ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮುಸ್ಲಿಂ ಹುಡುಗನ ಜೊತೆ ಮದುವೆಗೆ ನೋ ಎಂದ ಉರ್ಫಿ ಜಾವೇದ್; ವೈರಲ್‌ ಆಯ್ತು ಹಳೆಯ ವಿಡಿಯೊ

ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ. ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಕೆ ಈ ರೀತಿ ಹೇಳಿಕೆ ನೀಡಿದ್ದು, ಇದೀಗ ಆ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

ಇಸ್ಲಾಂ ಧರ್ಮದ ಮೇಲೆ ನಂಬಿಕೆ ಇಲ್ಲವೆಂದ ಉರ್ಫಿ ಜಾವೇದ್‌

urfi javed

Profile pavithra Feb 6, 2025 8:57 AM

ಮುಂಬೈ: ಬೋಲ್ಡ್ ಫ್ಯಾಷನ್ ಆಯ್ಕೆಗಳು ಮತ್ತು ಹೇಳಿಕೆಗಳ ಮೂಲಕವೇ ಹೆಸರುವಾಸಿಯಾದ ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ಈ ಬಾರಿ ಮದುವೆ ಮತ್ತು ಧರ್ಮದ ಬಗ್ಗೆ ಆಕೆ ನೀಡಿದ ಹೇಳಿಕೆ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ. ವೈರಲ್‌ ಆದ ವಿಡಿಯೊದಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು ಉರ್ಫಿ ಕಡ್ಡಿ ತುಂಡುಮಾಡಿದಂತೆ ಹೇಳಿದ್ದಾಳೆ.

ಹಿಂದೆ ನಡೆದ ಮಾಧ್ಯಮ ಸಂದರ್ಶನದಲ್ಲಿ, ಉರ್ಫಿ ಇಸ್ಲಾಂ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮತ್ತು ಸಮುದಾಯದಿಂದ ಆಕೆ ಎದುರಿಸುತ್ತಿರುವ ಟೀಕೆಗಳ ಬಗ್ಗೆ ಬಹಿರಂಗವಾಗಿಯೇ ಹೇಳಿದ್ದಳು. "ನಾನು ಮುಸ್ಲಿಂ ಹುಡುಗಿ. ನಾನು ಸ್ವೀಕರಿಸುವ ಹೆಚ್ಚಿನ ಬ್ಯಾಡ್‍ ಕಾಮೆಂಟ್‍ಗಳು ಮುಸ್ಲಿಂನಿಂದಲೇ ಬಂದಿವೆ. ನಾನು ಇಸ್ಲಾಂನ ಗೌರವಕ್ಕೆ ಧಕ್ಕೆ ತರುತ್ತಿದ್ದೇನೆ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ. ಮುಸ್ಲಿಂ ಪುರುಷರು ತಮ್ಮ ಸಮುದಾಯದ ಮಹಿಳೆಯರನ್ನು ನಿಯಂತ್ರಿಸಲು ಬಯಸುತ್ತಾರೆ. ಈ ಕಾರಣದಿಂದಾಗಿ ನಾನು ಇಸ್ಲಾಂ ಧರ್ಮವನ್ನು ನಂಬುವುದಿಲ್ಲ” ಎಂದು ಆಕೆ ರಾಜಾರೋಷದಿಂದ ಹೇಳಿದ್ದಾಳೆ.

ಅಂತರ್ಧರ್ಮೀಯ ಸಂಬಂಧಗಳ ಬಗ್ಗೆ ಕೇಳಿದಾಗ, "ನಾನು ಎಂದಿಗೂ ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ ಹಾಗೇ ಇಸ್ಲಾಂ ಧರ್ಮವನ್ನು ಕೂಡ ನಂಬುವುದಿಲ್ಲ ಮತ್ತು ನಾನು ಯಾವುದೇ ಧರ್ಮವನ್ನು ಅನುಸರಿಸುವುದಿಲ್ಲ, ಆದ್ದರಿಂದ ನಾನು ಯಾರನ್ನು ಪ್ರೀತಿಸುತ್ತೇನೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆಕೆ ಹೇಳಿದ್ದಾಳೆ.

ಹಾಗೇ ನನ್ನ ಕುಟುಂಬವು ನನ್ನ ಆಯ್ಕೆಗಳನ್ನು ಗೌರವಿಸುತ್ತದೆ ಎಂದು ಕೂಡ ಹೇಳಿದ್ದಾಳೆ. "ನನ್ನ ತಾಯಿ ತುಂಬಾ ಧಾರ್ಮಿಕ ಮಹಿಳೆ, ಆದರೆ ಆಕೆ ಎಂದಿಗೂ ತಮ್ಮ ಧರ್ಮದ ವಿಚಾರಕ್ಕೆ ನಮ್ಮ ಮೇಲೆ ಒತ್ತಡ ಹೇರಿಲ್ಲ. ನನ್ನ ಒಡಹುಟ್ಟಿದವರು ಇಸ್ಲಾಂ ಅನ್ನು ಅನುಸರಿಸುತ್ತಾರೆ. ಆದರೆ ನಾನು ಹಾಗೇ ಮಾಡುವುದಿಲ್ಲ, ಅವರು ಕೂಡ ಈ ಬಗ್ಗೆ ಎಂದಿಗೂ ನನ್ನ ಮೇಲೆ ಒತ್ತಡ ಹೇರಿಲ್ಲ. ನಿಮ್ಮ ಧರ್ಮವನ್ನು ನಿಮ್ಮ ಹೆಂಡತಿ ಮತ್ತು ಮಕ್ಕಳ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ ಎಂದಿದ್ದಾಳೆ

ಈ ಸುದ್ದಿಯನ್ನೂ ಓದಿ: Urfi Javed: ಮಹಿಳೆಯರ ಬಟ್ಟೆ ಬಗ್ಗೆ ಕಾಮೆಂಟ್‌ ಮಾಡಿದ ಉದ್ಯಮಿಗೆ ಉರ್ಫಿ ಜಾವೇದ್ ತಿರುಗೇಟು

ಉರ್ಫಿ ಜಾವೇದ್ ಕೊನೆಯ ಬಾರಿಗೆ ಸಮಯ್ ರೈನಾ ಅವರ ಇಂಡಿಯಾಸ್ ಗೋ ಲ್ಯಾಂಟೆಂಟ್ ಶೋನಲ್ಲಿ ಕಾಣಿಸಿಕೊಂಡಿದ್ದಾಳೆ.