ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್ ಬುಲ್ ನಾಯಿಯ ಡೆಡ್ಲಿ ಅಟ್ಯಾಕ್‌! ಶಾಕಿಂಗ್‌ ವಿಡಿಯೊ ಇಲ್ಲಿದೆ

ಮನೆ ಹೊರಗೆ ಆಟವಾಡುತ್ತಿದ್ದ ಬಾಲಕನೊಬ್ಬನ ಮೇಲೆ ಏಕಾಏಕಿ ಪಿಟ್ ಬುಲ್ ನಾಯಿಯೊಂದು ದಾಳಿ ಮಾಡಿದ್ದ ಘಟನೆ ದೆಹಲಿಯ ಪ್ರೇಮ್ ನಗರ ಪ್ರದೇಶದಲ್ಲಿ ನಡೆದಿದೆ. ನಾಯಿ ದಾಳಿ ಮಾಡಿದ್ದ ಪರಿಣಾಮ ಬಾಲಕನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್ ಬುಲ್ ನಾಯಿ ದಾಳಿ

ಪಿಟ್ ಬುಲ್ ನಾಯಿ ದಾಳಿ(ಸಾಂದರ್ಭಿಕ ಚಿತ್ರ) -

Profile
Pushpa Kumari Nov 25, 2025 5:24 PM

ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಾಯಿಗಳು ಆಕ್ರಮಣಕಾರಿಯಾಗಿ ಮನುಷ್ಯರ ಮೇಲೆ ದಾಳಿ ಮಾಡುವ ಪ್ರಮಾಣ ಹೆಚ್ಚಾಗುತ್ತಲೆ ಇದೆ. ಬೀದಿನಾಯಿಗಳು ಮಾತ್ರವಲ್ಲದೆ ಇತ್ತೀಚೆಗೆ ಸಾಕುನಾಯಿ ಕೂಡ ಮಕ್ಕಳ ಮೇಲೆ , ವಯೋವೃದ್ಧರ ಮೇಲೆ ದಾಳಿ ಮಾಡಿದ್ದ ಅನೇಕ ಸಂಗತಿಗಳು ಆಗಾಗ ನಡೆಯುತ್ತಲೇ ಇರುತ್ತದೆ. ಅಂತೆಯೇ ಮನೆ ಹೊರಗೆ ಆಟವಾಡುತ್ತಿದ್ದ ಬಾಲಕನೊಬ್ಬನ ಮೇಲೆ ಏಕಾಏಕಿ ಪಿಟ್ ಬುಲ್ ನಾಯಿಯೊಂದು ದಾಳಿ ಮಾಡಿದ್ದ ಘಟನೆ ದೆಹಲಿಯ ಪ್ರೇಮ್ ನಗರ ಪ್ರದೇಶದಲ್ಲಿ ನಡೆದಿದೆ. ನಾಯಿ ದಾಳಿ ಮಾಡಿದ್ದ ಪರಿಣಾಮ ಬಾಲಕನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಭೀಕರ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

ಸಾಕು ಪ್ರಾಣಿಗಳನ್ನು ಸರಿಯಾಗಿ ಬೆಳೆಸದಿದ್ದರೆ ಬಳಿಕ ಅವುಗಳು ಆಕ್ರಮಣ ಕಾರಿಯಾಗಿ ಸಾರ್ವಜನಿಕರಿಗೆ ತೊಂದರೆ ಮಾಡುವುದು ಸಹಜ. ಅಂತೆಯೇ ದೆಹಲಿಯ ಪ್ರೇಮ್ ನಗರ ಪ್ರದೇಶದ ವಿನಯ್ ಎನ್‌ಕ್ಲೇವ್‌ನಲ್ಲಿ ನವೆಂಬರ್ 23ರ ಸಂಜೆ 5.38ಕ್ಕೆ ಆರು ವರ್ಷದ ಬಾಲಕನ ಮೇಲೆ ಪಿಟ್ ಬುಲ್ ನಾಯಿ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಪರಿಣಾಮ ಬಾಲಕನ ಬಲ ಕಿವಿಯೂ ಮತ್ತು ಇತರ ದೇಹದ ಭಾಗಗಳಿಗೆ ತೀವ್ರ ಗಾಯವಾಗಿದೆ.

ಶ್ವಾನ ದಾಳಿ ನಡೆಸುತ್ತಿರುವ ವಿಡಿಯೊ ಇಲ್ಲಿದೆ



ವೈರಲ್ ಆದ ಸಿಸಿ ಟಿವಿ ವಿಡಿಯೋದಲ್ಲಿ, ಪಿಟ್ ಬುಲ್ ನಾಯಿ ಇದ್ದಕ್ಕಿದ್ದಂತೆ ಪಕ್ಕದ ಮನೆಯಿಂದ ಹೊರಬಂದು ಹುಡುಗನ ಮೇಲೆ ದಾಳಿ ಮಾಡಿದ್ದ ಆಘಾತಕಾರಿ ದೃಶ್ಯಗಳನ್ನು ಕಾಣಬಹುದು. ಮಹಿಳೆಯ ಕೈಯಲ್ಲಿದ್ದ ಬೆಲ್ಟ್ ನಿಂದ ತಪ್ಪಿಸಿಕೊಂಡ ನಾಯಿ ಎದುರು ಮನೆಯ ಬಾಲಕನ ಮೇಲೆ ದಾಳಿ ಮಾಡಿದೆ. ಈ ವೇಳೆ ಮಹಿಳೆ ನಾಯಿಯನ್ನು ಹಿಡಿಯಲು ಪ್ರಯತ್ನ ಪಟ್ಟರು ಕೂಡ ಆಕೆಯ ಕೈಗೆ ನಾಯಿ ಸಿಗಲಿಲ್ಲ. ಬಾಲಕನನ್ನು ರಸ್ತೆ ತುಂಬಾ ಅಡ್ಡಾಡಿಸಿ ಕುತ್ತಿಗೆ, ಕೈ, ಕಿವಿಯ ಭಾಗಕ್ಕೆ ಕಚ್ಚಿದೆ. ಕಿವಿಯ ಭಾಗ ತೀವ್ರ ಗಾಯವಾಗಿದ್ದು ರಕ್ತಸ್ರಾವವಾಗಿದೆ.

Viral News: ಚಾಲಕನಿಲ್ಲದೆ ಚಲಿಸಿದ ಟ್ರ್ಯಾಕ್ಟರ್; ಭೀಕರ ಅಪಘಾತದಿಂದ ವ್ಯಕ್ತಿಯ ಸ್ಥಿತಿ ಗಂಭೀರ

ಕೊನೆಗೆ ಆ ಬಾಲಕನನ್ನು ನೆರೆ ಹೊರೆಯವರು ಮತ್ತು ಪೋಷಕರು ರಕ್ಷಿಸಿ ಬಿಎಸ್ಎ ಆಸ್ಪತ್ರೆಗೆ (BSA Hospital) ಕರೆದೊಯ್ದು ದಾಖಲಿಸಿದ್ದಾರೆ. ಅಲ್ಲಿ ಹೆಚ್ಚಿನ ಚಿಕಿತ್ಸೆ ದೊರೆಯದ ಕಾರಣ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಆ ಬಾಲಕ ನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಆ ಮಗುವಿನ ಪೋಷಕರು ಪ್ರೇಮ್ ನಗರ ಪೊಲೀಸ್ ಠಾಣೆಯಲ್ಲಿ ನಾಯಿಯ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ನಾಯಿ ರಾಜೇಶ್ ಪಾಲ್ (Rajesh Pal) ಅವರಿಗೆ ಸೇರಿದ್ದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ರಾಜೇಶ್ ಪಾಲ್ ಅವರ ಮಗ ಸಚಿನ್ ಪಾಲ್ ಅವರು ಸುಮಾರು ಒಂದೂವರೆ ವರ್ಷಗಳ ಹಿಂದೆ ಪಿಟ್ ಬುಲ್ ಅನ್ನು ಮನೆಗೆ ಕರೆತಂದಿದ್ದರು. ಪೊಲೀಸರು ಮಗುವಿನ ವೈದ್ಯಕೀಯ ದಾಖಲೆಗಳನ್ನು ಸಂಗ್ರಹಿಸಿ, ಕೀರ್ತಿ ನಗರದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಆತನ ತಂದೆ ದಿನೇಶ್ ಅವರ ಹೇಳಿಕೆಯನ್ನು ಕೂಡ ದಾಖಲಿಸಿಕೊಂಡಿದ್ದಾರೆ. ಸದ್ಯ ಪಿಟ್ ಬುಲ್ ನಾಯಿಯ ಮಾಲಕ ರಾಜೇಶ್ ಪಾಲ್ ವಿರುದ್ಧ ಪ್ರಕರಣ ದಾಖಲಾಗಿದ್ದು ಅವರನ್ನು ಬಂಧಿಸಲಾಗಿದೆ.