ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Coolie Updates: ʼಕೂಲಿʼ ಸಿನಿಮಾದಲ್ಲಿನ ಆಮೀರ್‌ ಖಾನ್ ಪಾತ್ರ ರಿವೀಲ್ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ

ಕಾಲಿವುಡ್‌ನ ʼಕೂಲಿʼ ಚಿತ್ರದಲ್ಲಿ ಬಾಲಿವುಡ್ ನಟ ಆಮೀರ್‌ ಖಾನ್ ಕೂಡ ಸ್ಟಾರ್ ನಟರ ಜತೆಗೆ ಸ್ಕ್ರೀನ್ ಹಂಚಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ. ನಟರ ಪಾತ್ರಗಳ ಬಗ್ಗೆ ಇಷ್ಟು ದಿನ ರಹಸ್ಯ ಕಾಯ್ದುಕೊಂಡ ಚಿತ್ರತಂಡ ಈಗ ಒಂದೊಂದೆ ವಿಚಾರ ರಿವಿಲ್ ಮಾಡುತ್ತಿದೆ. ಸ್ವತಃ ಉಪೇಂದ್ರ ಅವರೇ ʼಕೂಲಿʼ ಸಿನಿಮಾದಲ್ಲಿ ಆಮೀರ್‌ ಖಾನ್ ಇರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ.‌

ʼಕೂಲಿʼ ಚಿತ್ರಕ್ಕೆ ಆಮೀರ್‌ ಖಾನ್ ಎಂಟ್ರಿ; ಕನ್ಫರ್ಮ್ ಮಾಡಿದ ಉಪೇಂದ್ರ

Coolie updates

Profile Pushpa Kumari Apr 16, 2025 4:58 PM

ಚೆನ್ನೈ: ಸೂಪರ್ ಸ್ಟಾರ್‌ ರಜನಿಕಾಂತ್ (Rajinikanth) ಅಭಿನಯದ ʼಕೂಲಿʼ ಸಿನಿಮಾ ಬಗ್ಗೆ ಆಗಾಗ ಹೊಸ ವಿಚಾರ ಹೊರ ಬರುತ್ತಲೇ ಇದೆ. ರಿಯಲ್ ಸ್ಟಾರ್ ಉಪೇಂದ್ರ (Upendra) ಇದೇ ಸಿನಿಮಾದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬಾಲಿವುಡ್ ನಟ ಆಮೀರ್‌ ಖಾನ್ (Aamir Khan) ಕೂಡ ಇದೇ ಸಿನಿಮಾದಲ್ಲಿ ಸ್ಟಾರ್ ನಟರ ಜತೆಗೆ ಸ್ಕ್ರೀನ್ ಹಂಚಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ. ನಟರ ಪಾತ್ರಗಳ ಬಗ್ಗೆ ಇಷ್ಟು ದಿನ ರಹಸ್ಯ ಕಾಯ್ದುಕೊಂಡ ಚಿತ್ರ ತಂಡ ಈಗ ಒಂದೊಂದೆ ವಿಚಾರ ರಿವಿಲ್ ಮಾಡುತ್ತಿದೆ. ಸ್ವತಃ ಉಪೇಂದ್ರ ಅವರೇ ʼಕೂಲಿʼ ಸಿನಿಮಾದಲ್ಲಿ ಆಮೀರ್‌ ಖಾನ್ ಇರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ.‌ ಈ ಮೂಲಕ ಒಂದೇ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್, ನಾಗರ್ಜುನ ಅಕ್ಕಿನೇನಿ, ರಿಯಲ್ ಸ್ಟಾರ್ ಉಪೇಂದ್ರ, ಬಾಲಿವುಡ್ ಖ್ಯಾತ ನಟ ಆಮೀರ್‌ ಖಾನ್ ಜತೆಯಾಗಿ ನಟಿಸಿರುವುದು ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದೆ.

ನಟ ಉಪೇಂದ್ರ ತಮ್ಮ ಅಭಿನಯದ ʼ45ʼ ಕನ್ನಡ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಚಿತ್ರದ ಪ್ರಚಾರದ ಸಂದರ್ಭ ರಜನಿಕಾಂತ್‌ ಅವರೊಂದಿಗೆ ʼಕೂಲಿʼ ಚಿತ್ರದಲ್ಲಿ ನಟಿಸಿದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಜತೆಗೆ ಕೆಲಸ ಮಾಡಿರುವುದು ಅದ್ಭುತ ಅನುಭವ ನೀಡಿದೆ. ನಾಗಾರ್ಜುನ ಮತ್ತು ಆಮೀರ್‌ ಖಾನ್ ಜತೆಗೆ ಅಭಿನಯಿಸಲು ಅವಕಾಶ ಸಿಕ್ಕಿರುವುದು ಅದೃಷ್ಟವಿದ್ದಂತೆ ಎಂದು ತಿಳಿಸಿದ್ದಾರೆ. ಸಿನಿಮಾದಲ್ಲಿ ತನ್ನ ಪಾತ್ರ, ಕಥೆಯ ವಿಷಯ ವಸ್ತುಗಳ ಬಗ್ಗೆ ಹೆಚ್ಚಾಗಿ ಯಾವುದನ್ನು ಹಂಚಿಕೊಳ್ಳದೆ ಗೌಪ್ಯವಾಗಿಟ್ಟಿದ್ದಾರೆ.

ಆ್ಯಕ್ಷನ್ ಥ್ರಿಲ್ಲರ್ ʼಯುಐʼ ರಿಲೀಸ್ ಬಳಿಕ ನಟ ಉಪೇಂದ್ರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ʼ45ʼ ಚಿತ್ರ ಕೂಡ ಪ್ರಚಾರದ ಹಂತದಲ್ಲಿದೆ. ಆ ಬಳಿಕ‌ ʼಕೂಲಿʼ ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ರಜನಿಕಾಂತ್ ಜತೆಗೆ ಮಿಂಚಲಿದ್ದಾರೆ. ಇದರೊಂದಿಗೆ ʼಬುದ್ಧಿವಂತ 2ʼ ಸೇರಿ ಇತರ ಕೆಲವು ಪ್ರಾಜೆಕ್ಟ್‌ನಲ್ಲಿ ಕೂಡ ನಟ ರಿಯಲ್ ಸ್ಟಾರ್ ಉಪೇಂದ್ರ‌ ಬ್ಯುಸಿ ಯಾಗಿದ್ದಾರೆ. ಈ ನಡುವೆ ಮುಂಬರುವ ʼಕೂಲಿʼ ಸಿನಿಮಾದಲ್ಲಿ ಆಮೀರ್‌ ಖಾನ್ ಸಹ ಇದ್ದಾರೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಇದನ್ನು ಓದಿ: Coolie Movie: ಸೂಪರ್​ ಸ್ಟಾರ್ ರಜನಿಕಾಂತ್‌ ಅಭಿಮಾನಿಗಳಿಗೆ ಗುಡ್​ನ್ಯೂಸ್; ʼಕೂಲಿ' ಚಿತ್ರದ ರಿಲೀಸ್ ಡೇಟ್ ಅನೌನ್ಸ್

ಆಮೀರ್‌​ ಖಾನ್​ ಮತ್ತು ರಜನಿಕಾಂತ್ ಈ ಹಿಂದೆ ʼಆತಂಕ್​ ಹಿ ಆತಂಕ್ʼ ಚಿತ್ರದಲ್ಲಿ ನಟಿಸಿದ್ದರು. 1995ರಲ್ಲಿ ಈ ಚಿತ್ರ ಬಿಡುಗಡೆ ಆಗಿತ್ತು. ಇದೀಗ 30 ವರ್ಷಗಳ ಬಳಿಕ ಅವರಿಬ್ಬರು ಜತೆ ಸೇರಿ ದೊಡ್ಡ ತಾರಾ ಬಳಗದೊಂದಿಗೆ ʼಕೂಲಿʼ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ʼಕೂಲಿʼ ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ಆಮೀರ್‌ ಖಾನ್ ಭೇಟಿ ಮಾಡಿ, ಮಾತುಕತೆ ನಡೆಸಿದ್ದ ಫೋಟೊ ಕೂಡ ವೈರಲ್ ಆಗಿದ್ದು ಇದೀಗ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ.

ʼಕೂಲಿʼ ಹೆಸರೇ ಹೇಳುವಂತೆ ಕಾರ್ಮಿಕರಿಗೆ ಸಂಬಂಧಿಸಿದ ಕಥೆಯಾಗಿದೆ. ಈ ಕಾರಣದಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಮೇ 1ಕ್ಕೆ ರಿಲೀಸ್ ಮಾಡುವ ಯೋಜನೆ ಇತ್ತು. ಆದರೆ ಶೂಟಿಂಗ್ ಕೆಲಸ ಬಾಕಿ ಇರುವುದರಿಂದ ರಿಲೀಸ್ ಡೇಟ್ ಮುಂದೂಡಲಾಗಿದೆ. ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ ʼಕೂಲಿʼ ಸಿನಿಮಾ ಚಿತ್ರೀಕರಣವು ಕೊನೆಯ ಹಂತಕ್ಕೆ ತಲುಪಿದ್ದು, ʼಕೂಲಿʼ ಆ. 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.