Viral Video: ಟರ್ಬನ್ ಬಿಚ್ಚಿ ಸಿಖ್ ವೃದ್ಧರ ಮೇಲೆ ಹಲ್ಲೆ- ವಿಡಿಯೊ ವೈರಲ್
Sikh men attacked in UK: ಯುಕೆಯ ವೊಲ್ವರ್‌ಹ್ಯಾಂಪ್ಟನ್‌ನಲ್ಲಿ ಇಬ್ಬರು ವೃದ್ಧ ಸಿಖ್ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗಸ್ಟ್ 15 ರಂದು ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎನ್ನಲಾಗಿದೆ.


ವೊಲ್ವರ್‌ಹ್ಯಾಂಪ್ಟನ್: ಇಬ್ಬರು ವೃದ್ಧ ಸಿಖ್ ವ್ಯಕ್ತಿಗಳ (Sikh men) ಮೇಲೆ ಯುಕೆಯ (United Kingdom) ವೊಲ್ವರ್‌ಹ್ಯಾಂಪ್ಟನ್‌ನಲ್ಲಿ (Wolverhampton) ಹಲ್ಲೆ (Assault) ನಡೆಸಲಾಗಿದೆ. ಬಲವಂತವಾಗಿ ಸಿಖ್ ವ್ಯಕ್ತಿಯೊಬ್ಬನ ಪೇಟವನ್ನು ತೆಗೆಯಲಾಗಿದೆ. ಈ ಘಟನೆ ಆಗಸ್ಟ್ 15 ರಂದು ನಡೆದಿದೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ (x) ಶಿರೋಮಣಿ ಅಕಾಲಿ ದಳದ ಅಧ್ಯಕ್ಷ (Shiromani Akali Dal President) ಸುಖ್‌ಬೀರ್ ಸಿಂಗ್ ಬಾದಲ್ (Sukhbir Singh Badal) ಎಂಬವರು ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.
ಯುಕೆಯ ವೊಲ್ವರ್‌ಹ್ಯಾಂಪ್ಟನ್‌ನಲ್ಲಿ ಇಬ್ಬರು ವೃದ್ಧ ಸಿಖ್ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಒಬ್ಬ ಸಿಖ್ ವ್ಯಕ್ತಿಯ ಪೇಟವನ್ನು ಬಲವಂತವಾಗಿ ತೆಗೆಸಲಾಗಿದೆ. ಈ ಕುರಿತು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರು ವಿಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ವಿಡಿಯೊದಲ್ಲಿ ಒಬ್ಬ ವ್ಯಕ್ತಿಯು ವೃದ್ಧ ಸಿಖ್‌ರಲ್ಲಿ ಒಬ್ಬನನ್ನು ಒದ್ದು ಹೊಡೆಯುವುದನ್ನು ಕಾಣಬಹುದು. ದಾರಿಹೋಕನೊಬ್ಬ ಅವರನ್ನು ತಡೆಯಲು ಪ್ರಯತ್ನಿಸಿರುವುದು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ಇನ್ನೊಬ್ಬ ಸಿಖ್ ವ್ಯಕ್ತಿ ಗಾಯಗೊಂಡ ಸ್ಥಿತಿಯಲ್ಲಿರುವುದು ಕೂಡ ಇದರಲ್ಲಿ ಕಾಣಬಹುದು. ಯುಕೆಯ ವೊಲ್ವರ್‌ಹ್ಯಾಂಪ್ಟನ್‌ನಲ್ಲಿ ಈ ಘಟನೆ ನಡೆದಿದೆ. ಇದು ಜನಾಂಗೀಯ ದ್ವೇಷ. ಇದರಲ್ಲಿ ಸಿಖ್ ಸಮುದಾಯವನ್ನು ಗುರಿಯಾಗಿಸಿಕೊಳ್ಳಲಾಗಿದೆ. ಎಂದು ಸುಖ್‌ಬೀರ್ ಸಿಂಗ್ ಬಾದಲ್ ತಿಳಿಸಿದ್ದಾರೆ.
I strongly condemn the horrific attack on two elderly Sikh men in Wolverhampton, UK, during the course of which one Sikh’s turban was removed forcibly.
— Sukhbir Singh Badal (@officeofssbadal) August 18, 2025
▪️This racist hate crime targets the Sikh community, which always seeks Sarbat Da Bhala (the well-being of all).
▪️Known for… pic.twitter.com/5G0DJbZbBs
ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಮತ್ತು ಯುಕೆ ಗೃಹ ಕಚೇರಿ ತ್ವರಿತವಾಗಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಸಿಖ್ ವಲಸೆಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯುಕೆ ಸರ್ಕಾರದೊಂದಿಗೆ ಈ ವಿಷಯವನ್ನು ಚರ್ಚಿಸುವಂತೆ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಹದಿಹರೆಯದ ಯುವಕರನ್ನು ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Pakistan annual contracts: ಕೇಂದ್ರ ಗುತ್ತಿಗೆ ಪ್ರಕಟಿಸಿದ ಪಿಸಿಬಿ: ಬಾಬರ್, ರಿಜ್ವಾನ್‌ಗೆ ಹಿಂಬಡ್ತಿ
ಕಳೆದ ಆಗಸ್ಟ್ 4 ರಂದು ಲಾಸ್ ಏಂಜಲೀಸ್‌ನಲ್ಲಿ ವೃದ್ಧ ಸಿಖ್ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿತ್ತು. ಶಂಕಿತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಲಾಸ್ ಏಂಜಲೀಸ್‌ನ ಸಿಖ್ ಗುರುದ್ವಾರದ ಬಳಿ ವಾಕಿಂಗ್ ಮಾಡುತ್ತಿದ್ದ ಹರ್ಪಾಲ್ ಸಿಂಗ್ (70) ಮೇಲೆ ಬೋ ರಿಚರ್ಡ್ ವಿಟಾಗ್ಲಿಯಾನೊ ಎಂಬಾತ ಗಂಭೀರವಾಗಿ ಹಲ್ಲೆ ನಡೆಸಿದ್ದ ಎನ್ನಲಾಗಿದೆ.