ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Megastar Dr Chiranjeevi: ಮೆಗಾಸ್ಟಾರ್ ಕೈಯಿಂದ ಪ್ರಶಸ್ತಿ ಸ್ವೀಕಾರ: ಸಮಾಜಸೇವೆಗೆ ಚಿರಂಜೀವಿ ಅವರ ಪ್ರೇರಣೆಯೇ ಬಲ: ನಾರಾಯಣಸ್ವಾಮಿ

ಹೈದರಾಬಾದ್‌ನ ಐಟಿಸಿ ಕೊಹಿನೂರ್ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಚಿರಂಜೀವಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಚಿರಂಜೀವಿ ಅವರ ಸಿನಿಮಾಗಳಿಗಿಂತಲೂ ಸಮಾಜದ ಒಳಿತಿಗಾಗಿ ಅವರು ಕೈಗೊಂಡಿರುವ ಸೇವಾ ಕಾರ್ಯಗಳು ತಮ್ಮನ್ನು ಹೆಚ್ಚು ಪ್ರೇರೇಪಿಸಿವೆ ಎಂದರು.

ಸಮಾಜಸೇವೆಗೆ ಚಿರಂಜೀವಿ ಅವರ ಪ್ರೇರಣೆಯೇ ಬಲ

-

Profile
Ashok Nayak Sep 22, 2026 11:33 PM

ಶಿಡ್ಲಘಟ್ಟ: ಮೆಗಾಸ್ಟಾರ್ ಡಾ.ಚಿರಂಜೀವಿ(Megastar Dr Chiranjeevi) ಅವರಿಂದಲೇ ಪ್ರಶಸ್ತಿ ಸ್ವೀಕರಿಸುವ ಅವಕಾಶ ದೊರೆತಿರುವುದು ತಮ್ಮ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ ಎಂದು ಚಿರಂಜೀವಿ ಅಭಿಮಾನಿ ಸಂಘದ ತಾಲೂಕು ಅಧ್ಯಕ್ಷ ಕೆ.ನಾರಾಯಣಸ್ವಾಮಿ ಹೇಳಿದರು.

ಹೈದರಾಬಾದ್‌ನ ಐಟಿಸಿ ಕೊಹಿನೂರ್ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಚಿರಂಜೀವಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಚಿರಂಜೀವಿ ಅವರ ಸಿನಿಮಾಗಳಿಗಿಂತಲೂ ಸಮಾಜದ ಒಳಿತಿಗಾಗಿ ಅವರು ಕೈಗೊಂಡಿರುವ ಸೇವಾ ಕಾರ್ಯಗಳು ತಮ್ಮನ್ನು ಹೆಚ್ಚು ಪ್ರೇರೇಪಿಸಿವೆ ಎಂದರು.

ಇದನ್ನೂ ಓದಿ: Shidlaghatta News: ಗುರುವಿನ ಮಾರ್ಗದರ್ಶನವೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ: ಬಿ.ಎನ್. ಕೃಷ್ಣಪ್ಪ

ಚಿರಂಜೀವಿ ಅವರ ಆದರ್ಶಗಳಿಂದ ಪ್ರೇರಣೆ ಪಡೆದು ರಕ್ತದಾನ, ನೇತ್ರದಾನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇಂತಹ ಸೇವಾ ಕಾರ್ಯಗಳನ್ನು ಗುರುತಿಸಿ ಮೆಗಾಸ್ಟಾರ್ ಅವರೇ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಪ್ರಶಸ್ತಿಯನ್ನು ವೈಯಕ್ತಿಕ ಗೌರವವೆಂದು ಪರಿಗಣಿಸದೆ, ಸಮಾಜಕ್ಕಾಗಿ ನಡೆಸುತ್ತಿರುವ ಸೇವಾ ಕಾರ್ಯಗಳಿಗೆ ದೊರೆತ ಪ್ರೋತ್ಸಾಹ ಹಾಗೂ ಆಶೀರ್ವಾದವೆಂದು ಭಾವಿಸುವುದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈ ಗೌರವ ಪ್ರೇರಣೆಯಾಗಿದೆ ಎಂದರು.

ಪ್ರಶಸ್ತಿ ದೊರಕಲು ಸಹಕರಿಸಿದ ಶ್ರೀಮತಿ ಸುಶ್ಮಿತಾ ಕೋಣಿದಲ, ಮೆಗಾ ಯೂತ್ ಫೋರ್ಸ್ ರಾಷ್ಟ್ರೀಯ ಸಂಚಾಲಕ ಎಡಿದಾ ಬಾಬಿ, ಕರ್ನಾಟಕ ಸಂಚಾಲಕ ವಿ.ಶ್ರೀನಿವಾಸ್ ಹಾಗೂ ಸಂಘದ ಎಲ್ಲ ಸದಸ್ಯರಿಗೆ ನಾರಾಯಣಸ್ವಾಮಿ ಕೃತಜ್ಞತೆ ಸಲ್ಲಿಸಿದರು.