ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

The Daily Drop: ತಂದೆಯ ಹಾದಿಯಲ್ಲೇ ಕೋರ್ಟ್‌ ರೂಮ್ ಡ್ರಾಮಾ ಕಥೆ ಹೇಳಲು ಬಂದ ಟಿ.ಎನ್. ಸೀತಾರಾಮ್ ಪುತ್ರಿ ಅಶ್ವಿನಿ ಅನೀಶ್!

ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಪುತ್ರಿ ಅಶ್ವಿನಿ ಅನೀಶ್ 'ತಪಸ್ವಿ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ 'ದಿ ಡೈಲಿ ಡ್ರಾಪ್' ಎಂಬ ಆರು ಕಂತುಗಳ ವಿಭಿನ್ನ ಕೋರ್ಟ್‌ರೂಮ್ ವೆಬ್ ಸರಣಿಯನ್ನು ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ಸದ್ಯ 'Lifepages' ಯೂಟ್ಯೂಬ್ ಚಾನೆಲ್‌ನಲ್ಲಿ ಇದು ಪ್ರಸಾರವಾಗುತ್ತಿದೆ.

'ದಿ ಡೈಲಿ ಡ್ರಾಪ್' ವೆಬ್ ಸರಣಿಗೆ ಟಿ. ಎನ್‌. ಸೀತಾರಾಮ್ ಪುತ್ರಿಯ ನಿರ್ದೇಶನ

-

Avinash GR
Avinash GR Jun 16, 2026 1:32 PM

ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಅದ್ಭುತ ಧಾರಾವಾಹಿಗಳನ್ನೇ ನೀಡಿದ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಕೋರ್ಟ್‌ ರೂಮ್ ಕಥೆಗಳಿಗೆ ಬೃಹತ್ ಪ್ರೇಕ್ಷಕ ವರ್ಗವಿದೆ. ‘ಮಾಯಾಮೃಗ’, ‘ಮನ್ವಂತರ’, ‘ಮುಕ್ತ’, ‘ಮುಕ್ತ ಮುಕ್ತ’ ಹಾಗೂ ‘ಮಗಳು ಜಾನಕಿ’ಯಂತಹ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ವಕೀಲರ ವಾದ-ಪ್ರತಿವಾದ, ನಿಗೂಢ ಕ್ರಿಮಿನಲ್ ಪ್ರಕರಣಗಳನ್ನು ಹೇಳುತ್ತಾ ವೀಕ್ಷಕರನ್ನು ಸೆಳೆದ ಹೆಗ್ಗಳಿಕೆ ಸೀತಾರಾಮ್ ಅವರದ್ದು. ಇದೀಗ ಅವರ ಪುತ್ರಿ ಅಶ್ವಿನಿ ಅನೀಶ್ ಕೂಡ ತಂದೆಯಂತೆಯೇ ಕಾನೂನು ಅಖಾಡದ ಸಸ್ಪೆನ್ಸ್ ಕಥೆಯೊಂದನ್ನು ಹಿಡಿದು ನಿರ್ದೇಶನಕ್ಕೆ ಇಳಿದಿದ್ದಾರೆ.

‘ದಿ ಡೈಲಿ ಡ್ರಾಪ್’ ಸೀರೀಸ್‌

ಅಶ್ವಿನಿ ಅನೀಶ್ ಅವರು ‘ತಪಸ್ವಿ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ‘ದಿ ಡೈಲಿ ಡ್ರಾಪ್’ (The Daily Drop) ಎಂಬ ವಿಭಿನ್ನ ಕೋರ್ಟ್‌ ರೂಮ್ ಮತ್ತು ಇನ್ವೆಸ್ಟಿಗೇಷನ್ ವೆಬ್ ಸೀರಿಸ್ ಅನ್ನು ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಸದ್ಯ ಲಾಂಚ್ ಆಗಿರುವ ಈ ಸೀರಿಸ್‌ಗೆ ಸಿನಿರಸಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.‌

72ನೇ ವಸಂತಕ್ಕೆ ಕಾಲಿಟ್ಟ ಹಿರಿಯ ನಿರ್ದೇಶಕ ಟಿ.ಎನ್‌.ಸೀತಾರಾಮ್‌

ಆರು ಕಂತುಗಳ ನಿಗೂಢ ಕೊಲೆ ರಹಸ್ಯ

ಒಟ್ಟು 6 ಸಂಚಿಕೆಗಳನ್ನು (Episodes) ಒಳಗೊಂಡಿರುವ ಈ ಸೀರಿಸ್‌ನ ಕಥೆ ‘ಅನಘಾ’ ಎಂಬ 35 ವರ್ಷದ ಮಹಿಳೆಯ ನಿಗೂಢ ಸಾವಿನ ಸುತ್ತ ಸಾಗುತ್ತದೆ. ಕಾರ್ ಡ್ರೈವ್ ಮಾಡುವಾಗ ಅನಘಾ ಹಠಾತ್ತನೆ ಮೃತಪಡುತ್ತಾಳೆ. ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಇದು ‘ಹೃದಯಾಘಾತ’ (Cardiac Arrest) ಎಂದು ಬಂದಿದ್ದರೂ, ಅದರ ಹಿಂದೆ ಕರಾಳ ಹತ್ಯೆಯ ಪಿತೂರಿ ಅಡಗಿರುತ್ತದೆ. ಅನಘಾಳನ್ನು ಕೊಲೆ ಮಾಡಿದ್ದು ಯಾರು? ಯಾವ ಉದ್ದೇಶಕ್ಕಾಗಿ ಕೊಂದರು? ಎಂಬುದನ್ನು ಕೋರ್ಟ್ ಅಂಗಳದಲ್ಲಿ ತನಿಖೆಯ ಮೂಲಕ ಬಯಲಿಗೆಳೆಯುವುದೇ ಈ ಸೀರಿಸ್‌ನ ಮುಖ್ಯ ಕಥಾವಸ್ತು. ಟಿಎನ್ನೆಸ್‌ ಅವರ ಧಾರಾವಾಹಿಗಳಂತೆಯೇ ಇಲ್ಲಿನ ಪ್ರತಿ ಕಂತಿನಲ್ಲೂ ಕುತೂಹಲ ಕಾಯ್ದುಕೊಳ್ಳಲಾಗಿದೆ.

TN Seetharam: ಕಿರುತೆರೆ ಲೋಕದಲ್ಲಿ ಇತಿಹಾಸ ಸೃಷ್ಟಿಸಲು ತಯಾರಾದ ಟಿ.ಎನ್. ಸೀತಾರಾಮ್

ಈ ಸೀರಿಸ್‌ನಲ್ಲಿ ಹಿರಿಯ ನಟ ಶ್ರೀನಿವಾಸ ಪ್ರಭು, ಅಶ್ವಿನಿ ಅನೀಶ್, ‘ಮಗಳು ಜಾನಕಿ’ ಖ್ಯಾತಿಯ ರಶ್ಮಿ ಭಾರ್ಗಿ (ದೀಪಾ), ಶಾರ್ದುಲ್, ಸಂತೋಷ್ ಕರ್ಕಿ, ಸುದರ್ಶನ್, ನಮನ, ಪರಮ್, ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಪವನ್, ಡಿಟೆಕ್ಟಿವ್ ಪಾತ್ರದಲ್ಲಿ ನವನೀತ್ ಹಾಗೂ ಚಂದನ್ ಶಂಕರ್ ಒಳಗೊಂಡ ಬಲಿಷ್ಠ ತಾರಾಗಣವಿದೆ. ಮಹೇಶ್ ಪೈ ಅವರ ಛಾಯಾಗ್ರಹಣವಿದ್ದು, ಶಿವ ಸಮರ್ಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸದ್ಯ ಈ ಸಸ್ಪೆನ್ಸ್ ಥ್ರಿಲ್ಲರ್ ಸೀರಿಸ್ ಅನ್ನು ‘Lifepages’ ಯೂಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ. ಸೀತಾರಾಮ್ ಅವರ ಕೋರ್ಟ್ ಡ್ರಾಮಾ ಶೈಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಪ್ರೇಕ್ಷಕರಿಗೆ ಅವರ ಪುತ್ರಿಯ ಈ ಪ್ರಯತ್ನ ಖುಷಿ ನೀಡುವುದಂತೂ ಪಕ್ಕಾ!