The Bengal Files: 'ಬೆಂಗಾಲ್ ಫೈಲ್ಸ್’ ಚಿತ್ರದಿಂದ ಮತ್ತೊಂದು ವಿವಾದ; ನಿಜವಾದ ಗೋಪಾಲ್ ಪಥ ಕುಟುಂಬದಿಂದ ಆಕ್ಷೇಪ
1946ರ ಕೋಲ್ಕತ್ತ ಗಲಭೆಯ ಕುರಿತ ನೈಜ ಘಟನೆಯಾಧಾರಿತ ಸಿನಿಮಾ 'ದಿ ಬೆಂಗಾಲ್ ಫೈಲ್ಸ್'ನ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಶನಿವಾರ ಕೋಲ್ಕತ್ತಾ ಪೊಲೀಸರು ತಡೆ ಹಿಡಿದಿದ್ದರು. ಆದರೆ ಇದೀಗ ಚಿತ್ರ ತಂಡಕ್ಕೆ ಮತ್ತೊಂದು ವಿಘ್ನ ಎದುರಾಗಿದೆ.


ಕೋಲ್ಕತಾ: ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ‘ದಿ ಬೆಂಗಾಲ್ ಫೈಲ್ಸ್’ (The Bengal Files) ಸೆಪ್ಟೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ವಿವಾದಕ್ಕೆ ಕಾರಣವಾಗಿದೆ. ‘ದಿ ತಾಷ್ಕೆಂಟ್ ಫೈಲ್ಸ್’ (The Tashkent Files) ಮತ್ತು ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ನಂತರದ ಈ ಮೂರನೇ ‘ಫೈಲ್ಸ್’ ಚಿತ್ರವು 1946ರ ಕೋಲ್ಕತಾ ದೊಡ್ಡ ಹತ್ಯಾಕಾಂಡ ಮತ್ತು ನೋಖಾಲಿ ಗಲಭೆಗಳನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರ ಮಾಡಲಾಗಿದೆ.
ಆರಂಭದಲ್ಲಿ ‘ದಿ ದೆಹಲಿ ಫೈಲ್ಸ್’ ಎಂದು ಕರೆಯಲಾಗಿದ್ದ ಈ ಚಿತ್ರವನ್ನು ‘ದಿ ಬೆಂಗಾಲ್ ಫೈಲ್ಸ್’ ಎಂದು ಬದಲಾಯಿಸಲಾಗಿದೆ. ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ (ಮಾರ್ಚ್-ಏಪ್ರಿಲ್ 2026)ಗೆ ಮುಂಚಿತವಾಗಿಯೇ ಈ ಚಿತ್ರದ ಬಿಡುಗಡೆಯ ಸಮಯವು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ ʼದಿ ಬೆಂಗಾಲ್ ಫೈಲ್ಸ್ʼ ವಿವಾದವು 1946ರ ಗಲಭೆಯ ಸಮಯದಲ್ಲಿ ಹಿಂದೂಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗೋಪಾಲ್ ಪಥ ಮುಖರ್ಜಿ ಅವರ ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದೆ.
ಗೋಪಾಲ್ ಪಥ ಯಾರು?
1946ರ ಕೋಲ್ಕತಾ ಹತ್ಯಾಕಾಂಡ ಸಂದರ್ಭದಲ್ಲಿ ಗೋಪಾಲ್ ಮುಖರ್ಜಿ ಎಂದೇ ಗುರುತಿಸಲ್ಪಟ್ಟ ಗೋಪಾಲ್ ಪಥ ಹಿಂದೂಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಮೊಮ್ಮಗ ಸಂತನು ಮುಖರ್ಜಿ ಸಂದರ್ಶನದಲ್ಲಿ, “ನನ್ನ ತಾತ ಮುಸ್ಲಿಂ ಗಲಭೆಕೋರರಿಂದ ಹಿಂದೂಗಳನ್ನು ರಕ್ಷಿಸಲು ಶಸ್ತ್ರಾಸ್ತ್ರ ಎತ್ತಿಕೊಂಡರು. ಆದರೆ ಮುಸ್ಲಿಮರ ವಿರುದ್ಧ ದ್ವೇಷವಿರಲಿಲ್ಲ” ಎಂದಿದ್ದಾರೆ. 1997ರಲ್ಲಿ ಪತ್ರಕರ್ತ ಆಂಡ್ರಿಯೂ ವೈಟ್‌ಹೆಡ್‌ಗೆ ನೀಡಿದ್ದ ಸಂದರ್ಶನದ ವೇಳೆ ಗೋಪಾಲ್ ಪಥ, “ಮಹಿಳೆಯರೊಂದಿಗೆ ದುರ್ವರ್ತನೆ ಮಾಡದಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದೆ. ಲೂಟಿ ಮಾಡಬೇಡಿ, ಮಹಿಳೆಯರನ್ನು ಕೊಲಬೇಡಿ ಎಂದಿದ್ದೆ” ಎಂದು ಹೇಳಿದ್ದರು.
ಈ ಸುದ್ದಿಯನ್ನು ಓದಿ:Viral Video: ಟರ್ಬನ್ ಬಿಚ್ಚಿ ಸಿಖ್ ವೃದ್ಧರ ಮೇಲೆ ಹಲ್ಲೆ- ವಿಡಿಯೊ ವೈರಲ್Ayodhya Ram Mandir: ಅಯೋಧ್ಯೆಯ ರಾಮಮಂದಿರದಲ್ಲಿ ಮೊದಲ ಬಾರಿಗೆ ಧ್ವಜಾರೋಹಣ; 5 ಸಾವಿರಕ್ಕೂ ಅಧಿಕ ಜನರಿಗೆ ಆಹ್ವಾನ ಸಾಧ್
ಚಿತ್ರದ ಟ್ರೈಲರ್‌ನಲ್ಲಿ ವಿವಾದ
ಚಿತ್ರದ ಟ್ರೈಲರ್‌ನಲ್ಲಿ ಗೋಪಾಲ್ ಪಥ (ನಟ ಸೌರವ್ ದಾಸ್) ಕಾಳಿ ದೇವಿಯ ವಿಗ್ರಹದ ಮುಂದೆ ಕೆಂಪು ತಿಲಕ ಧರಿಸಿ, “ಭಾರತ ಹಿಂದುಗಳ ರಾಷ್ಟ್ರ. ಆದರೆ ಈ ಯುದ್ಧದಲ್ಲಿ ಹಿಂದುಗಳು ಸೋಲುತ್ತಿದ್ದಾರೆ. ಗೆಲ್ಲುತ್ತಿರುವವರು ಜಿನ್ನಾ. ಏಕೆಂದರೆ ನಾವೆಲ್ಲರೂ ಗಾಂಧಿಯ ಅಹಿಂಸೆಯ ನಶೆಯಲ್ಲಿದ್ದೇವೆ” ಎಂದು ಹೇಳುತ್ತಾರೆ. ಅಲ್ಲದೆ ಹಲವರನ್ನು ಕೊಚ್ಚುವ ದೃಶ್ಯಗಳೂ ಇವೆ.
ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ
ದೆಹಲಿಯ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಗ್ನಿಹೋತ್ರಿ, “ಗೋಪಾಲ್ ಪಥ ಪಾತ್ರವು ಚಿತ್ರದ ಕೇಂದ್ರಬಿಂದುವಲ್ಲ, ಆದರೆ ಸ್ಫೂರ್ತಿಯ ಪಾತ್ರ. ಅವರ ಬಿಬಿಸಿ ಸಂದರ್ಶನದ ಆಧಾರದಲ್ಲಿ ಚಿತ್ರಣವಿದೆ. ಅವರನ್ನು ವೀರನಾಗಿಯೇ ತೋರಿಸಿದ್ದೇವೆ” ಎಂದಿದ್ದಾರೆ. ಆದರೆ ಸೌರವ್ ದಾಸ್ ಈ ವಿವಾದದಿಂದ ದೂರ ಉಳಿದಿದ್ದಾರೆ. “ನಾನು ಕೇವಲ ಪಾತ್ರವನ್ನು ಮಾಡಿದ್ದೇನೆ, ಸ್ಕ್ರಿಪ್ಟ್ ಬಗ್ಗೆ ಗೊತ್ತಿರಲಿಲ್ಲ” ಎಂದು ತಿಳಿಸಿದ್ದಾರೆ.
ಕುಟುಂಬದ ಆಕ್ಷೇಪ
ಸಂತನು ಮುಖರ್ಜಿ “ಗೋಪಾಲ್ ಪಥ ಅವರನ್ನು ‘ಕಸಾಯಿ’ ಎಂದು ಕರೆದಿರುವುದು ಅಗೌರವ. ಅವರು ಕುಸ್ತಿಪಟು, ಸ್ವಾತಂತ್ರ್ಯ ಹೋರಾಟಗಾರ ಮತ್ತು ನೇತಾಜಿಯ ತತ್ವಗಳನ್ನು ಅನುಸರಿಸಿದವರು” ಎಂದು ತಿಳಿಸಿದ್ದಾರೆ. ಅಲ್ಲದೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ನೋಟಿಸ್ ಕಳುಹಿಸಿ, ಎಫ್‌ಐಆರ್ ದಾಖಲಿಸಿದ್ದಾರೆ.