ಕಿಚ್ಚ ಸುದೀಪ್ (kichcha sudeepa) ದಂಪತಿಗೆ 25ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ. ಕನ್ನಡದ ಮೂರು ಕ್ಷೇತ್ರದ ದಿಗ್ಗಜರು ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ದಿಗ್ಗಜ ವೆಂಕಟೇಶ್ ಪ್ರಸಾದ್, ಇನ್ನೊಂದು ಮ್ಯೂಸಿಕ್ ದಿಗ್ಗಜ ವಿಜಯ್ ಪ್ರಕಾಶ್. ಪ್ರಿಯಾ (Priya sudeep) ಮತ್ತು ಸುದೀಪ್ ಅವರು 2001 ರ ಅಕ್ಟೋಬರ್ 18ರಂದು ವಿವಾಹವಾದರು. ಇವರದ್ದು ಪ್ರೇಮ ವಿವಾಹ, ಪ್ರಿಯಾ ಅವರು ಮೂಲತಃ ಮಲಯಾಳಿ. ಅವರು ಯುವ ಉದ್ಯಮಿ ಆಗಿದ್ದರು.
ಪ್ರಿಯಾ ಮತ್ತು ಸುದೀಪ್ ಆದರ್ಶ ದಂಪತಿಗಳಾಗಿದ್ದು, ಇತ್ತೀಚೆಗಷ್ಟೆ ಬಿಗ್ಬಾಸ್ ವೇದಿಕೆಯ ಮೇಲೂ ಸಹ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರುಪ್ರಿಯಾ ಅವರು ಇದೀಗ ಮಗಳು ಸಾನ್ವಿ ಅವರೊಟ್ಟಿಗೆ ಸೇರಿ ನಿರ್ಮಾಪಕಿಯೂ ಆಗಿದ್ದಾರೆ. 25ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಪ್ರಿಯಾ ಮತ್ತು ಸುದೀಪ್ ಅವರು ಆಚರಿಸಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 13: ಮೀಟರ್ ಇಲ್ವ ಯಾರಿಗೂ? ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ನೇರ ಪ್ರಶ್ನೆ!
ವೆಂಕಟೇಶ್ ಪ್ರಸಾದ್ ಹಾಗೂ ಕುಟುಂಬ ನಟನಿಗೆ ಶುಭ ಕೋರಿದ್ದಾರೆ. ಕಿಚ್ಚ ಸುದೀಪ್ ಪಯಣ ನೋಡುವುದು ನನಗೆ ಹೆಮ್ಮೆಯಾಗಿದೆ. ಒಬ್ಬ ಕಲಾವಿದನಾಗಿ, ಆಪ್ತ ಗೆಳೆಯನಾಗಿ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಕಿಚ್ಚ ಸುದೀಪ್ ಹಾಗೂ ಪ್ರಿಯಾಗೆ 25ನೇ ಮದುವೆ ವಾರ್ಷಿಕೋತ್ಸವ ಶುಭಾಶಯಗಳು ಎಂದು ವೆಂಕಟೇಶ್ ಪ್ರಸಾದ್ ಶುಭ ಕೋರಿದ್ದಾರೆ.
ಇದನ್ನೂ ಓದಿ: Bigg Boss kannada 13: 'Tall Dark Handsome' ಹುಡುಗ ಸೋನಿಕಾಗೆ ಬೇಕಂತೆ! ಸುದೀಪ್ ಕೊಟ್ಟ ಸಲಹೆ ಏನು?
ಮಾಜಿ ಸಂಸದೆ ಸುಮಲತಾ ಅಂಬರೀಷ್ ಕೂಡ ಪಾಲ್ಗೊಂಡಿದ್ದಾರೆ. ಇದೇ ವೇಳೆ ಸೋಶಿಯಲ್ ಮೀಡಿಯಾಗಳಲ್ಲಿ ಕಿಚ್ಚ ಸುದೀಪ್ ದಂಪತಿಗೆ ಹಲವು ಪ್ರಮುಖರು, ಸಿನಿ ತಾರೆಯರು ಶುಭಕೋರಿದ್ದಾರೆ.