ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SS Rajamouli: ʻನನಗೆ ದೇವರಲ್ಲಿ ನಂಬಿಕೆ ಇಲ್ಲʼ; ಎಸ್.ಎಸ್. ರಾಜಮೌಳಿ ಹೇಳಿಕೆ ವಿರುದ್ಧ ಭಾರಿ ಟೀಕೆ

Varanasi Movie: ರಾಮೋಜಿ ಫಿಲ್ಮ್‌ಸಿಟಿಯಲ್ಲಿ ನಡೆಯುತ್ತಿರುವ ‘ಗ್ಲೋಬ್ ಟ್ರೋಟರ್’ ಈವೆಂಟ್‌ನಲ್ಲಿ ಪ್ರದರ್ಶಿಸಲಾದ ವಿಡಿಯೋದಲ್ಲಿ ಮಹೇಶ್‌ ಬಾಬು ಅವರ ಫಸ್ಟ್‌ ಲುಕ್ ಜೊತೆಗೆ ಶೀರ್ಷಿಕೆಯನ್ನು ಸಹ ರಿವೀಲ್ ಮಾಡಲಾಗಿದೆ. 2027ರ ಮಾರ್ಚ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಎಸ್. ರಾಜಮೌಳಿ, ತಾವು ದೇವರನ್ನು ನಂಬುವುದಿಲ್ಲ ಎಂದು ಬಹಿರಂಗಪಡಿಸಿದರು. ಆರ್.ಆರ್.ಆರ್ ಮತ್ತು ಬಾಹುಬಲಿಯಂತಹ ಅವರ ಕೆಲವು ಪ್ರಮುಖ ಕೃತಿಗಳು ಹಿಂದೂ ಪುರಾಣಗಳಿಂದ ಪ್ರೇರಿತವಾಗಿವೆ. ಆದರೀಗ ನಿರ್ದೇಶಕರ ಈ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿದೆ.

ಎಸ್‌ ಎಸ್‌ ರಾಜಮೌಳಿ

ದೇವರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕ ಎಸ್.ಎಸ್. ರಾಜಮೌಳಿ (SS Rajamouli) ಟೀಕೆಗೆ ಗುರಿಯಾಗಿದ್ದಾರೆ. ನವೆಂಬರ್ 15ರ ಶನಿವಾರ, ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಗ್ಲೋಬ್‌ಟ್ರಾಟರ್ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕರು ಭಾಗವಹಿಸಿ ತಮ್ಮ ಚಲನಚಿತ್ರ ವಾರಣಾಸಿಯ (Varanasi Movie Event) ಮೊದಲ ಲುಕ್‌ವನ್ನು ಅನಾವರಣಗೊಳಿಸಿದರು . ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಮಹೇಶ್ ಬಾಬು (Mahesh Babu) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ದೇವರನ್ನು ನಂಬುವುದಿಲ್ಲ

ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಎಸ್. ರಾಜಮೌಳಿ, ತಾವು ದೇವರನ್ನು ನಂಬುವುದಿಲ್ಲ ಎಂದು ಬಹಿರಂಗಪಡಿಸಿದರು. ಆರ್.ಆರ್.ಆರ್ ಮತ್ತು ಬಾಹುಬಲಿಯಂತಹ ಅವರ ಕೆಲವು ಪ್ರಮುಖ ಕೃತಿಗಳು ಹಿಂದೂ ಪುರಾಣಗಳಿಂದ ಪ್ರೇರಿತವಾಗಿವೆ. ಆದರೀಗ ನಿರ್ದೇಶಕರ ಈ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿದೆ.

ಇದನ್ನೂ ಓದಿ: SSMB29: ಕೊಟ್ಟ ಮಾತಿಗೆ ತಪ್ಪಿ ನಡೆಯದ ರಾಜಮೌಳಿ; 'ವಾರಣಾಸಿ' ಚಿತ್ರಕ್ಕಿದೆ 15 ವರ್ಷಗಳ ಹಿಂದಿನ ಒಪ್ಪಂದದ ಇತಿಹಾಸ!

"ಇದು ನನಗೆ ಭಾವನಾತ್ಮಕ ಕ್ಷಣ. ನಾನು ದೇವರನ್ನು ನಂಬುವುದಿಲ್ಲ. ನನ್ನ ತಂದೆ ಯಾವಗಲೂ ಹನುಮಂತ ನನ್ನ ಹಿಂದೆ ಇದ್ದಾನೆ ಮತ್ತು ನನಗೆ ಮಾರ್ಗದರ್ಶನ ನೀಡುತ್ತಿದ್ದಾನೆ ಎಂದು ಹೇಳುತ್ತಲೇ ಇರುತ್ತಾರೆ. ಅವರು ಹಾಗೇ ಯೋಚಿಸುವಾಗ, ನನಗೆ ಕೋಪ ಬರುತ್ತದೆ. ನನ್ನ ಹೆಂಡತಿಗೂ ಹನುಮಂತನ ಮೇಲೆ ಪ್ರೀತಿ ಇದೆ. ಹನುಮಂತ ದೇವರು ನನ್ನ ಪಕ್ಕ ಸದಾ ಇರ್ತಾನೆ ಎಂದು ಹೇಳುತ್ತಿರುತ್ತಾಳೆ. ನನಗೂ ಅವಳ ಮೇಲೆ ಆಗಾಗ ಕೋಪ ಬರುತ್ತಲೇ ಇರುತ್ತೆ" ಎಂದು ಎಸ್.ಎಸ್. ರಾಜಮೌಳಿ ಹೇಳಿದರು .



ಎಕ್ಸ್‌ನಲ್ಲಿ ನೆಟ್ಟಿಗರ ಆಕ್ರೋಶ

ಎಸ್.ಎಸ್. ರಾಜಮೌಳಿ ಅವರ ಹೇಳಿಕೆಗಳು ಇದೀಗ ಟೀಕೆಗೆ ಗುರಿಯಾಗಿದ್ದಾರೆ. ಎಕ್ಸ್ ನಲ್ಲಿ ನಿರ್ದೇಶಕರನ್ನು ನೆಟ್ಟಿಗರು ಟೀಕಿಸಿದ್ದಾರೆ.

"ಹನುಮಂತ ದೇವರ ಬಗ್ಗೆ ಎಸ್.ಎಸ್. ರಾಜಮೌಳಿ ಸರ್ ಅವರ ಹೇಳಿಕೆಗಳಿಂದ ತುಂಬಾ ನಿರಾಶೆಗೊಂಡಿದ್ದೇನೆ. ಅವರು ನಾಸ್ತಿಕರಾಗಿರಬಹುದು ಆದರೆ ದೇವರ ಬಗ್ಗೆ ಅಂತಹ ಕಾಮೆಂಟ್‌ಗಳನ್ನು ಮಾಡುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ಕಮೆಂಟ್‌ ಮಾಡಿದ್ದಾರೆ.

ʻರಾಜಮೌಳಿ ಅವರು ದೇವರನ್ನು ನಂಬುವುದಿಲ್ಲ. ತಾನು ನಾಸ್ತಿಕ ಎಂದು ಹೇಳಿಕೊಳ್ಳುತ್ತಾರೆ. ಆದರೆ ಹಣ ಸಂಪಾದಿಸಲು ದೇವರಿಗೆ ಸಂಬಂಧಿಸಿದ ಚಲನಚಿತ್ರಗಳನ್ನು ಮಾಡಲು ಬಯಸುತ್ತಾರೆ. ನೀವು ನಾಸ್ತಿಕರಾಗಿದ್ದರೆ, ನೀವು ದೇವರಿಗೆ ಸಂಬಂಧಿಸಿದ ಚಲನಚಿತ್ರಗಳನ್ನು ಮಾಡುವುದನ್ನು ನಿಲ್ಲಿಸಬೇಕು ಮತ್ತು ನಾಸ್ತಿಕ ಎಂಬ ನಿಮ್ಮ ತತ್ವಗಳಿಗೆ ಅಂಟಿಕೊಳ್ಳಬೇಕುʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.



ʻರಾಜಮೌಳಿ ತಮ್ಮ ತಂದೆ ಮತ್ತು ಪತ್ನಿಯ ಧಾರ್ಮಿಕ ನಂಬಿಕೆಗಳ ಬಗ್ಗೆ ವ್ಯಂಗ್ಯವಾಡುವ ಬದಲು ತಮ್ಮ ತಾಂತ್ರಿಕ ತಂಡ, ಕಾರ್ಯಕ್ರಮ ಆಯೋಜಕರ ಮೇಲೆ ತಮ್ಮ ಹತಾಶೆಯನ್ನು ತೋರಿಸಬೇಕಿತ್ತುʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆಯ ಯಾರ ಜರ್ನಿ ಎಂಡ್‌? ಈ ಸ್ಪರ್ಧಿಯೇ ಔಟ್‌?

ಚಿತ್ರದ ಟೈಟಲ್ ʻವಾರಣಾಸಿʼ ಎಂದು ಅಧಿಕೃತವಾಗಿ ಘೋಷಣೆ ಆಗಿದೆ. ರಾಮೋಜಿ ಫಿಲ್ಮ್‌ಸಿಟಿಯಲ್ಲಿ ನಡೆಯುತ್ತಿರುವ ‘ಗ್ಲೋಬ್ ಟ್ರೋಟರ್’ ಈವೆಂಟ್‌ನಲ್ಲಿ ಪ್ರದರ್ಶಿಸಲಾದ ವಿಡಿಯೋದಲ್ಲಿ ಮಹೇಶ್‌ ಬಾಬು ಅವರ ಫಸ್ಟ್‌ ಲುಕ್ ಜೊತೆಗೆ ಶೀರ್ಷಿಕೆಯನ್ನು ಸಹ ರಿವೀಲ್ ಮಾಡಲಾಗಿದೆ. 2027ರ ಮಾರ್ಚ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರ ಕೂಡ ʻಬಾಹುಬಲಿʼ ಸಿನಿಮಾದ ರೀತಿಯಲ್ಲಿ ಎರಡು ಪಾರ್ಟ್‌ಗಳಲ್ಲಿ ತೆರೆಗೆ ಬರಲಿದೆಯಾ? ಕಾದು ನೋಡಬೇಕಿದೆ.

Yashaswi Devadiga

View all posts by this author