ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟ್ರಾಮಾ ಸೆಂಟರ್‌, ಅಸ್ಥಿ ಚಿಕಿತ್ಸಾ ಕೇಂದ್ರ ಆರಂಭ ಯಾವಾಗ ?

ಸ್ಥಳೀಯರು ಹಾಗೂ ಸಾರ್ವಜನಿಕ ಸಂಘಟನೆಗಳ ಪ್ರಕಾರ, ಟ್ರಾಮಾ ಸೆಂಟರ್‌ನಲ್ಲಿ ಅಗತ್ಯ ವೈದ್ಯರು, ತಜ್ಞ ಸಿಬ್ಬಂದಿ, ವೈದ್ಯಕೀಯ ಉಪಕರಣಗಳು ಹಾಗೂ ಆಡಳಿತಾತ್ಮಕ ವ್ಯವಸ್ಥೆ ಇನ್ನೂ ಪೂರ್ಣ ಪ್ರಮಾಣ ದಲ್ಲಿ ಸಿದ್ಧವಾಗಿಲ್ಲ. ಆರೋಗ್ಯ ಇಲಾಖೆ ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಟ್ರಾಮಾ ಸೆಂಟರ್ ಅನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು ಎಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.

ಟ್ರಾಮಾ ಸೆಂಟರ್‌, ಅಸ್ಥಿ ಚಿಕಿತ್ಸಾ ಕೇಂದ್ರ ಆರಂಭ ಯಾವಾಗ ?

-

Profile
Ashok Nayak Jul 17, 2026 11:33 AM

ಮಂಜುನಾಥ ಕಲಾಲ

ವಿಜಯಪುರದಲ್ಲಿ 2023ರಲ್ಲೇ ಉದ್ಘಾಟನೆಗೊಂಡ ಕಟ್ಟಡ

3 ವರ್ಷ ಗತಿಸಿದರೂ ಶುರುವಾಗದ ಸೇವೆ

ವಿಜಯಪುರ ಜಿಲ್ಲೆಯ ಜನತೆಗೆ ಅತ್ಯಾಧುನಿಕ ತುರ್ತು ವೈದ್ಯಕೀಯ ಸೇವೆ ಒದಗಿಸುವ ಉದ್ದೇಶ ದಿಂದ ಸರ್ಕಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಅಂದಾಜು 34 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಪುಟ್ಟರಾಜ ಗವಾಯಿ ಟ್ರಾಮಾ ಸೆಂಟರ್‌ ಮತ್ತು ಆಸ್ಥಿ ಚಿಕಿತ್ಸಾ ಕೇಂದ್ರವನ್ನು ಲೋಕಾರ್ಪಣೆ ಗೊಂಡು ಮೂರು ವರ್ಷ ಗತಿಸಿದರೂ ಇನ್ನೂ ಕಾರ್ಯಾರಂಭವಾಗದೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿಗಳಿಂದ ಸಂಪರ್ಕ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರತಿದಿನ ರಸ್ತೆ ಅಪಘಾತಗಳು ಹಾಗೂ ತುರ್ತು ವೈದ್ಯಕೀಯ ಪ್ರಕರಣಗಳು ಸಂಭವಿಸುತ್ತಿವೆ. ಇಂತಹ ಸಂದರ್ಭ ದಲ್ಲಿ ಟ್ರಾಮಾ ಸೆಂಟರ್ ಅತ್ಯಂತ ಅಗತ್ಯವಾಗಿದ್ದರೂ, ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದರೂ ಜನರಿಗೆ ಅದರ ಸೇವೆ ಇನ್ನೂ ಲಭ್ಯವಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಪಘಾತದ ನಂತರದ ಮೊದಲ ಒಂದು ಗಂಟೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ‘ಗೋಲ್ಡನ್ ಅವರ್’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Roopa Gururaj Column: ಬಾಸ್ಕೆಟ್‌ ಬಾಲ್‌ ಆಟದ ಮೂಲಕ ಪ್ರದ್ಯೋತ್‌ ವೊಲೇಟಿ ಶಿಕ್ಷಣ ಯಜ್ಞ

ಈ ಅವಧಿಯಲ್ಲಿ ತಜ್ಞ ಚಿಕಿತ್ಸೆ ದೊರೆತರೆ ಅನೇಕ ಜೀವಗಳನ್ನು ಉಳಿಸಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಟ್ರಾಮಾ ಸೆಂಟರ್ ಇನ್ನೂ ಕಾರ್ಯಾರಂಭವಾಗದ ಕಾರಣ ಗಂಭೀರ ಗಾಯಾಳುಗಳನ್ನು ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಹಾಗೂ ಮಹಾರಾಷ್ಟ್ರದ ವಿವಿಧ ಆಸ್ಪತ್ರೆಗಳಿಗೆ ರವಾನಿಸಬೇಕಾದ ಪರಿಸ್ಥಿತಿ ಮುಂದುವರಿದಿದೆ. ಇದರಿಂದ ಚಿಕಿತ್ಸೆ ವಿಳಂಬವಾಗಿ ರೋಗಿಗಳ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚುತ್ತಿದೆ.

ಸ್ಥಳೀಯರು ಹಾಗೂ ಸಾರ್ವಜನಿಕ ಸಂಘಟನೆಗಳ ಪ್ರಕಾರ, ಟ್ರಾಮಾ ಸೆಂಟರ್‌ನಲ್ಲಿ ಅಗತ್ಯ ವೈದ್ಯರು, ತಜ್ಞ ಸಿಬ್ಬಂದಿ, ವೈದ್ಯಕೀಯ ಉಪಕರಣಗಳು ಹಾಗೂ ಆಡಳಿತಾತ್ಮಕ ವ್ಯವಸ್ಥೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿಲ್ಲ. ಆರೋಗ್ಯ ಇಲಾಖೆ ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಟ್ರಾಮಾ ಸೆಂಟರ್ ಅನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು ಎಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.

ಕಟ್ಟಡದ ಸುತ್ತ ಬೆಳೆದ ಜಾಲಿ ಕಂಟಿಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಟ್ರಾಮಾ ಸೆಂಟರ್ ಕಟ್ಟಡದ ಸುತ್ತ ಜಾಲಿ ಕಂಟಿಗಳು ಹಾಗೂ ಕಸ-ಕಡ್ಡಿಗಳು ಬೆಳೆದು ಪರಿಸರ ಹದಗೆಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ, ಕಟ್ಟಡದಲ್ಲಿರುವ ಕೆಲವು ವೈದ್ಯಕೀಯ ಯಂತ್ರೋಪಕರಣಗಳು ಧೂಳು ಹಿಡಿದು, ಜೇಡರ ಬಲೆ ಕಟ್ಟಿರುವ ಸ್ಥಿತಿಯಲ್ಲಿ ಕಂಡುಬರುತ್ತಿವೆ ಎನ್ನಲಾಗಿದೆ. ಟ್ರಾಮಾ ಸೆಂಟರ್ ಕಾರ್ಯಾರಂಭವಾಗುವವರೆಗೆ ಕಟ್ಟಡ ಹಾಗೂ ಅದರಲ್ಲಿರುವ ವೈದ್ಯಕೀಯ ಸಾಮಗ್ರಿಗಳ ಸುರಕ್ಷತೆ ಮತ್ತು ನಿರ್ವಹಣೆಗೆ ಆರೋಗ್ಯ ಇಲಾಖೆ ವಿಶೇಷ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿ ಸಿದ್ದಾರೆ.

ಗೆದ್ದಲು ಹಿಡಿದ ಬಾಗಿಲುಗಳು

ಜಿಲ್ಲೆಯ ಬೃಹತ್ ಯೋಜನೆಗಳಲ್ಲೊಂದಾದ ಶ್ರೀ ಪುಟ್ಟರಾಜ ಗವಾಯಿ ಟ್ರಾಮಾ ಸೆಂಟರ್‌ಮತ್ತು ಅಸ್ಥಿ ಚಿಕಿತ್ಸಾ ಕೇಂದ್ರ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಆರಂಭಕ್ಕೂ ಮುನ್ನವೇ ಕಟ್ಟಡದ ಬಾಗಿಲುಗಳು ಗೆದ್ದಲು ಹಿಡಿಯುತ್ತಿರುವುದು ಗುಣಮಟ್ಟದ ಕಾಮಗಾರಿಯಾಗಿಲ್ಲವೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುವಂತಾಗಿದ್ದು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

image

ಟ್ರಾಮಾ ಸೆಂಟರ್‌ಗೆ ಅಗತ್ಯವಿರುವ ವೈದ್ಯಕೀಯ ಯಂತ್ರೋಪಕರಣಗಳು ಹಾಗೂ ಪೀಠೋ ಪಕರಣಗಳ ಖರೀದಿಗಾಗಿ ಬೆಂಗಳೂರಿನಿಂದ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಟ್ರಾಮಾ ಸೆಂಟರ್ ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ.

- ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಶಸ್ತ್ರಚಿಕಿತ್ಸಕ, ವಿಜಯಪುರ