ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೋವು ನಿವಾರಕ ಮಾತ್ರೆ ಬೇಡ: ನೈಸರ್ಗಿಕ ವಿಧಾನಗಳ ಮೂಲಕ ಮುಟ್ಟಿನ ಸೆಳೆತ ಕಡಿಮೆ ಮಾಡೋದು ಹೇಗೆ?

ಮಹಿಳೆಯರು ಪ್ರತಿ ತಿಂಗಳು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಮುಟ್ಟಿನ ಹೊಟ್ಟೆ ನೋವು (ಡಿಸ್ಮೆನೊರಿಯಾ). ಈ ನೋವಿನಿಂದಾಗಿ ದೈನಂದಿನ ಕೆಲಸಗಳಿಗೆ ಅಡ್ಡಿಯಾಗುವುದು ಸಹಜ. ಆದರೆ, ಕೆಲವು ಸರಳ ಮನೆಮದ್ದುಗಳು ಮತ್ತು ಜೀವನಶೈಲಿಯ ಬದಲಾವಣೆಗಳ ಮೂಲಕ ಈ ನೋವಿಗೆ ತಕ್ಷಣದ ಪರಿಹಾರ ಪಡೆಯಬಹುದು.

ನೈಸರ್ಗಿಕ ವಿಧಾನಗಳ ಮೂಲಕ ಮುಟ್ಟಿನ ಸೆಳೆತ ಕಡಿಮೆ ಮಾಡೋದು ಹೇಗೆ?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 23, 2026 7:00 AM

ಬೆಂಗಳೂರು: ಮಹಿಳೆಯರು ಪ್ರತಿ ತಿಂಗಳು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಮುಟ್ಟಿನ ಹೊಟ್ಟೆ ನೋವು (ಡಿಸ್ಮೆನೊರಿಯಾ). ಈ (Menstrual Cramps) ನೋವಿನಿಂದಾಗಿ ದೈನಂದಿನ ಕೆಲಸಗಳಿಗೆ ಅಡ್ಡಿಯಾಗುವುದು ಸಹಜ. ಆದರೆ, ಕೆಲವು ಸರಳ ಮನೆಮದ್ದುಗಳು ಮತ್ತು ಜೀವನಶೈಲಿಯ ಬದಲಾವಣೆಗಳ ಮೂಲಕ ಈ ನೋವಿಗೆ ತಕ್ಷಣದ ಪರಿಹಾರ ಪಡೆಯಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ನೋವು ನಿವಾರಣೆಗೆ ಆಹಾರದಲ್ಲಿ ಕೆಲ ಅಂಶಗಳನ್ನು ಸೇರಿದರೆ ಸೆಳೆತ ಕಡಿಮೆ ಮಾಡುವಲ್ಲಿ ಸಹಕಾರಿಯಾಗಲಿದೆ.

ಮೆಗ್ನೀಸಿಯಮ್: ಮುಟ್ಟಿನ ಹೊಟ್ಟೆ ನೋವನ್ನು ಕಡಿಮೆ ಮಾಡುವಲ್ಲಿ ಮೆಗ್ನೀಸಿಯಮ್ ಒಂದು ಪ್ರಮುಖ ಖನಿಜವಾಗಿದ್ದು, ಇದು ಗರ್ಭಾಶಯದ ಸ್ನಾಯುಗಳನ್ನು ಸಡಿಲಗೊಳಿಸಿ ನೋವು ಮತ್ತು ಸೆಳೆತವನ್ನು ತಡೆಯುತ್ತದೆ. ಪ್ರೊಸ್ಟಗ್ಲಾಂಡಿನ್ ನಿಯಂತ್ರಣ. ಮುಟ್ಟಿನ ನೋವಿಗೆ ಕಾರಣವಾಗುವ 'ಪ್ರೊಸ್ಟಗ್ಲಾಂಡಿನ್' ಎಂಬ ರಾಸಾಯನಿಕದ ಉತ್ಪಾದನೆಯನ್ನು ಮೆಗ್ನೀಸಿಯಮ್ ಕಡಿಮೆ ಮಾಡುತ್ತದೆ.

ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರಗಳು

  • ಹಸಿರು ಸೊಪ್ಪುಗಳು: ಪಾಲಕ್ ಸೊಪ್ಪು, ಮೆಂತ್ಯ ಸೊಪ್ಪು.
  • ಬೀಜಗಳು ಮತ್ತು ಒಣಹಣ್ಣುಗಳು: ಕುಂಬಳಕಾಯಿ ಬೀಜ, ಬಾದಾಮಿ, ಗೋಡಂಬಿ, ಕಡಲೆಕಾಯಿ ಮತ್ತು ಅಗಸೆ ಬೀಜ
  • ಹಣ್ಣುಗಳು ಮತ್ತು ಧಾನ್ಯಗಳು: ಬಾಳೆಹಣ್ಣು, ಅವಕಾಡೊ, ರಾಗಿ, ಓಟ್ಸ್ ಮತ್ತು ಕಂದು ಅಕ್ಕಿ
  • ಇತರ ಆಹಾರಗಳು: ಡಾರ್ಕ್ ಚಾಕೊಲೇಟ್ (ಕನಿಷ್ಠ 70% ಕೋಕೋ ಇರುವುದು), ಸೋಯಾಬೀನ್ ಮತ್ತು ಕಪ್ಪು ಬೀನ್ಸ್

ಒಮೆಗಾ-3 ಕೊಬ್ಬಿನಾಮ್ಲಗಳು

ಮುಟ್ಟಿನ ಹೊಟ್ಟೆ ನೋವನ್ನು ನಿವಾರಿಸುವಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಿ, ನೋವಿನ ತೀವ್ರತೆಯನ್ನು ತಗ್ಗಿಸುತ್ತವೆ.

  • ಒಮೆಗಾ-3 ಕೊಬ್ಬಿನಾಮ್ಲಗಳು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿವೆ, ಇದು ಗರ್ಭಾಶಯದ ಊತ ಮತ್ತು ನೋವನ್ನು ಶಮನಗೊಳಿಸುತ್ತದೆ.
  • ಪ್ರೊಸ್ಟಗ್ಲಾಂಡಿನ್ ನಿಯಂತ್ರಣ. ಮೆಗ್ನೀಸಿಯಮ್‌ನಂತೆಯೇ, ಒಮೆಗಾ-3 ಕೂಡ ನೋವಿಗೆ ಕಾರಣವಾಗುವ ಪ್ರೊಸ್ಟಗ್ಲಾಂಡಿನ್ ಹಾರ್ಮೋನುಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ.
  • ನೋವು ನಿವಾರಕ ಮಾತ್ರೆಗಳ ಅವಲಂಬನೆ ಇಳಿಕೆ. ನಿಯಮಿತವಾಗಿ ಒಮೆಗಾ-3 ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಿ ನೋವು ನಿವಾರಕ ಮಾತ್ರೆಗಳನ್ನು (Painkillers) ತೆಗೆದುಕೊಳ್ಳುವ ಅಗತ್ಯ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ಒಮೆಗಾ-3 ಸಮೃದ್ಧವಾಗಿರುವ ಆಹಾರಗಳು

  • ಸಸ್ಯಾಹಾರಿ ಮೂಲಗಳು: ಅಗಸೆ ಬೀಜ, ಚಿಯಾ ಬೀಜಗಳು , ವಾಲ್‌ನಟ್ಸ್ , ಸೋಯಾಬೀನ್ ಮತ್ತು ರಾಜ್ಮಾ.
  • ಮಾಂಸಾಹಾರಿ ಮೂಲಗಳು: ಸಾಲ್ಮನ್ , ಬಂಗುಡೆ , ಮತ್ತು ಬೂತಾಯಿ ನಂತಹ ಕೊಬ್ಬಿನಾಂಶವಿರುವ ಮೀನುಗಳು.
  • ಅಡುಗೆ ಎಣ್ಣೆಗಳು: ಅಗಸೆ ಬೀಜದ ಎಣ್ಣೆ, ಸಾಸಿವೆ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆ.

ವೈದ್ಯರ ಸಲಹೆ ಯಾವಾಗ ಅಗತ್ಯ?

ಮನೆಮದ್ದುಗಳಿಂದ ನೋವು ಕಡಿಮೆಯಾಗದಿದ್ದರೆ ವೈದ್ಯರ ಸಲಹೆಯ ಮೇರೆಗೆ ನೋವು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳಬಹುದು. ಒಂದು ವೇಳೆ ಹೊಟ್ಟೆ ನೋವು ಅಸಹನೀಯವಾಗಿದ್ದರೆ, ಅತಿಯಾದ ರಕ್ತಸ್ರಾವ, ಜ್ವರ ಅಥವಾ ವಾಂತಿಯಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸುವುದು ಅತ್ಯಗತ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ.