ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tumbadchi Manjula OTT : ಮರಾಠಿಗೆ ರೀಮೇಕ್ ಆದ ಈ ಕನ್ನಡದ ಸೂಪರ್ ಹಿಟ್ ಮೂವಿ ಒಟಿಟಿಗೆ ಎಂಟ್ರಿ!

Tumbadchi Manjula OTT : 'ಸು ಫ್ರಮ್ ಸೋ' ಮರಾಠಿಯಲ್ಲಿಯೂ (Maratahi Movie) ನಿರ್ಮಾಣಗೊಂಡಿತ್ತು. ಈ ಸಿನಿಮಾ . ಈಗ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಪ್ರೇಕ್ಷಕರ ಪ್ರೀತಿ ಎರಡನ್ನೂ ಗೆದ್ದ ನಂತರ ಈಗ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಮರಾಠಿ ಭಾಷೆಯಲ್ಲಿ 'ತುಂಬಾಡ್ಚಿ ಮಂಜುಳಾ' ಶೀರ್ಷಿಕೆಯಡಿ ಸಿನಿಮಾ ಮೂಡಿಬಂದಿದ್ದು, ಜೂನ್​​ 5ಕ್ಕೆ ಈ ಸಿನಿಮಾ ಬಿಡುಗಡೆ ಆಗಿತ್ತು.

ಮರಾಠಿಗೆ ರೀಮೇಕ್ ಆದ ಈ ಕನ್ನಡದ ಸೂಪರ್ ಹಿಟ್ ಮೂವಿ ಒಟಿಟಿಗೆ ಎಂಟ್ರಿ!

ತುಂಬಾಡ್ಚಿ ಮಂಜುಳಾ -

Yashaswi Devadiga
Yashaswi Devadiga Aug 5, 2026 11:00 AM

ʻಸು ಫ್ರಮ್​ ಸೋ' (Su From So movie). ಅತಿ ಕಡಿಮೆ ಬಜೆಟ್​​ನಲ್ಲಿ ನಿರ್ಮಾಣ ಆಗಿ ಬಾಕ್ಸ್​​ ಆಫೀಸ್​ನಲ್ಲಿ ದಾಖಲೆ ಬರೆದ ಕನ್ನಡ ಸಿನಿಮಾ. ಕಂಟೆಂಟ್​ ಚಿತ್ರವೊಂದು ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಾಣೋ ಮೂಲಕ ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದ್ದ 'ಸು ಫ್ರಮ್ ಸೋ' ಮರಾಠಿಯಲ್ಲಿಯೂ (Maratahi Movie) ನಿರ್ಮಾಣಗೊಂಡಿತ್ತು. ಈ ಸಿನಿಮಾ . ಈಗ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಪ್ರೇಕ್ಷಕರ ಪ್ರೀತಿ ಎರಡನ್ನೂ ಗೆದ್ದ ನಂತರ ಈಗ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಮರಾಠಿ ಭಾಷೆಯಲ್ಲಿ 'ತುಂಬಾಡ್ಚಿ ಮಂಜುಳಾ' (Tumbadchi Manjula OTT) ಶೀರ್ಷಿಕೆಯಡಿ ಸಿನಿಮಾ ಮೂಡಿಬಂದಿದ್ದು, ಜೂನ್​​ 5ಕ್ಕೆ ಈ ಸಿನಿಮಾ ಬಿಡುಗಡೆ ಆಗಿತ್ತು.

ವಿಧವ್ ಕೊರ್ಗಾಂವ್ಕರ್ ನಿರ್ದೇಶಿಸಿದ ಮತ್ತು ಜೀ ಸ್ಟುಡಿಯೋಸ್ ನಿರ್ಮಿಸಿದ 'ತುಂಬಾಡ್ಚಿ ಮಂಜುಳಾ' ​​ಚಿತ್ರದಲ್ಲಿ ಜಿತೇಂದ್ರ ಜೋಶಿ, ಓಂ ಭುಟ್ಕರ್, ಮಕರಂದ್ ಅನಸ್ಪುರೆ, ಸಾಯಿ ತಮ್ಹಂಕರ್ ಮತ್ತು ಉಷಾ ನಾಡಕರ್ಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ತುಂಬಾಡ್ಚಿ ಮಂಜುಳಾ' ಜೀ 5 ಮರಾಠಿಯಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Priyanka Chopra: ಮಗಳಿಗೆ 'ಸರ್ವ ಮಂಗಲ ಮಾಂಗಲ್ಯೇʼ ಶ್ಲೋಕ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ; ನೆಟ್ಟಿಗರಿಂದ ಮೆಚ್ಚುಗೆ

ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿಯ ಕ್ಲಬ್ ಸೇರಿದ ಸಿನಿಮಾ 'ಸು ಫ್ರಮ್ ಸೋ' ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಮೆಚ್ಚುಗೆ ಪಡೆದುಕೊಂಡಿತ್ತು. ನಮ್ಮ ಚಿತ್ರ ಬೇರೆ ಭಾಷೆಗಳಿಗೆ ರೀಮೇಕ್ ರೈಟ್ಸ್ ಪಡೆದುಕೊಂಡಿದೆ‌ ಎಂದು ಸಿನಿಮಾ ಸಕ್ಸಸ್ ಬಳಿಕ ನಿರ್ದೇಶಕ ಜೆ.ಪಿ.ತುಮಿನಾಡ್ ಮಾಹಿತಿ ನೀಡಿದ್ದರು.

2025ರ ಜುಲೈ 25ರಂದು ಚಿತ್ರಮಂದಿರ ಪ್ರವೇಶಿಸಿದ 'ಸು ಫ್ರಮ್ ಸೋ' ಪ್ರೇಕ್ಷಕರು ಮತ್ತು ವೀಕ್ಷಕರಿಂದ ಬಹುತೇಕ ಉತ್ತಮ ವಿಮರ್ಷೆ ಪಡೆದುಕೊಂಡು ಕೆಲ ದಿನಗಳವರೆಗೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಕೂಲಿ, ವಾರ್​​ 2 ಅಂತಹ ಬಿಗ್​ ಬಜೆಟ್​​, ಸ್ಟಾರ್​​ ಸಿನಿಮಾಗಳ ನಡುವೆ ಸ್ಯಾಂಡಲ್​ವುಡ್​ನ ಸ್ಮಾಲ್​ ಬಜೆಟ್​ ಸಿನಿಮಾ ಸದ್ದು ಮಾಡಿತ್ತು.

ಇದನ್ನೂ ಓದಿ: Spandana Somanna: ಬಾಯ್‌ಫ್ರೆಂಡ್‌ ಪರಿಚಯಿಸಿದ ನಟಿ ಸ್ಪಂದನಾ ಸೋಮಣ್ಣ; ಫೋಟೋ ವೈರಲ್‌

ಜೆ.ಪಿ.ತುಮಿನಾಡ್ ಆ್ಯಕ್ಷನ್​ ಕಟ್​ ಹೇಳಿ, ಅಭಿನಯಿಸಿರುವ ಈ ಚಿತ್ರವನ್ನು ಲೈಟರ್ ಬುದ್ಧ ಫಿಲ್ಮ್ಸ್​ ಬ್ಯಾನರ್​ನಡಿ ರಾಜ್ ಬಿ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ ಸೇರಿ ನಿರ್ಮಿಸಿದ್ದಾರೆ. ಶನೀಲ್ ಗೌತಮ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ, ಮೈಮ್ ರಾಮ್​ದಾಸ್ ಸೇರಿ ಹಲವರು ಅಭಿನಯಿಸಿದ್ದಾರೆ. ರಾಜ್​ ಬಿ ಶೆಟ್ಟಿ ನಿರ್ಮಾಣದ ಜೊತೆಗೆ ವಿಸ್ತೃತ ಅತಿಥಿ ಪಾತ್ರವನ್ನೂ ನಿರ್ವಹಿಸಿದ್ದಾರೆ.