ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunny Deol: ʼರಾಮಾಯಣʼ ಸಿನಿಮಾದ ಹನುಮಂತ ಪಾತ್ರದ ಬಗ್ಗೆ ಬಾಲಿವುಡ್ ನಟ ಸನ್ನಿ ಡಿಯೋಲ್ ಹೇಳಿದ್ದೇನು?

ಬಾಲಿವುಡ್ ನಟ ಸನ್ನಿ ಡಿಯೋಲ್ ನಿತೇಶ್‌ ತಿವಾರಿ ಅವರ ʼರಾಮಾಯಣʼ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ವಿಚಾರ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದೆ. ಹನುಮಂತನಾಗಿ ಅಭಿನಯಿಸುವ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ರಾಮನ ಭಂಟನಾಗಿ ಹನುಮಂತನ ಪಾತ್ರವು ಬಹಳ ಚಾಲೆಂಜಿಂಗ್ ಆಗಿದ್ದು, ಸಿನಿಮಾಕ್ಕೆ ಸಕಲ ಸಿದ್ಧತೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ʼರಾಮಾಯಣʼ ಸಿನಿಮಾ ಬಗ್ಗೆ ಬಾಲಿವುಡ್ ನಟ ಸನ್ನಿ ಡಿಯೋಲ್ ಹೇಳಿದ್ದೇನು?

Sunny Deol

Profile Pushpa Kumari Jun 24, 2025 8:26 PM

ಮುಂಬೈ: ಯಶ್, ರಣಬೀರ್ ಕಪೂರ್ ಅಭಿನಯದ ರಾಮಾಯಣ (Ramayana) ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದೆ. ಬಹುಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆ ಇದೆ. ಬಾಲಿವುಡ್ ಖ್ಯಾತ ನಟ ಸನ್ನಿ ಡಿಯೋಲ್ (Sunny Deol) ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ವಿಚಾರ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದೆ. ಇದೀಗ ಅವರು ʼರಾಮಾಯಣʼ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸೊಷ್ಟನೆ ನೀಡಿದ್ದಾರೆ. ಹನುಮಂತನಾಗಿ ಕಾಣಿಸಿಕೊಳ್ಳುವ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ರಾಮನ ಭಂಟ ಹನು ಮಂತನ ಪಾತ್ರವು ಬಹಳ ಚಾಲೆಂಜಿಂಗ್ ಆಗಿದ್ದು ಸಿನಿಮಾದಲ್ಲಿ ಅಭಿನಯಿಸಲು ಸಕಲ ಸಿದ್ಧತೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ʼʼರಾಮಾಯಣʼ ಸಿನಿಮಾದಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿರುವುದು ಬಹಳ ಖುಷಿ ನೀಡಿದ ವಿಚಾರ. ಶೂಟಿಂಗ್ ಇನ್ನು ಆರಂಭವಾಗಿಲ್ಲ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆʼʼ ಎಂದಿದ್ದಾರೆ. ಈ ಸಿನಿಮಾ ಜನರ ಮನ ತಲುಪುವ ನಿರೀಕ್ಷೆ ಇದೆ. ಈ ಚಿತ್ರದ ಬಳಿಕ ಆಯ್ಕೆ ಮಾಡುವ ಸಿನಿಮಾ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರುತ್ತೇನೆʼʼ ಎಂದು ಸನ್ನಿ ಡಿಯೋಲ್ ಹೇಳಿದ್ದಾರೆ.

ಇದನ್ನು ಓದಿ:Just Married Movie: ‘ಜಸ್ಟ್ ಮ್ಯಾರೀಡ್’ ಚಿತ್ರದ ‘ಶಿಶುಪಾಲ’ ಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಶ್ರೀಮನ್

ʼʼರಾಮಾಯಣʼ ಸಿನಿಮಾವು ಭಾರತದ ಪವಿತ್ರ ಮಹಾಕಾವ್ಯದ ಆಧಾರದಲ್ಲಿ ತಯಾರಾಗುತ್ತಿದೆ. ಹೀಗಾಗಿ ಪ್ರೇಕ್ಷಕರು ಇಷ್ಟ ಪಡುತ್ತಾರೆ ಎಂಬ ನಂಬಿಕೆ ಇದೆ. ಬಾಲಿವುಡ್‌ ಜತೆಗೆ ವಿವಿಧ ಚಿತ್ರರಂಗದ ಕಲಾವಿದರು ನಟಿಸುವ ಕಾರಣ ಮತ್ತಷ್ಟು ಆಪ್ತವಾಗುತ್ತದೆ ಎಂಬ ನಿರೀಕ್ಷೆ ಇದೆʼʼ ಎಂದು ತಿಳಿಸಿದ್ದಾರೆ. ರಾಮನಾಗಿ ನಟಿಸುತ್ತಿರುವ ನಟ ರಣಬೀರ್ ಕಪೂರ್ ಈಗಾಗಲೇ ತಮ್ಮ ಪಾಲಿನ ಚಿತ್ರೀಕರಣವನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ರಾವಣನಾಗಿ ಅಬ್ಬರಿಸಲಿರುವ ಯಶ್ ʼಟಾಕ್ಸಿಕ್ʼ ಸಿನಿಮಾ ಮುಗಿಸಿ ಮುಂಬೈನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು 835 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸ ಲಾಗುತ್ತಿದೆ ಎನ್ನಲಾಗಿದೆ.

ಈ ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸುತ್ತಿದ್ದು, ತಾರಾಗಣದ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿದೆ. ʼರಾಮಾಯಣʼ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. 2026 ಮತ್ತು 2027ರ ದೀಪಾವಳಿಯಂದು ತೆರೆ ಕಾಣಲಿದೆ.