Thalapathy Vijay: ʻಜನ ನಾಯಗನ್ʼ ಚಿತ್ರಕ್ಕೆ ಸಿಕ್ತು ಹೊಸ ರಿಲೀಸ್ ಡೇಟ್? ಒಂದೇ ದಿನ 2 ಸಿನಿಮಾ ರಿಲೀಸ್ ಮಾಡಲಿದೆಯಾ `ಕೆವಿಎನ್ ಪ್ರೊಡಕ್ಷನ್ಸ್'?
ತಮಿಳುನಾಡು ಸಿಎಂ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ ಸೆನ್ಸಾರ್ ಮಂಡಳಿಯಲ್ಲಿ ಐದು ತಿಂಗಳಿನಿಂದ ಪ್ರಮಾಣಪತ್ರ ಸಿಗದೆ ನೆನೆಗುದಿಗೆ ಬಿದ್ದಿದೆ. ಆದರೆ ಟಿಕೆಟ್ ಬುಕಿಂಗ್ ಆಪ್‌ಗಳಲ್ಲಿ ಈ ಚಿತ್ರವು ಜೂನ್ 19 ರಂದು ಬಿಡುಗಡೆಯಾಗಲಿದೆ ಎಂದು ತೋರಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
-
ʻದಳಪತಿ ವಿಜಯ್ʼ ನಟನೆಯ ಕೊನೆಯ ‘ಜನ ನಾಯಗನ್’ (Jana Nayagan) ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯಲ್ಲಿ ಪ್ರಮಾಣಪತ್ರ ಸಿಗದೇ ಕಳೆದ ಐದು ತಿಂಗಳಿನಿಂದ ನೆನೆಗುದಿಗೆ ಬಿದ್ದಿದೆ. ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ದಳಪತಿ ಫ್ಯಾನ್ಸ್ ಕಾದುಕುಳಿತಿದ್ದಾರೆ. ಈ ಮಧ್ಯೆ ಚಿತ್ರದ ಬಿಡುಗಡೆಯ ದಿನಾಂಕವು ಕೆಲವು ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಡೇಟ್ ಆಗಿರುವುದು ಹೊಸ ಬೆಳವಣಿಗೆಯಾಗಿದೆ. ಆದರೆ ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಟಿಕೆಟ್ ಬುಕಿಂಗ್ ಆಪ್‌ನಲ್ಲಿ ರಿಲೀಸ್ ಡೇಟ್
'ಡಿಸ್ಟ್ರಿಕ್ಟ್' (District) ಆಪ್‌ನಲ್ಲಿ ಜನ ನಾಯಗನ್ ಸಿನಿಮಾ ಜೂನ್ 19 ಕ್ಕೆ ಬಿಡುಗಡೆಯಾಗಲಿದೆ ಎಂದು ತೋರಿಸುತ್ತಿದ್ದರೆ, 'ಬುಕ್ ಮೈ ಶೋ' (Book My Show) ನಲ್ಲಿ ಬಿಡುಗಡೆಯ ತಿಂಗಳು ಜೂನ್ ಎಂದು ಅಪ್‌ಡೇಟ್ ಮಾಡಲಾಗಿದೆ. ಆದರೆ, ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸುವ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಚಿತ್ರತಂಡ ಇನ್ನೂ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕಾಯುತ್ತಿದೆ. ಶೀಘ್ರದಲ್ಲೇ ಅದು ನಮಗೆ ಸಿಗುವ ಭರವಸೆ ಇದೆ. ಸಿಕ್ಕ ತಕ್ಷಣವೇ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ" ಎಂದಿದ್ದಾರೆ.
Jana Nayagan postponed: 'ಜನ ನಾಯಗನ್' ಸಿನಿಮಾ ರಿಲೀಸ್ ಮುಂದೂಡಿಕೆ ; ದಳಪತಿ ವಿಜಯ್ ಫ್ಯಾನ್ಸ್ ಬೇಸರ
ಅದ್ದೂರಿಯಾಗಿ ತೆರೆಗೆ ಬರಲಿದೆ ʻಜನ ನಾಯಗನ್ʼ
"ನಾವು ಸೆನ್ಸಾರ್ ಸರ್ಟಿಫಿಕೇಟ್‌ಗಾಗಿ ಕಾಯುತ್ತಿದ್ದೇವೆ. ಸೆನ್ಸಾರ್ ಪ್ರಮಾಣಪತ್ರ ನಮ್ಮ ಕೈಗೆ ಬಂದ ತಕ್ಷಣವೇ ಬಿಡುಗಡೆಯ ದಿನಾಂಕವನ್ನು ಪ್ರಕಟಿಸುತ್ತೇವೆ. ಸಾಕಷ್ಟು ಮುಂಚಿತವಾಗಿಯೇ ಅಧಿಕೃತವಾಗಿ ತಿಳಿಸಿ, ವಿಶ್ವಾದ್ಯಂತ ಅತ್ಯಂತ ಅದ್ಧೂರಿಯಾಗಿ ಚಿತ್ರವನ್ನು ತೆರೆಗೆ ತರುತ್ತೇವೆ" ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.
ಜೂನ್ 19ರ ಮೇಲೇಕೆ ಕಣ್ಣು?
ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರಿಗೆ ಜೂನ್ 22ರಂದು ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ಜೂನ್ 19ಕ್ಕೆ ಹುಟ್ಟುಹಬ್ಬದ ಕೊಡುಗೆಯಾಗಿ ಜನ ನಾಯಗನ್ ರಿಲೀಸ್ ಆಗಬೇಕು ಎಂಬುದು ಫ್ಯಾನ್ಸ್ ಬಯಕೆ ಆಗಿದೆ. ಇದೇ ವೇಳೆ ಜೂನ್ 19ರಂದು ಜನ ನಾಯಗನ್ ರಿಲೀಸ್ ಎಂಬ ವಿಚಾರ ಚರ್ಚೆಗೆ ಬಂದಿದೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಬಾಲನ್ ಸಿನಿಮಾ
Excited to announce our collaboration with Phars Film for the overseas distribution of #Balan TheBoy.✨
— KVN Productions (@KvnProductions) May 25, 2026
Balan The Boy releases worldwide in cinemas on 19th June 2026.@KvnProductions @thespianfilms_ @ShailajaD #SatishFenn @SUPRITH_87 @chidaakasham #JithuMadhavan #ShijuKhalid… pic.twitter.com/Ou3Zesa63m
ಬಾಲನ್ ರಿಲೀಸ್ ಡೇಟ್ ಘೋಷಣೆ
ಈ ಮಧ್ಯೆ ಮತ್ತೊಂದು ಆಸಕ್ತಿಕರ ಬೆಳವಣಿಗೆ ನಡೆದಿದೆ. ಅದೇನಪ್ಪ ಅಂದ್ರೆ, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಮೊದಲ ಮಲಯಾಳಂ ಸಿನಿಮಾ ʻಬಾಲನ್ ದಿ ಬಾಯ್ʼ ಸಿನಿಮಾವನ್ನು ಜೂನ್ 19ರಂದೇ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಇದು ʻಮಂಜುಮ್ಮೇಲ್ ಬಾಯ್ಸ್ʼ ಖ್ಯಾತಿಯ ಚಿದಂಬರಂ ನಿರ್ದೇಶನದ ಸಿನಿಮಾ.
ಇದೀಗ ಜೂನ್ 19ರಂದೇ ಜನ ನಾಯಗನ್ ಕೂಡ ಬರಲಿದೆ ಎಂಬ ಮಾತಿದೆ. ಅಂದರೆ, ಒಂದೇ ಬ್ಯಾನರ್‌ನಲ್ಲಿ ನಿರ್ಮಾಣವಾದ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗಲಿವೆಯಾ ಎಂಬುದು ಈಗ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಚಿತ್ರತಂಡದಿಂದಲೇ ಅಧಿಕೃತ ಮಾಹಿತಿ ಹೊರಬಿದ್ದರೆ, ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳಲಿದೆ.