ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಕಕಾಲಕ್ಕೆ ಪುರುಷ-ಸ್ತ್ರೀ ಧ್ವನಿಯಲ್ಲಿ ಹಾಡಿದ ಸೋನು ನಿಗಮ್‌; ನೇಹಾ ಕಕ್ಕರ್‌ಗಿಂತಲೂ ವಾಯ್ಸ್‌ ಚೆನ್ನಾಗಿದೆ ಎಂದು ಗಾಯಕಿಯ ಕಾಲೆಳೆದ ನೆಟ್ಟಿಗರು

Sonu Nigam: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಹಿನ್ನಲೆ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್‌ ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ಈ ವೇಳೆ ಹಾಡೊಂದನ್ನು ಏಕಕಾಲಕ್ಕೆ ಪುರುಷ ಮತ್ತು ಸ್ತ್ರೀ ಧ್ವನಿಯಲ್ಲಿ ಹಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ಗಾಯಕನ ಪ್ರತಿಭೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಏಕಕಾಲಕ್ಕೆ ಪುರುಷ-ಸ್ತ್ರೀ ಧ್ವನಿಯಲ್ಲಿ ಹಾಡಿದ ಸೋನು ನಿಗಮ್‌

ಸೋನು ನಿಗಮ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Sep 15, 2026 7:44 PM

ವಾಷಿಂಗ್ಟನ್‌, ಸೆ. 15: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಹಿನ್ನಲೆ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್‌ (Sonu Nigam), ತಮ್ಮ ವಿಶಿಷ್ಟ ಗಾಯನ ಶೈಲಿ ಮತ್ತು ಧ್ವನಿ ಬದಲಿಸುವ ಕೌಶಲ್ಯದಿಂದ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಲೈವ್‌ ಕಾನ್ಸರ್ಟ್‌ನಲ್ಲಿ ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ (Shah Rukh Khan) ಅವರ ʼಡಾನ್‌ʼ ಸಿನಿಮಾದ ಹಿಟ್‌ ಹಾಡನ್ನು ಪುರುಷ ಮತ್ತು ಸ್ತ್ರೀ ಧ್ವನಿಯಲ್ಲಿ ಹಾಡುವ ಮೂಲಕ ಅಭಿಮಾನಿಗಳನ್ನು ದಂಗಾಗಿಸಿದ್ದರೆ. ಪ್ರಸ್ತುತ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ (Viral Video) ಆಗುತ್ತಿದ್ದು, ನೆಟ್ಟಿಗರು ನೇಹಾ ಕಕ್ಕರ್‌ಗಿಂತ ಸೋನು ನಿಗಮ್‌ ಅವರ ಮಹಿಳಾ ಧ್ವನಿಯೇ ಸೂಪರ್‌ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಸೋನು ನಿಗಮ್‌, ನ್ಯೂಯಾರ್ಕ್‌ನ ನಾಸ್ಸೌ ವೆಟರನ್ಸ್‌ ಮೆಮೊರಿಯಲ್‌ ಕೋಲಿಸಿಯಮ್‌ನಲ್ಲಿ ನಡೆದ ದಿ ರೆವಲ್ಯೂಷನ್‌ ಮ್ಯೂಸಿಕ್‌ ಶೋದಲ್ಲಿ ಹಾಡುತ್ತಿದ್ದರು. ಈ ವೇಳೆ 2006ರ ಶಾರುಖ್‌ ಖಾನ್‌ ಅಭಿನಯದ ʼಡಾನ್‌ʼ ಚಿತ್ರದ ಪ್ರಸಿದ್ಧ ʼಆಜ್‌ ಕಿ ರಾತ್‌ʼ ಹಾಡನ್ನು ಹಾಡಲು ಪ್ರಾರಂಭಿಸಿದರು. ಮೂಲ ಹಾಡಿನಲ್ಲಿ ಸೋನು ನಿಗಮ್‌ ಅವರ ಜತೆಗೆ ಗಾಯಕಿಯರಾದ ಅಲಿಶಾ ಚಿನಾಯ್‌ ಮತ್ತು ಮಹಾಲಕ್ಷ್ಮೀ ಅಯ್ಯರ್‌ ಧ್ವನಿ ನೀಡಿದ್ದರು. ಆದರೆ ಈ ಲೈವ್‌ ಕಾನ್ಸರ್ಟ್‌ನಲ್ಲಿ ಯಾವುದೇ ಗಾಯಕಿ ಇಲ್ಲದಿದ್ದರೂ ಸೋನು ನಿಗಮ್‌ ತಾವೊಬ್ಬರೇ ಗಂಡಿನ ಭಾಗ ಮಾತ್ರವಲ್ಲದೆ, ಅಲಿಶಾ ಮತ್ತು ಮಹಾಲಕ್ಷ್ಮೀ ಅವರ ಸಾಲುಗಳನ್ನು ಅತ್ಯಂತ ನಿಖರವಾಗಿ ಹೆಣ್ಣಿನ ಧ್ವನಿಯಲ್ಲಿ ಹಾಡಿದರು. ವೇದಿಕೆಯಲ್ಲಿ ನೈಜ ಮಹಿಳಾ ಗಾಯಕಿ ಹಾಡುತ್ತಿರುವಂತೆ ಉಂಟಾದ ಭ್ರಮೆಗೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಸೋನು ನಿಗಮ್‌ ಅವರ ಹಾಡು:

ನೇಹಾ ಕಕ್ಕರ್‌ಗಿಂತಲೂ ಸಖತ್‌: ಕಾಮೆಂಟ್ಸ್‌ ವೈರಲ್‌

ಸೋನು ನಿಗಮ್‌ ಅವರ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಹಲ್‌ಚಲ್‌ ಸೃಷ್ಟಿಸುತ್ತಿದ್ದು, ನೆಟ್ಟಿಗರ ಕಾಮೆಂಟ್ಸ್‌ಗಳು ವೈರಲ್‌ ಆಗುತ್ತಿವೆ. ನೇಹಾ ಕಕ್ಕರ್‌ಗೆ ಹೋಲಿಕೆ ಮಾಡಿರುವ ಒಬ್ಬ ವ್ಯಕ್ತಿ, ʼʼಅಬ್ಬಾ ಸೋನು ನಿಗಮ್‌ ಅವರ ಫೇಕ್ ಫೀಮೆಲ್‌ ವಾಯ್ಸ್‌ ಕೂಡಾ ನೇಹಾ ಕಕ್ಕರಗಿಂತ ಸೂಪರ್‌ ಆಗಿದೆʼʼ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು, ʼʼಕಣ್ಣು ಮುಚ್ಚಿ ಕೇಳಿದರೆ ಸೋನು ನಿಗಮ್ ಹಾಡುತ್ತಿದ್ದಾರೋ ಅಥವಾ ಸುನಿಧಿ ಚೌಹಾಣ್ ಹಾಡುತ್ತಿದ್ದಾರೋ ಎಂದು ಗುರುತಿಸುವುದು ಕಷ್ಟʼʼ ಎಂದು ಬರೆದುಕೊಂಡಿದ್ದಾರೆ. ಸಂಗೀತ ಲೋಕದ ನಿಜವಾದ ಲೆಜೆಂಡ್ ಅಂದರೆ ಇವರು, ಗಾಯನದಲ್ಲೂ ಇಷ್ಟೊಂದು ರೇಂಜ್ ಇಟ್ಟುಕೊಳ್ಳುವುದು ಪವಾಡವೇ ಸರಿ ಎಂದು ಫ್ಯಾನ್ಸ್ ಕೊಂಡಾಡಿದ್ದಾರೆ.

ಸೋನು ನಿಗಮ್‌ ಜತೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಪರಭಾಷಾ ಗಾಯಕರು ಇವರು

54 ಧ್ವನಿಗಳಲ್ಲಿ ಹಾಡಿದ ಹಳೆಯ ದಾಖಲೆ

ಸೋನು ನಿಗಮ್‌ ಧ್ವನಿ ಬದಲಾಯಿಸಿ ಪ್ರಯೋಗ ಮಾಡಿರುವುದು‌ ಇದೇ ಮೊದಲೇನಲ್ಲ. ಹಿಂದೆ 2010ರಲ್ಲಿ ತೆರೆಕಂಡ ಅಕ್ಷಯ್‌ ಕುಮಾರ ಅವರ ʼತೀಸ್‌ ಮಾರ ಖಾನ್‌ʼ ಚಿತ್ರದ ಟೈಟಲ್‌ ಟ್ರ್ಯಾಕ್‌ನಲ್ಲಿ, ಸೋನು ನಿಗಮ್‌ ಒಂದೇ ಹಾಡಿಗೆ ತಮ್ಮದೇ ಧ್ವನಿಯಲ್ಲಿ 54 ವಿಭಿನ್ನ ಶೈಲಿ ಮತ್ತು ವೈವಿಧ್ಯತೆಗಳನ್ನು ಬಳಸಿ ಗಿನ್ನೆಸ್‌ ಮಾದರಿಯ ಸಾಧನೆ ಮಾಡಿದ್ದರು.

ಪ್ರಸ್ತುತ ಅಮೆರಿಕ ಕಾನ್ಸರ್ಟ್‌ನ ಈ ಶಾರ್ಟ್‌ ಕ್ಲಿಪ್‌ ಎಲ್ಲಡೆ ವೈರಲ್‌ ಆಗುತ್ತಿದ್ದು, ಭಾರತೀಯ ಸಂಗೀತ ಹಾಗೂ ಅದ್ಭುತ ಕಂಠಸಿರಿಗೆ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮನರಂಜನೆ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.