Ugramm Manju: ಬಿಗ್ ಬಾಸ್ನಿಂದ ಹೊರಬಂದ ಬೆನ್ನಲ್ಲೇ ಹೊಸ ಸಿನಿಮಾದಲ್ಲಿ ಬಂಪರ್ ಆಫರ್ ಪಡೆದ ಉಗ್ರಂ ಮಂಜು
ಉಗ್ರಂ ಮಂಜು ಅವರು ಎಲ್ಲಿದ್ದಾರೆ ಎಂಬ ಕುತೂಹಲ ಅನೇಕರಲ್ಲಿತ್ತು. ಅದಕ್ಕೀಗ ಒಂದು ಫೋಟೋದ ಮೂಲಕ ಉತ್ತರ ಸಿಕ್ಕಿದೆ. ಮಂಜು ಅವರಿಗೆ ಈಗ ಆಫರ್ಗಳು ಹುಡುಕಿ ಬರುತ್ತಿವೆ. ಅವರು ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Ugramm Manju

ಬಿಗ್ ಬಾಸ್ ರಿಯಾಲಿಟಿ ಶೋ ಅದೆಷ್ಟೊ ಕಲಾವಿದರಿಗೆ ದೊಡ್ಡ ಬ್ರೇಕ್ ಕೊಟ್ಟಿದೆ. ಈ ಶೋಗೆ ಹೋಗಿ ಬಂದ ಮೇಲೆ ಅನೇಕ ಸ್ಪರ್ಧಿಗಳು ನಟನಾ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಗಳಿಸುತ್ತಿದ್ದಾರೆ. ಇದೇ ಸಾಲಿಗೆ ಈಗ ಉಗ್ರಂ ಮಂಜು ಕೂಡ ಸೇರ್ಪಡೆ ಆಗುವುದರಲ್ಲಿದ್ದಾರೆ. ಮ್ಯಾಕ್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ಚಿಕ್ಕ-ಪುಟ್ಟ ಪಾತ್ರ ಮಾಡುತ್ತಿದ್ದ ಮಂಜುಗೆ ಈಗ ದೊಡ್ಡ ಆಫರ್ಗಳು ಬರುತ್ತಿವೆ. ಇವರು ದೊಡ್ಮನೆಯಿಂದ ಹೊರಬಂದ ಮೇಲೆ ಹೆಚ್ಚಾಗಿ ಯಾರ ಕಣ್ಣಿಗೂ ಕಾಣಿಸಲಿಲ್ಲ. ಒಮ್ಮೆ ಗೆಳತಿ ಗೌತಮಿ ಜಾಧವ್ ಜೊತೆಗೆ ವನದುರ್ಗಾ ದೇವಸ್ಥಾನಕ್ಕೆ ಹಾಗೂ ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದರಷ್ಟೆ.
ಅದುಬಿಟ್ಟರೆ ಉಗ್ರಂ ಮಂಜು ಯಾವುದೇ ಪ್ರೊಗ್ರಾಂನಲ್ಲಿ ಕಾಣಿಸಿಕೊಂಡಿಲ್ಲ. ಬಿಬಿಕೆ 11ರ ಹೆಚ್ಚಿನ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿದ್ದಾರೆ. ಅತ್ತ ತ್ರಿವಿಕ್ರಮ್, ಅನುಷಾ ರೈ ಹಾಗೂ ಭವ್ಯಾ ಗೌಡ ಸಿಸಿಎಲ್ ಮ್ಯಾಚ್ನಲ್ಲಿ ಮೊನ್ನೆಯಷ್ಟೆ ಕಾಣಿಸಿಕೊಂಡಿದ್ದರು. ಆದರೆ, ಉಗ್ರಂ ಮಂಜು ಅವರು ಎಲ್ಲಿದ್ದಾರೆ ಎಂಬ ಕುತೂಹಲ ಅನೇಕರಲ್ಲಿತ್ತು. ಅದಕ್ಕೀಗ ಒಂದು ಫೋಟೋದ ಮೂಲಕ ಉತ್ತರ ಸಿಕ್ಕಿದೆ.
ಮಂಜು ಅವರಿಗೆ ಈಗ ಆಫರ್ಗಳು ಹುಡುಕಿ ಬರುತ್ತಿವೆ. ಅವರು ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುದೀಪ್ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ಜಿಮ್ಮಿ ಕೆಲಸಗಳು ವಿಳಂಬ ಆಗಿದೆ. ಹೀಗಾಗಿ, ಮ್ಯಾಂಗೋ ಪಚ್ಚ ಅವರ ಮೊದಲ ಸಿನಿಮಾ ಆಗಲಿದೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಆರಂಭ ಆಗಿದೆ. ಉಗ್ರಂ ಮಂಜು ಅವರು ಈ ಸಿನಿಮಾ ಸೆಟ್ನಲ್ಲಿ ಸೇರಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮ್ಯಾಕ್ಸ್ ಸಿನಿಮಾದಲ್ಲಿ ಉಗ್ರಂ ಮಂಜು ಸೂಪರ್ ಆಗಿ ಆ್ಯಕ್ಟ್ ಮಾಡಿದ್ದರು. ಸುದೀಪ್ ಜೊತೆಗೆಯೇ ಅಬ್ಬರಿಸಿದ್ದರು. ಖಡಕ್ ಆಗಿಯೇ ಡೈಲಾಗ್ ಹೇಳಿದ್ದಾರೆ. ಹಾಗಾಗಿಯೇ ಈ ಒಂದು ಚಿತ್ರದಿಂದ ಉಗ್ರಂ ಮಂಜು ಇದೀಗ ಮ್ಯಾಕ್ಸ್ ಮಂಜು ಕೂಡ ಆಗಿದ್ದಾರೆ. ಇವರ ಸಿನಿಮಾ ಜರ್ನಿಯಲ್ಲಿ ಮ್ಯಾಕ್ಸ್ ತುಂಬಾನೆ ಮಹ್ವತದ ಚಿತ್ರ ಆಗಿದೆ. ಇದೀಗ ಸುದೀಪ್ ಅಳಿಯ ಸಂಚಿತ್ ಸಂಜೀವ್ ಸಿನಿಮಾದಲ್ಲಿ ಮತ್ತೊಂದು ಮುಖ್ಯ ಪಾತ್ರ ಸಿಕ್ಕಿದೆ. ಇದು ಯಾವ ರೀತಿಯ ಪಾತ್ರ?, ಇಲ್ಲೂ ಪೊಲೀಸ್ ಆಫೀಸರಾ? ಎಂಬುದು ಮುಂದಿನ ದಿನಗಳಲ್ಲಿ ತಿಳಿದುಬರಬೇಕಿದೆ.
Kannada TRP: ಸರಿಗಮಪದ ಹತ್ತಿರವೂ ಬಾರದ ಮಜಾ ಟಾಕೀಸ್-ಬಾಯ್ಸ್ vs ಗರ್ಲ್ಸ್: ಇಲ್ಲಿದೆ TRP ಲೆಕ್ಕ