ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Devil X Review: ಕಳೆದು ಹೋಗಬೇಕು , ಆ ಥರ ಇದೆ ಅದೊಂದು ಸೀನ್‌! ʻಡೆವಿಲ್‌ʼ ನೋಡಿದವರು ಏನು ಹೇಳಿದರು?

Darshan: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾ ಇಂದು (ಡಿ.11) ಅದ್ಧೂರಿಯಾಗಿ ತೆರೆಗೆ ಬಂದಿದೆ ಮುಂಜಾನೆ 6.30ರಿಂದ ಶೋಗಳು ಆರಂಭ ಆಗಿವೆ. ಎಲ್ಲಾ ಶೋಗಳು ಹೌಸ್​ಫುಲ್ ಆಗಿವೆ. ಬೆಂಗಳೂರಿನಲ್ಲಿ‌ ಕೆಲವು ಮಲ್ಟಿಫ್ಲೆಕ್ಟ್‌ನಲ್ಲಿ ಒಂದೇ ದಿನ 30 ಶೋಗಳು ಬುಕ್ ಆಗಿವೆ. ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್‌, ನಟ ಧನ್ವೀರ್‌, ರಚಿತಾ ರೈ ಕೂಡ ಥಿಯೇಟರ್‌ಗೆ ಬಂದು, ಫ್ಯಾನ್ಸ್‌ ಜೊತೆ ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ನೋಡಿದವರು ಏನು ಅಂದ್ರು ಗೊತ್ತಾ?

ಕಳೆದು ಹೋಗಬೇಕು , ಆ ಥರ ಇದೆ ಅದೊಂದು ಸೀನ್‌! ʻಡೆವಿಲ್‌ʼ ಹೇಗಿದೆ?

ದಿ ಡೆವಿಲ್‌ ಸಿನಿಮಾ -

Yashaswi Devadiga
Yashaswi Devadiga Dec 11, 2025 8:30 AM

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Darshan) ಅಭಿನಯದ ಡೆವಿಲ್‌ ಸಿನಿಮಾ ಇಂದು (ಡಿ.11) ಅದ್ಧೂರಿಯಾಗಿ ತೆರೆಗೆ ಬಂದಿದೆ ಮುಂಜಾನೆ 6.30ರಿಂದ ಶೋಗಳು ಆರಂಭ ಆಗಿವೆ. ಎಲ್ಲಾ ಶೋಗಳು ಹೌಸ್​ಫುಲ್ ಆಗಿವೆ. 55,000ಕ್ಕೂ ಅಧಿಕ ಫ್ಯಾನ್ಸ್‌ ಶೋಗಳ ಟಿಕೆಟ್‌ ಸೇಲ್‌ ಆಗಿತ್ತು ಎನ್ನಲಾಗಿದೆ. ಬೆಂಗಳೂರಿನಲ್ಲಿ‌ ಕೆಲವು ಮಲ್ಟಿಫ್ಲೆಕ್ಟ್‌ನಲ್ಲಿ ಒಂದೇ ದಿನ 30 ಶೋಗಳು ಬುಕ್ ಆಗಿವೆ. ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್‌, ನಟ ಧನ್ವೀರ್‌, ರಚಿತಾ ರೈ ಕೂಡ ಥಿಯೇಟರ್‌ಗೆ ಬಂದು, ಫ್ಯಾನ್ಸ್‌ ಜೊತೆ ಸಿನಿಮಾ ನೋಡುತ್ತಿದ್ದಾರೆ.ಈ ಸಿನಿಮಾ ನೋಡಿದವರು ಏನು ಹೇಳಿದರು? ಇಲ್ಲಿದೆ ಎಕ್ಸ್‌ ರಿವ್ಯೂ!

ಇಂಟರ್‌ ವಲ್‌ ಬ್ಲಾಕ್‌ಬಸ್ಟರ್. ಮೊದಲಾರ್ಧ ಸೂಪರ್‌, ಅತ್ಯುತ್ತಮ ಪ್ರದರ್ಶನ ಅಂತ ಒಬ್ಬರು ಬರೆದುಕೊಂಡಿದ್ದಾರೆ. ಇನ್ನೂ ವಿಶೇಷ ಅಂದರೆ ದರ್ಶನ್‌ ಎಂಟ್ರಿ ಆಗುವಾಗ, ಅವರ ಟ್ಯಾಟೂ ಪ್ರದರ್ಶನ. ಅದನ್ನ ನೋಡಿ ಸಖತ್‌ ಥ್ರಿಲ್‌ ಆಗಿದ್ದಾರೆ ಫ್ಯಾನ್ಸ್‌. ದರ್ಶನ್‌ ಆ ಒಂದು ಎಂಟ್ರಿ ನೋಡಿದರೆ ಕಳೆದು ಹೋಗೋದು ಗ್ಯಾರಂಟಿ ಅಂತ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Darshan: ದರ್ಶನ್‌ ‘ದಿ ಡೆವಿಲ್’ಸಿನಿಮಾಗೆ ಶುಭ ಹಾರೈಸಿದ ಸುಮಲತಾ ಅಂಬರೀಷ್



ದಿ ಡೆವಿಲ್ ಇಂಟರ್ವಲ್ ಸೂಪರ್‌. ಭಾವನೆಗಳು ಎಷ್ಟು ತೀವ್ರವಾಗಿ ಇದೆ ಅಂದರೆ ಕಣ್ಣೀರು ತರಿಸುತ್ತದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಮತ್ತೊಬ್ಬರು, ಕುಟುಂಬ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗುತ್ತದೆ. ಬಾಸ್ ನಟನೆ ದೊಡ್ಡ ಪರದೆಯ ಮೇಲೆ ನೋಡಲು ಒಂದು ಅದ್ಭುತ ಅನುಭವ ಎಂದು ಬರೆದುಕೊಂಡಿದ್ದಾರೆ.



ಅಭಿಮಾನಿಗಳಿಗೆ ಹಬ್ಬ. ರಾಜಕೀಯ ಥ್ರಿಲ್ಲರ್ ಆಗಿ ಆರಂಭವಾಗಿ ನಂತರ ಪಾತ್ರಗಳ ಪರಿಚಯ. ಸೂಪರ್‌ ಡೆವಿಲ್‌ ಅಂತ ಇನ್ನೊಬರು ಬರೆದುಕೊಂಡಿದ್ದಾರೆ. ದರ್ಶನ್‌ ನಟನೆ ಚೆನ್ನಾಗಿದೆ, 100 ದಿನಗಳು ಓಡುತ್ತವೆ. ಡಬಲ್‌ ಆಕ್ಟಿಂಗ್‌ ಚೆನ್ನಾಗಿದೆ. ಇಂಟ್ರಡಕ್ಷನ್‌ ಚೆನ್ನಾಗಿದೆ. ಕಳೆದು ಹೋಗಬೇಕು, ಆ ಥರ ಎಂಟ್ರಿ ಇದೆ ಎಂದೆಲ್ಲ ಬರೆದುಕೊಂಡಿದ್ದಾರೆ ಸಿನಿ ಪ್ರೇಮಿಗಳು.



ಚಿತ್ರದ ಒಟ್ಟು ಅವಧಿ 2 ಗಂಟೆ 49 ನಿಮಿಷ ಇದೆ. 2011ರಲ್ಲಿ ‘ಸಾರಥಿ’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಆ ಚಿತ್ರವನ್ನು ಅವರ ಸಹೋದರ ದಿನಕರ್ ಸುದೀಪ್ ನಿರ್ದೇಶನ ಮಾಡಿದ್ದರು. ಈ ಸಂದರ್ಭದಲ್ಲಿ ಸಿನಿಮಾ ನೋಡಲು ದರ್ಶನ್ ಹೊರಗೆ ಇರಲಿಲ್ಲ. ಆ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿ ‘ಸಾರಥಿ’ ಹೊರಹೊಮ್ಮಿತು. ಈಗ ‘ಡೆವಿಲ್’ ಯಶಸ್ಸು ಕಾಣುತ್ತದೆಯೇ ಎಂಬ ಕುತೂಹಲ ಮೂಡಿದೆ.



ನರ್ತಕಿ, ಸಿದ್ದೇಶ್ವರ, ನವರಂಗ್ ಪ್ರಸನ್ನ‌ ,ಊರ್ವಶಿ ಚಿತ್ರಮಂದಿರಗಳಲ್ಲಿ ದರ್ಶನ್ ಡೆವಿಲ್ ಕಟೌಟ್ ತಲೆ ಎತ್ತಿದೆ. ಫ್ಯಾನ್ಸ್ ಅಂತೂ ಹಬ್ಬ ಜಾತ್ರೆಯೇ ಮಾಡುತ್ತಿದ್ದಾರೆ.

ಇದನ್ನೂ ಓದಿ: The Devil Trailer: ದರ್ಶನ್‌ ಸಿನಿಮಾದಲ್ಲಿ ಗಿಲ್ಲಿ ನಟನ ಕಾಮಿಡಿ ಝಲಕ್;‌ ಪಂಚ್‌ ‌ಡೈಲಾಗ್ ಪಕ್ಕಾ ಎಂದ ಫ್ಯಾನ್ಸ್!

ದರ್ಶನ್‌ಗೆ ನಾಯಕಿಯಾಗಿ ರಚನಾ ರೈ ಇದ್ದಾರೆ. ಶರ್ಮಿಳಾ ಮಾಂಡ್ರೆ ಇಂಪಾರ್ಟೆಂಟ್‌ ರೋಲ್‌ ಮಾಡಿದ್ದು, ಮಹೇಶ ಮಾಂಜ್ರೇಕರ್‌, ಅಚ್ಯುತ್‌ ಕುಮಾರ್‌, ಶೋಭರಾಜ್‌, ಚಂದು ಗೌಡ, ವಿನಯ್‌ ಗೌಡ, ಗಿಲ್ಲಿ ನಟ, ಗೋವಿಂದೇಗೌಡ, ರೋಜರ್‌ ನಾರಾಯಣ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.