Hari Paraak Column: ಸೋನು ನಿಗಮ್ ಹಾಡು ಮಾತು
ಸ್ವಂತ ಪ್ರತಿಭೆಯಿಂದ ದೊಡ್ಡ ಹೆಸರು ಮಾಡಿದವರು. ಕನ್ನಡ ಹಾಡು ಬೇಕು ಅಂತ ಕೇಳಿದವರು ಹೇಗೆ ಕೇಳಿದರು ಅನ್ನೋದಕ್ಕೂ ಒಂದು ವಿಡಿಯೋ ಮಾಡಿ ಹಾಕಿದ್ದಾರೆ ಸೋನು. ಕನ್ನಡ ಹಾಡು ಹಾಡಿ ಅಂತ ಕೇಳೋದಕ್ಕೂ ಹೆದರಿಸೋ ದಕ್ಕೂ ವ್ಯತ್ಯಾಸ ಇದೆ ಅಂತ ಎಕ್ಸ್ ಪ್ರೆಶನ್ ಸಮೇತ ತೋರಿಸಿದ್ದಾರೆ.


ತುಂಟರಗಾಳಿ
ಸಿನಿಗನ್ನಡ
ಗಾಯಕ ಸೋನು ನಿಗಮ್ ವಿವಾದಕ್ಕೀಡಾಗಿದ್ದಾರೆ. ಸಾಮಾನ್ಯವಾಗಿ ಅವರು ಹಾಡುವ ಹಾಡುಗಳು ಫೇಮಸ್ ಆಗುತ್ತವೆ. ಆದರೆ ಈಗ ಅವರ ಮಾತುಗಳು ಇನ್ ಫೇಮಸ್ ಆಗಿವೆ. ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಅಲ್ಲಿ ಕೆಲವರು ಕನ್ನಡ ಹಾಡು ಹಾಡಿ ಅಂತ ಕೇಳಿದ ರೀತಿ ಸರಿ ಇಲ್ಲ ಅಂತ ಅದನ್ನು ಭಯೋತ್ಪಾದನೆಗೆ ಹೋಲಿಸಿದ್ದಾರೆ. ಸೋನು ನಿಗಮ್ ಅವರು ಈ ರೀತಿ ಮಾಡಿದ್ದು ತಪ್ಪೇ ಇರಬಹುದು. ಆದರೆ ಅದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಸೋನು ಬಗ್ಗೆ ವಿಷ ಕಾರುತ್ತಿದ್ದಾರೆ. ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸೋನುಗೆ ಹಾಡೋಕೆ ಬರಲ್ಲ, ಅವನಿಗೆ ಬಾಲಿವುಡ್‌ನಲ್ಲಿ ಮಾರ್ಕೆಟ್ ಕಡಿಮೆ ಆದಾಗ ಕನ್ನಡದಲ್ಲಿ ಚಾ ಕೊಟ್ಟು ಬೆಳೆಸಿದ್ದು ನಾವು ಅಂತೆಲ್ಲ ಬಡಬಡಾಯಿಸಿ ಬಡಾಯಿ ಕೊಚ್ಚಿಕೊಂಡಿ ದ್ದಾರೆ. ಹಾಗೆ ನೋಡಿದರೆ ಸೋನುಗೆ ಬಾಲಿವುಡ್‌ನಲ್ಲಿ ಅಂದೂ ಮಾರ್ಕೆಟ್ ಇತ್ತು, ಇಂದೂ ಇದೆ.
ಅವರು ಯಾರ ಅನುಕಂಪದಲ್ಲೂ ಬೆಳೆದ ಗಾಯಕ ಅಲ್ಲ. ಸ್ವಂತ ಪ್ರತಿಭೆಯಿಂದ ದೊಡ್ಡ ಹೆಸರು ಮಾಡಿದವರು. ಕನ್ನಡ ಹಾಡು ಬೇಕು ಅಂತ ಕೇಳಿದವರು ಹೇಗೆ ಕೇಳಿದರು ಅನ್ನೋದಕ್ಕೂ ಒಂದು ವಿಡಿಯೋ ಮಾಡಿ ಹಾಕಿದ್ದಾರೆ ಸೋನು. ಕನ್ನಡ ಹಾಡು ಹಾಡಿ ಅಂತ ಕೇಳೋದಕ್ಕೂ ಹೆದರಿಸೋ ದಕ್ಕೂ ವ್ಯತ್ಯಾಸ ಇದೆ ಅಂತ ಎಕ್ಸ್ ಪ್ರೆಶನ್ ಸಮೇತ ತೋರಿಸಿದ್ದಾರೆ.
ಅದರ ಜತೆಗೆ ಕನ್ನಡಿಗರು ತುಂಬಾ ಸ್ವೀಟ್. ಎಲ್ಲೋ ಒಂದೆರಡು ಜನ ಇಂಥವರು ಇರ್ತಾರೆ ಅಂತ ಲೂ ಹೇಳಿದ್ದಾರೆ. ಹಾಗೆ ನೋಡಿದರೆ ತಾವು ಹೋದ ಕಾರ್ಯಕ್ರಮಗಳ ಕನ್ನಡ ಹಾಡು ಹಾಡದೆ ಸೋನು ಸ್ಟೇಜ್‌ನಿಂದ ಕೆಳಗಿಳಿದಿದ್ದು ಅಪರೂಪ. ತುಂಬು ಸಭೆಯಲ್ಲಿ ಯಾರೇ ಒಬ್ಬ ಕನ್ನಡ ಹಾಡು ಕೇಳಿದರೂ ನಾನು ಹಾಡುತ್ತೇನೆ ಅಂತಲೂ ಅವರು ಹಲವಾರು ಬಾರಿ ಹೇಳಿದ್ದಾರೆ. ಅದು ಅವರ ಕನ್ನಡ ಪ್ರೇಮ. ಆದರೆ, ಅವರು ಆಡಿದ ಯಾವುದೋ ಒಂದು ಮಾತನ್ನು ಹಿಡಿದುಕೊಂಡು ಅವರನ್ನು ಹೀಯಾಳಿಸುತ್ತಿರೋದು ಮಾತ್ರ ಸರಿಯಾದ ಬೆಳವಣಿಗೆ ಅಲ್ಲ.
ಇದನ್ನೂ ಓದಿ: Hari Paraak Column: ʼಕಾಮಿಡಿ ವಿತ್ ಕಪಿಲ್ʼ ಕಾರ್ಯಕ್ರಮದ ಕಂಟೆಂಟ್ -ʼಕಪಿಲʼ ವಸ್ತು
ಲೂಸ್ ಟಾಕ್- ರಾಮ್ ಗೋಪಾಲ್ ವರ್ಮಾ
ವರ್ಮಾ ಅನ್ನೋ ಹೆಸರು ಕೇಳಿದರೆ ನಿಮ್ಮದು ಯಾವುದೋ ರಾಜರ ವಂಶ ಅನ್ಸುತ್ತೆ. ಹೌದಾ?
- ಹೌದು. ನಮ್ದು ರಾಜರ ವಂಶನೇ. ಆದ್ರೆ, ನಮ್ ವಂಶದಲ್ಲಿ ನಾನೇ ಮೊದಲ ರಾಜ.
ನಿಮ್ಮ ಪ್ರಕಾರ ಪರ್ಫೆಕ್ಷನಿ ಅಂದ್ರೆ ಯಾರು?
- ಏನನ್ನೂ ಮಾಡದೇ ಎಲ್ಲವನ್ನೂ ಚೆನ್ನಾಗಿ ಮಾಡಿದ್ದೀನಿ ಅಂದೊಳ್ಳುವವನು, ಉದಾಹರಣೆಗೆ ಕರಣ್ ಜೋಹರ್ ಈ ಕರಣ್ ಜೋಹರ್
ಫ್ಯಾಮಿಲಿ ಸಿನಿಮಾಗಳಿಗೂ ನಿಮ್ಮ ಸಿನಿಮಾಗಳಿಗೂ ಏನು ವ್ಯತ್ಯಾಸ?
- ವ್ಯತ್ಯಾಸ ಏನೂ ಇಲ್ಲ. ಮಾ, ಬೆಹನ್ ಸಂಭಾಷಣೆಗಳು ಇಬ್ರ ಸಿನಿಮಾದಲ್ಲೂ ಇರುತ್ತೆ. ಆದ್ರೆ ಬೇರೆ ಬೇರೆ ರೂಪದಲ್ಲಿ.
ಸರಿ, ಬರೀ ರಕ್ತದ ಸಿನಿಮಾ ಮಾಡೋ ನಿಮಗೆ ಗುಲಾಬಿ ಹೂ ಇಷ್ಟ ಆಗಲ್ವಾ?
ಅಯ್ಯೋ ಆಗುತ್ತೆ ಕಣೋ, ಆ ಕಾಲದ ಸಿನಿಮಾ ಮಾಡಿದ್ನಲ್ಲ ಅನಗನಗಾ ಒಕ ‘ರೋಜು’ ಅಂತ. ಸಕ್ಸಸ್ ಅನ್ನೋದು ಕೆಲವರಿಗೆ ಒಂದೇ ಸಲಕ್ಕೆ ಸುಲಭವಾಗಿ ಸಿಗುತ್ತೆ.
ಕೆಲವರಿಗೆ ಎಷ್ಟು ಕಷ್ಟ ಪಟ್ರೂ ಸಿಗಲ್ಲ ಯಾಕೆ?
- ಮಕ್ಕಳಾಗಲಿಲ್ಲ ಅಂತ ಕೆಲವರು ಎಷ್ಟೊಂದ್ ಟ್ರೈ ಮಾಡ್ತಾ ಇರ್ತಾರೆ. ಆದ್ರೂ ಆಗೊಲ್ಲ. ಆದ್ರೆ ನಮ್ಮ ಸಿನಿಮಾಗಳಲ್ಲಿ ವಿಲನ್ ಒಂದ್ ಸಲ ರೇಪ್ ಮಾಡಿದ್ ತಕ್ಷಣ ಹುಡುಗಿ ಗರ್ಭಿಣಿ ಆಗ್ಬಿಡ್ತಾಳೆ. ಇದೂ ಹಂಗೆ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಮನೆಗೆ ಅವನ ದೂರದ ಕಸಿನ್ ಒಬ್ಬಳು ಬಂದಿದ್ದಳು. ಇನ್ನೂ ಹದಿಹರೆಯದ ಹುಡುಗಿ, ಹುಡುಗರ ಬಗ್ಗೆ ಆಕರ್ಷಣೆ ಜಾಸ್ತಿ. ಈ ಹುಡುಗಿ ಹೆಂಡತಿ ಕಡೆಯ ಸಂಬಂಧಿಕಳಾದ್ದರಿಂದ ಅವಳ ಬಗ್ಗೆ ಖೇಮುಗೆ ಇನ್ನಿಲ್ಲದೆ ಕಾಳಜಿ. ಆದರೆ ಖೇಮು ಮನೆಯ ಕೆಲಸಗಾರ ಸೋಮು ಕೂಡ ಆ ಹುಡುಗಿಯ ರೀತಿಯವನೇ, ಹುಡುಗಿಯರು ಕಣ್ಣಿಗೆ ಬಿದ್ದರೆ ಸಾಕು ಬಾಯಿ ಬಿಡುತ್ತಿದ್ದ. ಹಾಗಾಗಿ ಅವರಿಬ್ಬರ ನಡುವೆ ಸಲುಗೆ ಶುರುವಾಯಿತು. ಅದು ತೀರಾ ವಿಪರೀತಕ್ಕೂ ಹೋಯಿತು. ಖೇಮುಗೆ ಇದ್ಯಾವುದೂ ಗೊತ್ತಿರಲಿಲ್ಲ. ಒಂದು ದಿನ ಆಫೀಸಿನಿಂದ ಮನೆಗೆ ಬೇಗ ಬಂದ, ಖೇಮುಶ್ರೀ ಎಲ್ಲೋ ಹೊರಗೆ ಹೋಗಿದ್ದಳು. ಇವನು ಸೀದಾ ಮನೆಗೆ ಬಂದಿದ್ದ ಕಸಿನ್ ಹುಡುಗಿ ರೂಮಿಗೆ ಕುಶಲ ವಿಚಾ ರಿಸಲು ಹೋದ, ಫಸ್ಟ್ ಫ್ಲೋರ್‌ನಲ್ಲಿದ್ದ ಅವಳ ಬೆಡ್ ರೂಮ್‌ಗೆ ಹೋಗಿ ನೋಡಿದರೆ ಅವಳು ಅಲ್ಲಿ ಹಾಸಿಗೆ ಮೇಲೆ ಬೆವರುತ್ತಾ ಮಲಗಿದ್ದಳು.
ಮೈ ಮೇಲಿನ ಬಟ್ಟೆ ಕೂಡ ಅವಸರದಲ್ಲಿ ಹಾಕಿಕೊಂಡಂತಿತ್ತು. ಗಾಬರಿಯಾಗಿ ‘ಏನಾಯ್ತು?’ ಅಂತ ಕೇಳಿದ. ಅದಕ್ಕೆ ಹುಡುಗಿ ಒದ್ದಾಡುವವಳಂತೆ ನಟಿಸುತ್ತ, ‘ಅಂಕಲ್ ನನಗೆ ಹಾರ್ಟ್ ಅಟ್ಯಾಕ್ ಆಗಿದೆ’ ಅಂತ ಸುಳ್ಳು ಹೇಳಿದಳು.
ಖೇಮು ಗಾಬರಿಯಾಗಿ ಕೆಳಗೆ ಇಟ್ಟಿದ್ದ ತನ್ನ ಮೊಬೈಲ್‌ನಿಂದ ಡಾಕ್ಟರ್‌ಗೆ ಫೋನ್ ಮಾಡಲು ಇಳಿದು ಬಂದ. ಅಷ್ಟರಲ್ಲಿ ಅಪ್ಪನ ಬಳಿ ಬಂದ ಮರಿ ಖೇಮು ‘ಅಪ್ಪಾ ಅಪ್ಪಾ, ಮೇಲ್ಗಡೆ ಆಂಟಿ ರೂಮಲ್ಲಿ,
ಸೋಮಣ್ಣ ವಾಡ್ ರೋಬ್ ಒಳಗೆ ಬಟ್ಟೆನೇ ಹಾಕಿಕೊಳ್ಳದೆ ನಿಂತಿzನೆ’ ಅಂತ ಕಿವಿ ಊದಿದ.
ಖೇಮುಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಫೋನ್ ಅನ್ನು ಬಿಸಾಕಿ ದಡೆ ದಢನೇ ಹುಡುಗಿಯ ರೂಮಿಗೆ ಹೋಗಿ ಅಲ್ಲಿದ್ದ ವಾರ್ಡ್‌ರೋಬ್ ತೆಗೆದು ನೋಡಿದ. ಮರಿಖೇಮು ಹೇಳಿದ್ದು ನಿಜವಾಗಿತ್ತು. ಸೋಮು ಅಲ್ಲಿ ಬೆತ್ತಲೆಯಾಗಿ ನಿಂತಿದ್ದ, ಖೇಮುವನ್ನು ನೋಡಿ ಗಾಬರಿಯಾದ. ಒಮ್ಮೆಲೇ ಕೆಂಡಾ ಮಂಡಲವಾದ ಖೇಮು ಸೋಮುವನ್ನು ಬಯ್ಯತೊಡಗಿದ- “ರ‍್ಯಾಸ್ಕಲ್, ಈಡಿಯಟ್, ನಿಂಗೆ ನಾಚಿಕೆ ಆಗಲ್ವಾ ಇಂಥಾ ಕೆಲಸ ಮಾಡೋಕೆ. ಅಲ್ಲಿ ನನ್ನ ಕಸಿನ್ ಹಾರ್ಟ್ ಅಟ್ಯಾಕ್ ಅಂತ ಒದ್ದಾಡ್ತಾ ಇದ್ರೆ, ನೀನಿಲ್ಲಿ ಬೆತ್ತಲಾಗಿ ನಿಂತ್ಕಂಡು ಮನೇಲಿರೋ ಮಕ್ಕಳನ್ನೆ ಹೆದರಿಸೋ ಕೆಲಸ ಮಾಡ್ತಾ ಇದೀಯಾ?".
ಲೈನ್ ಮ್ಯಾನ್
ಐಪಿಎಲ್‌ನಲ್ಲಿ ಬಸವ ತತ್ವ ಪರಿಪಾಲಕ
- ವೈಭವ್ ಸೂರ್ಯವಂಶಿ: ಎನಗಿಂತ ಕಿರಿಯರಿಲ್ಲಯ್ಯಾ
ಇದೇ ತತ್ವ ಅನುಸರಿಸುವ ತಂಡ
- ಸಿಎಸ್‌ಕೆ: ಪಾಯಿಂಟ್ಸ್ ಟೇಬಲ್‌ನಲ್ಲಿ ನನಗಿಂತ ಕೆಳಗೆ ಯಾರಿಲ್ಲಯ್ಯಾ
ಸಿಎಸ್‌ಕೆ ಸಮಸ್ಯೆ
- ಕಾಲೆಳೆಯೋರೆಲ್ಲ ಕಾಲ್ ಕೆಳಗೆ ಇರ್ತಾರೆ ಅಂತಾರೆ. ಆದ್ರೆ, ಎಲ್ರೂ ನಮ್ ಕಾಲ್ ಎಳೆದರೂ ನಮ್ ಕೆಳಗೆ ಯಾರೂ ಇಲ್ಲ, ಪಾಯಿಂಟ್ಸ್ ಟೇಬಲ್‌ನಲ್ಲಿ.
ನೋಡುವಾಗ ಬೋರಾಗಿ ಆಗಾಗ ವಾಚ್ ನೋಡಿಕೊಳ್ಳಬೇಕು ಎನಿಸುವ ಸಿನಿಮಾ
- ಮಸ್ಟ್ ‘ವಾಚ್’ ಸಿನಿಮಾ
ಬ್ಯಾಂಕಿನಲ್ಲಿ ಬಾಕಿ ಇರೋ ದುಡ್ಡನ್ನೆ ಬಾಚಿಕೊಳ್ಳುವ ಪ್ರಕ್ರಿಯೆ
- ಬಾಚಣಿಕೆ
ಕೆಲಸ ಮಾಡುವ ಜಾಗದಲ್ಲಿ ಜವಾಬ್ದಾರಿಯುತ ಜಾಗದಲ್ಲಿರುವವನು
- ಕಂಪನಿಯ ಪಿಲ್ಲರ್
ನಾಮ್-ಕೇ-ವಾಸ್ತೆ ಇರುವವನು
- ಫಿಲ್ಲರ್
ದೆವ್ವದ ಸಿನಿಮಾ ಬಗ್ಗೆ ಬರೆಯುವ ವಿಮರ್ಶೆಯನ್ನು ಏನಂತಾರೆ?
- ‘ಆತ್ಮ’ ವಿಮರ್ಶೆ
ಡಿವೈನ್ ಡೌಟು
- ಯಾರನ್ನಾದರೂ ದೇವಾಂಶ ಸಂ‘ಭೂತ’ ಎಂದು ಕರೆದರೆ ಅದರ ಅರ್ಥ ಅವನಿಗೆ ದೇವರ ಶಕ್ತಿ ಇದೆ ಅಂತಲೋ, ಭೂತದ ಶಕ್ತಿ ಇದೆ ಅಂತಲೋ?
ವಿಚಿತ್ರ
- ಕೆಲವ್ರು ಫೇಸ್‌ಬುಕ್ ಪ್ರೊಫೈಲ್ ಪಿಕ್‌ನಲ್ಲಿ ಎಷ್ಟ್ ಸೀರಿಯಸ್ಸಾಗ್ ಇರ್ತಾರೆ ಅಂದ್ರೆ, ನಮ್
ಪೋಸ್ಟಿಗೆ ಅವ್ರು ಸ್ಮೈಲ್ ರಿಯಾಕ್ಷನ್ ಕೊಟ್ರೆ ನಂಬೋಕೇ ಆಗಲ್ಲ.