Kannada TRP: ಸರಿಗಮಪದ ಹತ್ತಿರವೂ ಬಾರದ ಮಜಾ ಟಾಕೀಸ್-ಬಾಯ್ಸ್ vs ಗರ್ಲ್ಸ್: ಇಲ್ಲಿದೆ TRP ಲೆಕ್ಕ
ಈ ವರ್ಷದ ಐದನೇ ವಾರದ ಟಿಆರ್ಪಿ ಲೆಕ್ಕ ಹೊರ ಬಿದ್ದಿದೆ. ಕಲರ್ಸ್ ಕನ್ನಡದಲ್ಲಿ ಶುರುವಾದ ಮಜಾ ಟಾಕೀಸ್ಗೆ ಗ್ರ್ಯಾಂಡ್ ಓಪನಿಂದ ದಿನ ಹೇಳಿಕೊಳ್ಳುವಂತಹ ಟಿವಿಆರ್ ಬಂದಿಲ್ಲ. ಕನ್ನಡ ಟಿವಿ ಎಕ್ಸ್ಕ್ಲೂಸಿವ್ ಇನ್ಸ್ಟಾದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಫೆಬ್ರವರಿ ಮೊದಲ ಬಾರಿ ಮಜಾ ಟಾಕೀಸ್ಗೆ 4.3 ಟಿವಿಆರ್ ಸಿಕ್ಕಿದೆಯಷ್ಟೆ.

Kannada TRP

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 ಮುಗಿದ ಬಳಿಕ ಎರಡು ಹೊಸ ಶೋಗಳು ಆರಂಭವಾಗಿದೆ. ಸೃಜನ್ ಲೋಕೇಶ್ ನೇತೃತ್ವದಲ್ಲಿ ಮಜಾ ಟಾಕೀಸ್ ಫೆಬ್ರವರಿ 1 ರಂದು ಪ್ರಾರಂಭವಾಗಿತ್ತು. ಮತ್ತೊಂದು ಹೊಸ ರಿಯಾಲಿಟಿ ಶೋ ಬಾಯ್ಸ್ vs ಗರ್ಲ್ಸ್ ಕೂಡ ಶುರುವಾಗಿದೆ. ಅನುಪಮಾ ಗೌಡ ಸಾರಥ್ಯದಲ್ಲಿ ಆರಂಭವಾಗಿರುವ ಈ ಶೋನಲ್ಲಿ ಬಹುತೇಕ ಎಲ್ಲ ಸ್ಪರ್ಧಿಗಳು ಬಿಗ್ ಬಾಸ್ನಿಂದ ಬಂದವರೇ ಆಗಿದ್ದಾರೆ. ಇದರ ಜೊತೆಗೆ ಅನೇಕ ಹೊಸ ಧಾರಾವಾಹಿಗಳು ಕೂಡ ಮೋಡಿ ಮಾಡುತ್ತಿದೆ. ಇದೀಗ ಕಿರುತೆರೆ ಲೋಕದ ಟಿಆರ್ಪಿ ಲೆಕ್ಕಚಾರ ಹೊರಬಿದ್ದಿದ್ದು, ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ?, ರಿಯಾಲಿಟಿ ಶೋಗೆ ಯಾವ ರೀತಿಯ ಪ್ರತಿಕ್ರಿಯೆ ಬಂದಿದೆ ಎಂಬುದನ್ನು ನೋಡೋಣ.
ಈ ವರ್ಷದ ಐದನೇ ವಾರದ ಟಿಆರ್ಪಿ ಲೆಕ್ಕ ಹೊರ ಬಿದ್ದಿದೆ. ಕಲರ್ಸ್ ಕನ್ನಡದಲ್ಲಿ ಶುರುವಾದ ಮಜಾ ಟಾಕೀಸ್ಗೆ ಗ್ರ್ಯಾಂಡ್ ಓಪನಿಂದ ದಿನ ಹೇಳಿಕೊಳ್ಳುವಂತಹ ಟಿವಿಆರ್ ಬಂದಿಲ್ಲ. ಕನ್ನಡ ಟಿವಿ ಎಕ್ಸ್ಕ್ಲೂಸಿವ್ ಇನ್ಸ್ಟಾದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಫೆಬ್ರವರಿ ಮೊದಲ ಬಾರಿ ಮಜಾ ಟಾಕೀಸ್ಗೆ 4.3 ಟಿವಿಆರ್ ಸಿಕ್ಕಿದೆಯಷ್ಟೆ. ಅತ್ತ ಮತ್ತೊಂದು ಹೊಸ ರಿಯಾಲಿಟಿ ಶೋ ಬಾಯ್ಸ್ vs ಗರ್ಲ್ಸ್ ಕೂಡ 4.3 ಟಿವಿಆರ್ ಪಡೆದುಕೊಂಡಿದೆ.
ಆದರೆ, ಇವರ ಮುಂದೆ ಸರಿಗಮಪ ಶೋ ತಲೆ ಎತ್ತಿ ನಿಂತಿದೆ. ಶ್ರುತಿ, ಸುಧಾರಾಣಿ, ತಾರಾ ಮೊದಲಾದ ಸೆಲೆಬ್ರಿಟಿಗಳು ಸರಿಗಮಪ ಶೋಗೆ ಬಂದಿದ್ದ ವಾರಂತ್ಯದಲ್ಲಿ 10.6 ಟಿವಿಆರ್ ಸಿಕ್ಕಿದೆ. ಈ ಮೂಲಕ ಜನರು ಈ ಶೋನ ಮೆಚ್ಚಿಕೊಂಡಿದ್ದು ಸ್ಪಷ್ಟವಾಗಿದೆ. ಇನ್ನು ಧಾರಾವಹಿಗಳ ವಿಚಾರಕ್ಕೆ ಬರುವುದಾದರೆ, ನಗರ ಹಾಗೂ ಗ್ರಾಮಗಳ ಟಿಆರ್ಪಿಯನ್ನು ಪರಿಗಣಿಸಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಇದು 8.4 ಟಿವಿಆರ್ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಸ್ಥಾನ ಪಡೆದುಕೊಂಡಿದೆ. ಇದರ ಟಿವಿಆರ್ 8.1 ಆಗಿದೆ. ಮೂರನೇ ಸ್ಥಾನದಲ್ಲಿ ಅಣ್ಣಯ್ಯ ಧಾರಾವಾಹಿ ಇದೆ. ಈ ಧಾರಾವಾಹಿಗಳಿಗೆ ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ.
ಸದ್ಯ ಹೊಸದಾಗಿ ಪ್ರಸಾರ ಕಾಣುತ್ತಿರುವ ಧಾರಾವಾಹಿಗಳು ಈ ಹಳೆಯ ಧಾರಾವಾಹಿಗಳ ಜೊತೆ ಸ್ಪರ್ಧೆಗೆ ಇಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ನಾಲ್ಕನೇ ಸ್ಥಾನದಲ್ಲಿ ನಾನಿನ್ನ ಬಿಡಲಾರೆ ಧಾರಾವಾಹಿ ಇದೆ. ಇದು 7.6 ಟಿವಿಆರ್ ಪಡೆದುಕೊಂಡಿದೆ. ಇತ್ತೀಚೆಗಷ್ಟೆ ಆರಂಭವಾದ ಈ ಧಾರಾವಾಹಿ ವೀಕ್ಷಕರನ್ನು ಹಿಡಿದಿಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಧಾರಾವಾಹಿಯ ಗ್ರಾಫಿಕ್ಸ್ ಹಾಗೂ ಮೇಕಿಂಗ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಮುಂದಿನ ದಿನಗಳಲ್ಲಿ ನಂಬರ್ ಒನ್ ಸ್ಥಾನ ಪಡೆದರೆ ಅಚ್ಚರಿ ಪಡಬೇಕಿಲ್ಲ.
ಇನ್ನು ಐದನೇ ಸ್ಥಾನದಲ್ಲಿ ಅಮೃತಧಾರೆ ಧಾರಾವಾಹಿ ಇದೆ. ಈ ಧಾರಾವಾಹಿ ಕಳೆದ ಕೆಲವು ವರ್ಷಗಳಿಂದ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ಪ್ರಮುಖ ಟ್ವಿಸ್ಟ್ಗಳು ಇದ್ದು, ಎಲ್ಲರ ಮೆಚ್ಚುಗೆ ಪಡೆದಿದೆ. ಹೀಗಾಗಿ ಟಾಪ್ 5ರಲ್ಲಿ ಧಾರಾವಾಹಿಗೆ ಸ್ಥಾನ ಸಿಕ್ಕಿದೆ. ಆದರೆ, ಆರಂಭದಲ್ಲಿ ಸಾಕಷ್ಟು ಜನರು ಇಷ್ಟಪಟ್ಟಿದ್ದ ಸೀತಾರಾಮ ಧಾರಾವಾಹಿ ಈಗ ನೆಲ ಕಚ್ಚಿದೆ. ಇದಕ್ಕೆ ಕೇವಲ 2.6 ಟಿವಿಆರ್ ಸಿಕ್ಕಿದೆಯಷ್ಟೆ. ಅಂತೆಯೆ ಈ ಹಿಂದೆ ನಂಬರ್ ಸ್ಥಾನವನ್ನು ಆಳಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಈಗ 4.7 ಟಿವಿಆರ್ ಪಡೆದುಕೊಂಡು ಕುಸಿದಿದೆ.
Trivikram BBK 11: ಪಕ್ಕಾ ಕ್ರಿಕೆಟ್ ಶಾಟ್: ತ್ರಿವಿಕ್ರಮ್ ಬ್ಯಾಟಿಂಗ್ ಕಂಡು ಶಾಕ್ ಆದ ಫ್ಯಾನ್ಸ್- VIDEO