮ್ಮದ್ ಖಾನ್ (ಕೊರಿಯಾಗ್ರಾಫರ್) ಮತ್ತೆ ಈ ಹಾಡಿನಲ್ಲಿ ಒಂದಾಗಿರುವುದು ವಿಶೇಷ. ʼಸಿಕಂದರ್ʼ ಈದ್ ವೇಳೆಗೆ ಅಂದರೆ ಈ ಮಾಸಾತ್ಯಂದಲ್ಲಿ ವಿಶ್ವಾದ್ಯಂತ ತೆರೆಗೆ ಬರಲಿದೆ.
ಈ ಸುದ್ದಿಯನ್ನೂ ಓದಿ: Sikandar Teaser Out: ಸಲ್ಮಾನ್-ರಶ್ಮಿಕಾ ನಟನೆಯ ಬಹು ನಿರೀಕ್ಷಿತ ʼಸಿಕಂದರ್ʼ ಚಿತ್ರದ ಟೀಸರ್ ಔಟ್
ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ, ಕಾಲಿವುಡ್‌ನ ಎ.ಆರ್.ಮುರುಗದಾಸ್ (A.R. Murugadoss) ಮೊದಲ ಬಾರಿಗೆ ಸಲ್ಮಾನ್ ಖಾನ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಹಲವು ಕಾರಣಗಳಿಗೆ ನಿರೀಕ್ಷೆ ಹೆಚ್ಚಿಸಿದೆ. ಸದ್ಯ ಬಾಲಿವುಡ್‌ನಲ್ಲಿ ಗಮನ ಸೆಳೆಯುತ್ತಿರುವ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ಪ್ರಥಮ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದು ಈ ಸಿನಿಮಾದ ಪ್ರಮುಖ ಆಕರ್ಷಣೆ. ಇವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ, ಬಹುಭಾಷಾ ಕಲಾವಿದೆ ಕಾಜಲ್ ಅಗರ್ವಾಲ್, ಕನ್ನಡದ ಕಿಶೋರ್, ಸುನೀಲ್ ಶೆಟ್ಟಿ, ಪ್ರತೀಕ್ ಬಬ್ಬರ್, ಚೈತನ್ಯ ಚೌಧರಿ, ನವಾಬ್ ಶಾ ಮತ್ತಿತರರು ನಟಿಸಿದ್ದಾರೆ.
ಗೆಲುವಿನ ಟ್ರ್ಯಾಕ್‌ಗ ಮರಳುತ್ತಾರಾ ಸಲ್ಮಾನ್?
ಬಹು ನಿರೀಕ್ಷೆಯೊಂದಿಗೆ ತೆರೆಕಂಡ ಸಲ್ಮಾನ್ ಖಾನ್ ಅವರ ಇತ್ತೀಚಿನ ಚಿತ್ರಗಳು ಯಾವುದೂ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿಲ್ಲ. ಹೀಗಾಗಿ ಬಹುದೊಡ್ಡ ಗೆಲುವುಗಾಗಿ ಅವರು ಕಾದಿದ್ದಾರೆ. ಲಕ್ಕಿ ಚಾರ್ಮ್ ಎನಿಸಿಕೊಂಡಿರುವ ರಶ್ಮಿಕಾ ಈ ಸಿನಿಮಾದಲ್ಲಿ ನಾಯಕಿಯಾಗಿರುವುದರಿಂದಲೂ ನಿರೀಕ್ಷೆ ದುಪ್ಪಟ್ಟಾಗಿದೆ. ʼಅನಿಮಲ್ʼ, ʼಪುಷ್ಪ 2ʼ ಮತ್ತು ಇತ್ತೀಚೆಗೆ ರಿಲೀಸ್ ಆದ ʼಛಾವಾʼ ಚಿತ್ರದ ಮೂಲಕ ರಶ್ಮಿಕಾ ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ. ಅವರ ಈ 3 ಚಿತ್ರಗಳೂ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿವೆ. ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ʼಸಿಕಂದರ್ʼ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.