Su From So OTT Release: ಒಟಿಟಿಗೆ ಬಂದೇ ಬಿಡ್ತು ‘ಸು ಫ್ರಮ್ ಸೋ’ ಚಿತ್ರ; ಯಾವಾಗ, ಎಲ್ಲಿ ಸ್ಟ್ರೀಮಿಂಗ್?
Su From So Movie: 'ಸು ಫ್ರಮ್ ಸೋ' ಚಿತ್ರವು ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಇದೀಗ ಈ ಸಿನಿಮಾವನ್ನು ನೋಡಿಲ್ಲ ಅನ್ನುವವರಿಗೆ ಗುಡ್‌ನ್ಯೂಸ್ ಸಿಕ್ಕಿದ್ದು ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ತೆರೆಗೆ ಬಂದು ತಿಂಗಳು ಹೆಚ್ಚಾದರೂ ಇದರ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಅದರ ಬೆನ್ನಲ್ಲಿಯೇ ಈ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗಲು ಡೇಟ್ ಫಿಕ್ಸ್ ಆಗಿದೆ.

Su From So OTT release -

ಬೆಂಗಳೂರು: 2025ರ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ ‘ಸು ಫ್ರಮ್ ಸೋ’ (Su From So) ಕೂಡ ಇದೆ. ಯಾವುದೇ ಪ್ರಚಾರ ಇಲ್ಲದೆ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಈ ಚಿತ್ರ ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. 'ಸು ಫ್ರಮ್ ಸೋ' ಚಿತ್ರವು ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಇದೀಗ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿಲ್ಲ ಅನ್ನುವವರಿಗೆ ಗುಡ್‌ನ್ಯೂಸ್ ಸಿಕ್ಕಿದ್ದು ಒಟಿಟಿಯಲ್ಲಿ (OTT) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ತೆರೆಗೆ ಬಂದು ತಿಂಗಳು ಹೆಚ್ಚಾದರೂ ಇದರ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಅದರ ಬೆನ್ನಲ್ಲಿಯೇ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಆಗಲು ಡೇಟ್ ಫಿಕ್ಸ್ ಆಗಿದೆ.
ಜೆ.ಪಿ. ತುಮ್ಮಿನಾಡ್ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸಿದೆ. ಹಾಸ್ಯ ಮತ್ತು ಭಾವನಾತ್ಮಕ ಕಥೆಯ ಚಿತ್ರವೇ 'ಸು ಫ್ರಂ ಸೋʼ. ಇದೀಗ ಚಿತ್ರ ಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡ ನಂತರ, ಈ ಚಿತ್ರವನ್ನು ಮನೆಯಲ್ಲೇ ನೋಡಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದ ನಿರ್ಮಾಪಕರು ಇದೀಗ ಅಧಿಕೃತವಾಗಿ ಒಟಿಟಿ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. ಸೆಪ್ಟೆಂಬರ್ 5ರಂದು ಜಿಯೋ ಹಾಟ್ ಸ್ಟಾರ್ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ 'ಸು ಫ್ರಂ ಸೋ' ಚಿತ್ರ ಪ್ರಸಾರವಾಗಲಿದೆ.
ಇದನ್ನು ಓದಿ:Kothalavadi Movie: ಸೆ.5ರಿಂದ ಅಮೇಜಾನ್ ಪ್ರೈಮ್‌ನಲ್ಲಿ ಯಶ್ ತಾಯಿ ನಿರ್ಮಾಣದ ʼಕೊತ್ತಲವಾಡಿʼ ಚಿತ್ರ
ಕೇವಲ 5.5 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಕಲೆಕ್ಷನ್ ವಿಚಾರದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಚಿತ್ರವು 100 ಕೋಟಿ ರೂ.ಗೂ ಅಧಿಕ ಗಳಿಸಿ ಕನ್ನಡ ಚಿತ್ರರಂಗದ ಬ್ಲಾಕ್‌ಬಸ್ಟರ್ ಚಿತ್ರಗಳ ಸಾಲಿಗೆ ಸೇರಿದೆ. ಕನ್ನಡದ ಜತೆಗೆ ತೆಲುಗು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಅಲ್ಲಿಯೂ ಯಶಸ್ಸು ಕಂಡಿದೆ. ನಿರ್ದೇಶಕ ಜೆ.ಪಿ. ತುಮಿನಾಡ್ ಮತ್ತು ನಟ ಹಾಗೂ ನಿರ್ಮಾಪಕ ರಾಜ್ ಬಿ. ಶೆಟ್ಟಿ ಅವರ ಈ ಚಿತ್ರ ಕರಾವಳಿ ಪ್ರದೇಶದ ಕಥೆಯನ್ನು ಹೊಂದಿದೆ.
ಚಿತ್ರದ ಕಥೆ, ಪಾತ್ರಗಳು ಮತ್ತು ಹಾಡುಗಳು ಪ್ರೇಕ್ಷಕರಿಗೆ ಬಹಳಷ್ಟು ಹತ್ತಿರವಾಗಿದ್ದು, ಮನ ರಂಜನೆಯ ಜತೆಗೆ ಉತ್ತಮ ಸಂದೇಶವನ್ನು ನೀಡಿದೆ. ಇದೀಗ ಈ ಚಿತ್ರವನ್ನು ನೀವು ನಿಮ್ಮ ಕುಟುಂಬದ ಜತೆ ಮನೆಯಲ್ಲೇ ಕುಳಿತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಕೂಡ ಮತ್ತೊಮ್ಮೆ ವೀಕ್ಷಣೆ ಮಾಡಬಹುದು.