ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Suraj Bolar: ತುಳು ಚಿತ್ರ ನಿರ್ದೇಶಕ ಸೂರಜ್ ಬೋಳಾರ್ ನಿಧನ

ತುಳು ಚಿತ್ರರಂಗದ ನಿರ್ದೇಶಕ, ನಟ ಹಾಗೂ ಬರಹಗಾರ ಸೂರಜ್ ಬೋಳಾರ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ಹಠಾತ್ ನಿಧನವು ಕರಾವಳಿ ಚಿತ್ರರಂಗ, ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ತೀವ್ರ ಆಘಾತವನ್ನುಂಟುಮಾಡಿದೆ. ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ವಿಭಿನ್ನ ನಿರ್ದೇಶನ ಶೈಲಿಯ ಮೂಲಕ ಕರಾವಳಿ ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿದ್ದರು.

Suraj Bolar: ತುಳು ಚಿತ್ರ ನಿರ್ದೇಶಕ ಸೂರಜ್ ಬೋಳಾರ್ ನಿಧನ

ಸೂರಜ್‌ ಬೋಳಾರ್ -

Yashaswi Devadiga
Yashaswi Devadiga Nov 23, 2026 8:20 AM

ತುಳು ಚಿತ್ರರಂಗದ ನಿರ್ದೇಶಕ, ನಟ ಹಾಗೂ ಬರಹಗಾರ ಸೂರಜ್ ಬೋಳಾರ್ (Suraj Bolar) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ಹಠಾತ್ ನಿಧನವು ಕರಾವಳಿ ಚಿತ್ರರಂಗ, ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ತೀವ್ರ ಆಘಾತವನ್ನುಂಟುಮಾಡಿದೆ.

ದಿವಂಗತ ಆನಂದ ಬೋಳಾರ್ ಅವರ ಪುತ್ರರಾಗಿದ್ದ ಸೂರಜ್ ಬೋಳಾರ್ ಅವರು ನಿರ್ದೇಶಕ, ನಟ ಹಾಗೂ ಬರಹಗಾರರಾಗಿ ಗುರುತಿಸಿಕೊಂಡಿದ್ದರು. ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ವಿಭಿನ್ನ ನಿರ್ದೇಶನ ಶೈಲಿಯ ಮೂಲಕ ಕರಾವಳಿ ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿದ್ದರು.

ವಿಶೇಷವಾಗಿ 'ಪತ್ತೀಸ್ ಗ್ಯಾಂಗ್' ಮತ್ತು 'ರಾಹುಕಾಲ ಗುಳಿಗಕಾಲ' ಎಂಬ ತುಳು ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಸಿನಿಮಾ ನಿರ್ದೇಶನದ ಜೊತೆಗೆ ರೇಡಿಯೋ ಹಾಗೂ ಮಾಧ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ ಅವರು ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: Bigg Boss Kannada 13: ಜಗ್ಗ ಮಮ್ಮಿ ʻಗಂಡಸ್ತನʼ ಪ್ರಶ್ನಿಸಿದ ಮಂಜನಿಗೆ ಕಿಚ್ಚನ ಕ್ಲಾಸ್!

ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ

ಸೂರಜ್ ಬೋಳಾರ್ ಅವರ ಅಂತಿಮ ದರ್ಶನಕ್ಕೆ ನವೆಂಬರ್ 23ರ ಸೋಮವಾರ ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ಬೆಂಗಳೂರಿನ ಅಂದ್ರಹಳ್ಳಿ ಮುಖ್ಯರಸ್ತೆಯಲ್ಲಿರುವ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ.ಅವರ ಅಂತ್ಯಕ್ರಿಯೆಯು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಔಟರ್ ರಿಂಗ್ ರಸ್ತೆಯಲ್ಲಿರುವ ಸುಮನಹಳ್ಳಿ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸೂರಜ್ ಬೋಳಾರ್ ಅವರ ಅಗಲಿಕೆಯಿಂದ ತುಳು ಚಿತ್ರರಂಗ ಒಬ್ಬ ಪ್ರತಿಭಾವಂತ ನಿರ್ದೇಶಕನನ್ನು ಕಳೆದುಕೊಂಡಂತಾಗಿದೆ. ಅವರ ಕಲಾಸೇವೆ ಹಾಗೂ ಚಿತ್ರರಂಗಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯ.