ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Thalapathy Vijay: ʻಪ್ರೀತಿಯ ಸದ್ದು ಯಾವಾಗಲೂ ಜೋರಾಗಿರುತ್ತದೆʼ; ಟ್ರೋಲ್‌ ಮಾಡಿದವರಿಗೆ ನಟಿ ತ್ರಿಷಾ ಕೃಷ್ಣನ್ ತಿರುಗೇಟು

ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಭಾಗವಹಿಸಿ ಟ್ರೋಲ್‌ಗೊಳಗಾದ ನಟಿ ತ್ರಿಷಾ ಕೃಷ್ಣನ್ ಈಗ ತಿರುಗೇಟು ನೀಡಿದ್ದಾರೆ. "ಪ್ರೀತಿಯ ಸದ್ದು ಯಾವಾಗಲೂ ಜೋರಾಗಿರುತ್ತದೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆಯುವ ಮೂಲಕ ಟೀಕಾಕಾರರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.

ʻಪ್ರೀತಿಯ ಸದ್ದು ಯಾವಾಗಲೂ ಜೋರುʼ; ಟ್ರೋಲ್‌ ಮಾಡಿದವರಿಗೆ ತ್ರಿಷಾ ತಿರುಗೇಟು

-

Avinash GR
Avinash GR May 11, 2026 1:03 PM

ಚೆನ್ನೈನ ಜವಾಹರ್ ಲಾಲ್ ನೆಹರು ಸ್ಟೇಡಿಯಂನಲ್ಲಿ ಮೇ 10ರಂದು ನಡೆದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಟಿ ತ್ರಿಶಾ ಕೃಷ್ಣನ್ ಅವರು ಸಖತ್‌ ಹೈಲೈಟ್‌ ಆಗಿದ್ದರು. ಅವರು ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ತುಂಬಾ ಟ್ರೋಲ್‌ ಮಾಡಲಾಗಿತ್ತು. ಇದೀಗ ನಟಿ ತ್ರಿಶಾ ಅಂತಹ ಟ್ರೋಲ್‌ಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ "ಪ್ರೀತಿಯ ಸದ್ದು ಯಾವಾಗಲೂ ಜೋರಾಗಿರುತ್ತದೆ" (Love is always louder) ಎಂದು ಬರೆದುಕೊಳ್ಳುವ ಮೂಲಕ, ತಮ್ಮನ್ನು ಟೀಕಿಸಿದವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಫೋಟೋಗಳನ್ನು ತ್ರಿಶಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

Thalapathy Vijay: ನಟ ವಿಜಯ್‌-ಸಂಗೀತಾ ಡಿವೋರ್ಸ್‌ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್‌

ನೆಟ್ಟಿಗರ ಕಾಮೆಂಟ್ಸ್‌ ಏನು?

ವಿಜಯ್ ಮತ್ತು ಸಂಗೀತಾ ದಂಪತಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಗಳ ನಡುವೆ, ವಿಜಯ್ ಮತ್ತು ತ್ರಿಶಾ ನಡುವಿನ ಸಂಬಂಧದ ಬಗ್ಗೆ ಹಬ್ಬಿರುವ ಸುದ್ದಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಂತಹ ಸಮಯದಲ್ಲಿಯೇ ತ್ರಿಶಾ ಅವರ ಈ ಪೋಸ್ಟ್ ಹೊರಬಿದ್ದಿದೆ. ನೆಟ್ಟಿಗರು ತ್ರಿಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಂಗೀತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ ಮತ್ತು ಮಕ್ಕಳ ಪರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿಜಯ್ ಅವರ ಪೋಷಕರು ಭಾಗವಹಿಸಿದ್ದರು, ಆದರೆ ವಿಜಯ್ ಪತ್ನಿ ಸಂಗೀತಾ ಮತ್ತು ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಗೈರಾಗಿದ್ದರು. ಪತ್ನಿ ಮತ್ತು ಮಕ್ಕಳ ಅನುಪಸ್ಥಿತಿಯ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ತ್ರಿಶಾ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌

ಫಂಕ್ಷನ್‌ನಲ್ಲಿ ತ್ರಿಶಾ ಮಿಂಚಿಂಗ್

ವಿಜಯ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ತ್ರಿಶಾ ಅವರು ನೀಲಿ ಬಣ್ಣದ (Teal) ಕಾಂಜೀವರಂ ಸೀರೆಯನ್ನು ಧರಿಸಿ ಕಂಗೊಳಿಸುತ್ತಿದ್ದರು. ಇದಕ್ಕೆ ಕ್ರೀಮ್ ಬಣ್ಣದ ಎಂಬ್ರಾಯ್ಡರಿ ವರ್ಕ್‌ ಇರುವ ಬ್ಲೌಸ್ ಧರಿಸಿದ್ದರು. ವಜ್ರ ಮತ್ತು ಕೆಂಪು ಹರಳುಗಳಿರುವ ಚೋಕರ್ ಹಾಗೂ ಮ್ಯಾಚಿಂಗ್ ಓಲೆಗಳೊಂದಿಗೆ, ಮಲ್ಲಿಗೆ ಹೂವು ಮುಡಿದು ಸಾಂಪ್ರದಾಯಿಕವಾಗಿ ಸಮಾರಂಭಕ್ಕೆ ಆಗಮಿಸಿದ್ದರು ತ್ರಿಶಾ.

ವಿಜಯ್‌ಗೆ ಬೆಂಬಲವಾಗಿ ನಿಂತಿರುವ ತ್ರಿಶಾ

ನಟಿ ತ್ರಿಶಾ ಅವರು ವರ್ಷಗಳಿಂದ ವಿಜಯ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಚುನಾವಣಾ ಮತ ಎಣಿಕೆಯ ದಿನದಂದು ಕೂಡ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಮೇ 4ರಂದು ತ್ರಿಶಾ ಅವರು ತಮ್ಮ 43ನೇ ಹುಟ್ಟುಹಬ್ಬದ ಅಂಗವಾಗಿ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು. ಅಲ್ಲಿಂದ ಮರಳಿದ ನಂತರ ಸೀದಾ ಚೆನ್ನೈನ ನೀಲಂಕರೈನಲ್ಲಿರುವ ವಿಜಯ್ ಅವರ ಮನೆಗೆ ಭೇಟಿ ನೀಡಿದ್ದರು.

ವಿಜಯ್ ಅವರ ರಾಜಕೀಯ ಪಕ್ಷವಾದ 'ತಮಿಳಗ ವೆಟ್ರಿ ಕಳಗಂ' (TVK) ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಈ ಐತಿಹಾಸಿಕ ಜಯದೊಂದಿಗೆ, 60ರ ದಶಕದಿಂದ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಆಡಳಿತಕ್ಕೆ ಟಿವಿಕೆ ಅಂತ್ಯ ಹಾಡಿದೆ.